ಫರಿದಖಾನವಾಡಿಯಲ್ಲಿ ಅದ್ದೂರಿಯಾಗಿ 76ನೇ ಗಣರಾಜ್ಯೋತ್ಸವ ಆಚರಣೆ
ಬೆಳಗಾವಿ : ನಮ್ಮೂರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಫರಿದಖಾನವಾಡಿ ಯಲ್ಲಿ ಅದ್ದೂರಿಯಾಗಿ 76 ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಾತ್ಮಾಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಫರಿದಖಾನವಾಡಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮೆರವಣಿಗೆ ಮಾಡಿದರು.
ಸ್ವಾಗತ ಭಾಷಣವನ್ನು ಬಿ.ಎಸ್ ಜುಗಳ ಅವರು ಮಾಡಿದರು. ಮನೋಹರ ಕಾಂಬಳೆ, ಶಂಕರ ಕಡಗೇರಿ, ಪುರಸಭೆ ಸದಸ್ಯರಾದ ಶೈಲಾಮಾದರ, ರಾಮಚಂದ್ರ ಧೋರುಸೆ, ವ್ಹಿ.ಆರ್.ಪಾಟೀಲ್, ಎಮ್.ಎಲ್.ಹುಲ್ಲೋಳಿ ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮದ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.