ಬೆಳಗಾವಿಯಲ್ಲಿ ಪ್ರಚಾರ ಕಣಕ್ಕೆ ಧುಮುಕಿದ ಕಾಂಗ್ರೆಸ್ ಪಡೆ. ಈ ವಾಹನದಲ್ಲಿ ಸತೀಶ್ ಜಾರಕಿಹೊಳಿ ಇಡೀ ಜಿಲ್ಲೆಯಲ್ಲಿ ಚುನಾವಣೆ ಪ್ರಚಾರ ಮಾಡಲಿದ್ದಾರೆ
ಬೆಳಗಾವಿಯಲ್ಲಿ ಪ್ರಚಾರ ಕಣಕ್ಕೆ ಧುಮುಕಿದ ಕಾಂಗ್ರೆಸ್ ಪಡೆ. ಸತೀಶ ಜಾರಕಿಹೊಳಿ ಪ್ರಚಾರ ವಾಹನಕ್ಕೆ ಚಾಲನೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಪ್ರಚಾರ ವಾಹನಕ್ಕೆ ಉದ್ಘಾಟನೆ ಮಾಡಲಾಯಿತು. ರಿಬ್ಬನ್ ಕಟ್ ಮಾಡಿ ಕಾಂಗ್ರೆಸ್ ಪಕ್ಷದ ಬಾವುಟ ಪ್ರದರ್ಶಿಸಿ ಚಾಲನೆ ನೀಡಿದ ಸಿದ್ದು. ಚಾಲನೆ ನಂತರ ಪ್ರಚಾರ ವಾಹನ ಏರಿ ಸಿದ್ದರಾಮಯ್ಯ ಸಾಂಕೇತಿಕ ಭಾಷಣ ಮಾಡಿದರು.
ಈ ವಾಹನದಲ್ಲಿ ಸತೀಶ್ ಜಾರಕಿಹೊಳಿ ಇಡೀ ಜಿಲ್ಲೆಯಲ್ಲಿ ಚುನಾವಣೆ ಪ್ರಚಾರ ಮಾಡಲಿದ್ದಾರೆ. ಬೆಳಗಾವಿ ಜಿಲ್ಲೆಯ 18 ರಲ್ಲಿ 15 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ. ಬೆಳಗಾವಿಗೆ ಬಂದಾಗ ನನಗೂ ಕೊಡ್ತಾರೆ, ರಾಹುಲ ಗಾಂಧಿ ಬಂದಾಗ ಅವರಿಗೂ ಕೊಡ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ, ಡಿಕೆ ಶಿವಕುಮಾರ್ ಗೆ ಕೊಡ್ತಾರೆ ಎಂದು ಹಾಸ್ಯ ಮಾಡಿದ ಸಿದ್ದು.
ಇವಾಗ ಕಾಂಗ್ರೆಸ್ ಪರವಾದ ವಾತಾವರಣವಿದೆ ಎಲ್ಲ ಕಡೆ ಕಾಂಗ್ರೆಸ್ ಗಾಳಿ ಬೀಸುತ್ತಾ ಇದೆ. ಬಿಜೆಪಿ ಮಾಡಿರುವ ಭ್ರಷ್ಟಾಚಾರ, ದುರಾಡಳಿತ ಜನ ಬೇಸತ್ತಿದ್ದಾರೆ ಬಿಜೆಪಿ ವಿರುದ್ಧವಾದ ಅಲೆ ಇದೆ.ಬನಮ್ಮ ಐದು ಗ್ಯಾರಂಟಿ ಮೇಲೆ ಜನರಿಗೆ ನಂಬಿಕೆ ಬಂದಿದೆ. ಬೆಳಗಾವಿ ದೊಡ್ಡ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ತಿವಿ ಅನ್ನುವ ವಿಶ್ವಾಸ ಇದೆ. ಇಂದು ಅತ್ಯಂತ ಸಂತೋಷದಿಂದ ಪ್ರಚಾರವನ್ನು ಪ್ರಚಾರಕ್ಕೆ ಉದ್ಘಾಟನೆ ಮಾಡಿದ್ದೇನೆ ಎಂದ ಸಿದ್ದು.