ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎಂಬ ಪ್ರಶ್ನೆಗೆ ಗೊತ್ತಿಲ್ಲಾ ಎಂದು ತೆರಳಿದ ಸಿದ್ದರಾಮಯ್ಯ.
ಬೆಳಗಾವಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ. ಇವತ್ತು ಬೆಳಗಾವಿಯ ಐದು ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಯಾಗಲಿದೆ. ಈಗಾಗಲೇ ಚುನಾವಣಾ ಪ್ರಚಾರ ಪ್ರಾರಂಭ ಮಾಡಲಾಗಿದೆ. ಇವತ್ತು ಹಳಿಯಾಳ, ಕನಕಗಿರಿ, ಯಲಬುರ್ಗಾದಲ್ಲಿ ಪ್ರಚಾರ ಮಾಡುವೆ.
ಲಕ್ಷ್ಮಣ ಸವದಿಗೆ ಚುನಾವಣೆ ಉಸ್ತುವಾರಿ ಕುರಿತು ಹೇಳಿಕೆ ನೀಡಿದ ಸಿದ್ದರಾಮಯ್ಯ, ಈಗಾಗಲೇ ಅವರೇ ಹೇಳಿದಂತೆ ಚುನಾವಣೆಯಲ್ಲಿ ನನ್ನನ್ನ ಎಲ್ಲಿಬೇಕಾದ್ರೂ ಬಳಸಿಕೊಳ್ಳಬಹುದು ಎಂದಿದ್ದಾರೆ. ಬೆಳಗಾವಿ ಸೇರಿದಂತೆ ಅನೇಕ ಕಡೆ ಅವರು ಪ್ರಚಾರ ಕೈಗೊಳ್ಳಲಿದ್ದಾರೆ. ಬೆಳಗಾವಿ ಜಿಲ್ಲೆಯಿಂದ ನಾವು ಯಾವುದೇ ಲಿಂಗಾಯತ ಮುಖಂಡರನ್ನ ಸಂಪರ್ಕ ಮಾಡಿಲ್ಲ.
ಶಾಸಕ ಅನಿಲ ಬೆನಕೆ ಕಾಂಗ್ರೆಸ್ ಸೇರ್ಪಡೆ ಕುರಿತು, ಅದರ ಬಗ್ಗೆ ನನಗೆ ಮಾಹಿತಿಯಿಲ್ಲ,ನನಗೆ ಗೊತ್ತಿಲ್ಲದೇ ನಾನು ಹೇಗೆ ಉತ್ತರ ಕೊಡಲಿ ಎಂದ ಸಿದ್ದರಾಮಯ್ಯ.
ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಬಂಡಾಯ ಶಮನ ಕುರಿತು ಹೇಳಿಕೆ. ಈಗಾಗಲೇ ಕೆಲವು ಕಡೆ ಬಂಡಾಯ ಎದ್ದಿರೋದು ನಿಜ. ಅವರನ್ನೆಲ್ಲ ಶಮನ ಮಾಡುವ ಕೆಲಸ ನಡೆದಿದೆ. ಗೋಕಾಕ ಕ್ಷೇತ್ರದಲ್ಲಿ ಅಶೋಕ ಪೂಜಾರಿ ಅವರನ್ನ ಕರೆಸಿ ಮಾತನಾಡಲಾಗಿದ್ದು, ಗೋಕಾಕ್ ನಲ್ಲಿ ಎಲ್ಲವೂ ಸರಿ ಹೋಗಲಿದೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎಂಬ ಪ್ರಶ್ನೆಗೆ ಗೊತ್ತಿಲ್ಲಾ ಎಂದು ತೆರಳಿದ ಸಿದ್ದರಾಮಯ್ಯ.