ಓ.ಪಿ.ಎಸ್ ಜಾರಿಗೊಳಿಸುವಂತೆ ಒತ್ತಾಯಿಸಿ ಬೈಕ್ ರ್ಯಾಲಿ ಮಾಡುವ ಮೂಲಕ ಸರ್ಕಾರಿ ನೌಕರರ ಬೃಹತ್ ಪ್ರತಿಭಟನೆ
ಬೆಳಗಾವಿ : ಎಲ್ಲ ಸರ್ಕಾರಿ ನೌಕರರ ಸಂಘಗಳಿಂದ ಇಂದು ಬೆಳಗಾವಿಯಲ್ಲಿ ಎನ್.ಪಿ.ಎಸ್ ತೊಲಗಿಸಿ, ಓ.ಪಿ.ಎಸ್ ಜಾರಿಗೊಳಸಬೇಕು ಹಾಗೂ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಇಂದು (ಅಕ್ಟೊಬರ್ 20) ಬೈಕ್ ರ್ಯಾಲಿ ಮಾಡುವ ಮೂಲಕ ಪ್ರತಿಭಟನೆ ಮಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಜಿಲ್ಲಾ ಘಟಕ ಬೆಳಗಾವಿಯ ಪ್ರಧಾನ ಕಾರ್ಯದರ್ಶಿಗಳಾದ ಆರ್.ವಿ.ಗೋಣಿ ಅವರು ಮಾತನಾಡಿ ದೇಶಾದ್ಯಂತ ಎನ್ ಪಿ ಎಸ್ ಜಾರಿ ಮಾಡಿದ ನಂತರ ಎನ್ ಪಿ ಎಸ್ ನಿಂದ ತೊಂದರೆ ಒಳಪಟ್ಟಿರುವ ಸರ್ಕಾರಿ ನೌಕರರು ಇಳಿ ವಯಸ್ಸಿನಲ್ಲಿ ನಿವೃತ್ತಿಯಾದ ನಂತರ ತಮ್ಮ ಜೀವನೋಪಾಯಕ್ಕಾಗಿ ಕಷ್ಟ ಪಡುವಂತ ಪರಿಸ್ಥಿತಿ ಎದುರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅದಕ್ಕಾಗಿ ದೇಶಾದ್ಯಂತ ಎನ್ ಪಿ ಎಸ್ ತೊಲಗಿಸಿ ಓಪಿಎಸ್ ಜಾರಿಗೊಳಿಸಿ ಮೊದಲು ಇರುವ ಪಿಂಚಣಿ ಯೋಜನೆಯನ್ನ ಜಾರಿಗೊಳಿಸುವಂತೆ ಪ್ರತಿಭಟನೆ ಮಾಡುತ್ತಿದ್ದೆವೆ ಎಂದರು.
ಈಗಾಗಲೇ ದೇಶದ ಐದು ರಾಜ್ಯದಲ್ಲಿ ಓ.ಪಿ.ಎಸ್ ಜಾರಿ ಗೊಳಿಸಿ ಎನ್ ಪಿ ಎಸ್ ಕಟಾವು ಮಾಡಿದ್ದಾರೆ.
ನಮ್ಮ ರಾಜ್ಯದಲ್ಲೂ ಈಗಿರುವ ಸರ್ಕಾರ ಜಾರಿ ಗೊಳಿಸುವ ಮಾತು ಕೊಟ್ಟಿದೆ.
ಆದರೆ ಅದಕ್ಕಾಗಿ ಸಂಪೂರ್ಣ ಬೆಂಬಲ ಕೇಂದ್ರ ಸರ್ಕಾರದಿಂದ ಬೇಕಾಗಿರುವುದರಿಂದ ಅಖಿಲ ಭಾರತ ಶಿಕ್ಷಕರ ಫೆಡ್ರೆಷನ್ ನೇತೃತ್ವದಲ್ಲಿ ಸರ್ಕಾರದ ಎಲ್ಲಾ ನೌಕರರ ಸಂಘ ಬೆಂಬಲದೊಂದಿಗೆ ಭಾರತ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಕನ್ಯಾಕುಮಾರಿ, ಸೋಮನಾಥಪುರ, ವಾಘಾ ಗಡಿ, ಪಶ್ಚಿಮ ಬಂಗಾಳ ನಾಲ್ಕು ಕಡೆಯಿಂದ ಭಾರತ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 5 ರಂದು ದೆಹಲಿ ಸೇರುವ ಯಾತ್ರೆ ಇದಾಗಿದೆ. ಈ ಮುಖಾಂತರ ಕೇಂದ್ರ ಸರ್ಕಾರವನ್ನ ಒತ್ತಾಯಿಸುತ್ತಿದ್ದೇವೆ ಎಂದರು.
ಎಲ್ಲಾ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಿ ಒತ್ತಾಯಿಸಲಾಗಿದೆ. ಈಗಾಗಲೇ 5 ರಾಜ್ಯದಲ್ಲಿ ನಮ್ಮ ಬೇಡಿಕೆ ಪರಿಗಣಿಸಿ ಓ.ಪಿ.ಎಸ್ ಜಾರಿ ಮಾಡಿದ್ದಾರೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ಎನ್.ಪಿ.ಎಸ್ ರದ್ದು ಪಡಿಸುತ್ತೇವೆ ಎಂದು ಭರವಸೆ ನೀಡಿತ್ತು. ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ. ಅದಕ್ಕಾ ಭಾರತ ಯಾತ್ರೆ ಯೋಜನೆ ಮಾಡಲಾಗಿದೆ.
ಲೋಕಸಭಾ ಚುನಾವಣೆ ಅವಕಾಶ : ಸದ್ಯದಲ್ಲೆ ಕೇಂದ್ರ
ಲೋಕಸಭಾ ಚುನಾವಣೆಗಳು ಇರುವುದರಿಂದ ಈ ಸಂದರ್ಭದಲ್ಲಿ ಅವಕಾಶವನ್ನು ಬಳಸಿಕೊಳ್ಳಲಾಗುತ್ತದೆ. ರಾಜ್ಯ ಸರ್ಕಾರ ಅದರ ಬಗ್ಗೆ ಚಿಂತೆ ಮಾಡಿದ್ರೆ ಕೇಂದ್ರ ಸರ್ಕಾರವು ಅದರ ಬಗ್ಗೆ ಚಿಂತನೆ ಮಾಡಬೇಕು. ನಮ್ಮ ಪ್ರಬಲವಾದ ಹಕ್ಕೊತ್ತಾಯ ಇದೆ.
ನೀವು ನೆಮ್ಮದಿಯಾಗಿ ನೋಡಿಕೊಳ್ಳಿ, ನಮ್ಮ ಬೇಡಿಕೆ ಈಡೇರಿಸಲು ಮನವಿ ಮಾಡಿಕೊಳ್ಳುತ್ತೇವೆ
ಮುಂದಿನ ಹೋರಾಟದ ರೂಪರೇಷೆಗಳ ಬಗ್ಗೆ ಅಕ್ಟೊಬರ್ 5. ರಂದು ನಿರ್ಧಾರ ಮಾಡುತ್ತೇವೆ ಎಂದು ಅವರು ಹೇಳಿದರು.