ನಾಮಿನೇಷನ ಡೇ ಅನೌನ್ಸ್ ಮಾಡಿದ ಕೆಆರಪಿಪಿ ಬೆಳಗಾವಿ ಅಭ್ಯರ್ಥಿ
KRPP belagavi candidate announced the nomination day
ರೆಡ್ಡಿ ಪಕ್ಷದಿಂದ ಕಣಕ್ಕಿಳಿದ NRE
ಬೆಳಗಾವಿ ಉತ್ತರ ಕ್ಷೇತ್ರದಲ್ಲಿ NRE ಕ್ಯಾಂಡಿಡೇಟ್ ಎಂದೇ ಪ್ರಖ್ಯಾತಿ ಪಡೆದಿರುವ ಪ್ರವೀಣ ಬ ಹಿರೇಮಠ ಅವರು ಗಾಲಿ ಜನಾರ್ದನ ರೆಡ್ಡಿ ಅವರ ಪಕ್ಷವಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದವತಿಯಿಂದ ಕಣಕ್ಕಿಳಿಯಲಿದ್ದಾರೆ.
ಈಗಾಗಲೇ ಬೆಳಗಾವಿ ಉತ್ತರದ ಮನೆ ಮಗನಾಗಿರುವ ಪ್ರವೀಣ ಒಬ್ಬ ವಿದ್ಯಾವಂತ ಅಭ್ಯರ್ಥಿ ಅಲ್ಲದೆ ಮರ್ಚೆಂಟ ನೇವಿ ಅಧಿಕಾರಿಯು ಹೌದು.
ಹಲವು ದೇಶಗಳನ್ನು ಸುತ್ತಿ ಅಲ್ಲಿನ ನೆಲ ಮತ್ತು ಅಲ್ಲಿನ ಸುಧಾರಣೆಗಳ ಬಗ್ಗೆ ತಿಳಿದಿರುವ ಪ್ರವೀಣ ಬೆಳಗಾವಿಯನ್ನು ಕೂಡ ಒಂದು ಮಾದರಿ ನಗರವನ್ನಾಗಿಸುವ ಕನಸು ಕಂಡಿರುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಎಲೆಕ್ಷನ ರಣರಂಗ ಚುರುಕಾಗಿದ್ದು ಪ್ರವೀಣ ಅವರು ಕೂಡಾ ರಾಜಕೀಯಕ್ಕೆ ದುಮುಕಿದ್ದಾರೆ ಮತ್ತು ಹಲವು ಯೋಜನೆಗಳನ್ನು ಹೊತ್ತು ಜನ ಸೇವೆ ಮಾಡುವುದಾಗಿ ತಿಳಿಸಿದ್ದಾರೆ.
ನಾಳೆ (ಸೋಮವಾರ ದಿನಾಂಕ 17ನೇ ಏಪ್ರಿಲ್ 2023) ಮದ್ಯಾಹ್ನ 3ಗಂಟೆಗೆ ತಮ್ಮ ನಾಮಿನೇಷನ್ ಮಾಡುವುದಾಗಿ ತಮ್ಮ ಟ್ವೀಟರ ಖಾತೆಯಲ್ಲಿ ಹಂಚಿ ಕೊಂಡಿರುವ ಪ್ರವೀಣ ಜನ ಬೆಂಬಲಕ್ಕಾಗಿ ಕೋರಿದ್ದಾರೆ.