ಸಿದ್ದಾಂತ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆಯಿಂದ
ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಜನತೆಗೆ ಉಪಯುಕ್ತ ಸೇವೆ ಸಿಗಲಿ: ಅಥಣಿ ಶಾಸಕ ಲಕ್ಷ್ಮಣ ಸವದಿ………..
ಅಥಣಿ ತಾಲೂಕು ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಬೆಳವಣಿಗೆಯನ್ನು ಹೊಂದುತ್ತಿದ್ದು, ಈಗ ಸಿದ್ದಾಂತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ,
ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಇಲ್ಲಿ ಪ್ರಾರಂಭವಾಗುತ್ತಿರುವುದು ಅಥಣಿ ಕ್ಷೇತ್ರದ ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಪೂರಕವಾಗಲಿದೆ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು……….
ಅಥಣಿ ಪಟ್ಟಣದ ವಿಜಯಪುರ ರಸ್ತೆಯ ಪಕ್ಕದಲ್ಲಿ ನಿರ್ಮಾಣವಾಗಿರುವ ಬೃಹತ್ ಹೈಟೆಕ್ ಮಾದರಿಯ ಸಿದ್ದಾಂತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ,
ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು………
ಅಥಣಿ ಮತಕ್ಷೇತ್ರದಲ್ಲಿ ಈಗಾಗಲೇ ಡಿಪ್ಲೊಮಾ ಕಾಲೇಜು ಸೇರಿದಂತೆ ಹಲವಾರು ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ. ಕೊಕಟನೂರಿನಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಾಗಿದ್ದು ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಿದ್ದಾರೆ……….
ಕೃಷಿ ಕಾಲೇಜು ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದೇವೆ. ಡಾಕ್ಟರ್ ಆನಂದ ಕಿರಿಶಾಳ ಹಾಗೂ ಉಮಾ ಕಿರಿಶಾಳ ದಂಪತಿಗಳು ಅಥಣಿ ನಗರದಲ್ಲಿ ಇಂತಹ ಒಂದು ಸಕಲ ಸೌಲಭ್ಯವುಳ್ಳ ಸುಸಜ್ಜಿತ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯನ್ನು ಸ್ಥಾಪನೆ ಮಾಡಿರುವದು ಈ ಭಾಗದ ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣಕ್ಕೆ ಹಾಗೂ ರೋಗಿಗಳು ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡುವ ಉತ್ತಮ ಕೆಲಸ ಮಾಡಿದ್ದಾರೆ……….
ಆದ್ದರಿಂದ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರಲ್ಲದೆ ಈ ಶಿಕ್ಷಣ ಸಂಸ್ಥೆಯು ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು……
ಈ ಸಂಸ್ಥೆಗೆ ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಅಗತ್ಯ ಸಹಾಯ ಸಹಕಾರ ನೀಡುವುದಾಗಿ ಲಕ್ಷ್ಮಣ ಸವದಿ ತಿಳಿಸಿದರು.
ವೈದ್ಯಕೀಯ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದೆ. ವಿದ್ಯಾರ್ಥಿಗಳು ಈ ಮಹಾವಿದ್ಯಾಲಯದ ಪ್ರಯೋಜನ ಪಡೆಯಬೇಕು. ಇಲ್ಲಿ ನೂರು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು ಸಂತಸದ ಸಂಗತಿಯಾಗಿದ್ದು ವೈದ್ಯರಾಗಿ ರೋಗಿಗಳಿಗೆ ಉತ್ತಮ ಚಿಕಿತ್ಸೆ, ಸೇವೆ ನೀಡಬೇಕು. ವೈದ್ಯೋ ನಾರಾಯಣೋ ಹರಿ ಅನ್ನುವ ಮಾತಿನಂತೆ ವೈದ್ಯರು ದೇವರ ಸ್ವರೂಪಿಯಾಗಿದ್ದಾರೆ ಎಂದು ಅಭಿಮತ ವ್ಯಕ್ತಪಡಿಸಿದರು….
ಡಾಕ್ಟರ್ ಆನಂದ ಕಿರಿಶಾಳ ಮಾತನಾಡಿ, ನಾನು ಬಳ್ಳಿಗೇರಿ ಗ್ರಾಮದ ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿಯಾಗಿದ್ದು, ನನಗೆ ಜನರಿಗೆ ಉತ್ತಮ, ತುರ್ತು ಆರೋಗ್ಯ ಸೇವೆ ಹಾಗೂ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವನ್ನು ಈ ಭಾಗದಲ್ಲಿ ಕಲ್ಪಿಸಬೇಕೆಂಬ ಉದ್ದೇಶ ಹೊಂದಿದ್ದೇನೆ. ಆದ್ದರಿಂದ ಅಥಣಿ ಪಟ್ಟಣದಲ್ಲಿ ಈಗ ಇದನ್ನು ಪ್ರಾರಂಭಿಸಿದ್ದು, ನೂರು ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶವನ್ನು ಪಡೆದಿದ್ದಾರೆ…… ರೋಗಿಗಳಿಗೆ ತುರ್ತು ಚಿಕಿತ್ಸೆ ಸಿಗಬೇಕು ಎಂಬ ಆಶಯ ನನ್ನದಾಗಿದೆ. ನನ್ನ ಈ ಎಲ್ಲ ಕಾರ್ಯಕ್ಕೆ ಜನತೆ ಸಹಕಾರ ನೀಡಬೇಕು ಎಂದು ವಿನಂತಿಸುವುದಾಗಿ ತಿಳಿಸಿದರು.
ಶ್ರೀ ವೇಮನಾನಂದ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅತಿಥಿಗಳಾಗಿ ಡಾಕ್ಟರ್ ಶ್ರೀನಿವಾಸ ಬನ್ನಿಗೋಳ, ಸಂತೋಷ ಯಡಹಳ್ಳಿ, ಡಾಕ್ಟರ್. ಚನ್ನಪ್ಪಾ ಸಂಕ್ರಟ್ಟಿ, ಡಾಕ್ಟರ್. ಸ್ಮಿತಾ ಆರ್. ಚೌಗಲಾ, ಡಾಕ್ಟರ್. ಮೋಹನ ಬಿರಾದರ, ಸತೀಶ ಮುಗ್ಗನ್ನವರ, ನಿಂಗಪ್ಪಾ ಕೋಖಲೆ, ಸಂತೋಷ ಕಕಮರಿ, ಅಶೋಕ ಹುಚಗೌಡರ, ಚಂದ್ರಕಾಂತ ಇಮ್ಮಡಿ, ಶ್ರೀಶೈಲ ನಾಯಿಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಂತೋಷ ಬಡಕಂಬಿ ಹಾಗೂ ಮಹಾಂತೇಶ ಕರಡಿ ಸ್ವಾಗತಿಸಿ ನಿರೂಪಿಸಿದರು.
ಹರಿಶ್ಚಂದ್ರ ವಗ್ಗಿ, VKನ್ಯೂಸ್ ಕಾಗವಾಡ