ಕುಂದಗೋಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರ ನಾಮ ಪತ್ರ ಸಲ್ಲಿಕೆ*
ಹುಬ್ಬಳ್ಳಿ : ಕುಂದಗೋಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರ ಗುರುವಾರ ಅದ್ದೂರಿಯಾಗಿ ತಮ್ಮ ನೆಚ್ಚಿನ ಸಾವಿರಾರು ಅಭಿಮಾನಿಗಳ ನಡುವೆ ನಾಮಪತ್ರ ಸಲ್ಲಿಸಿದರು.
ಗುರುವಾರ ಬೆಳಿಗ್ಗೆ ಗಾಳಿ ಮರಿಯಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆಗೈದು ಪಟ್ಟಣದ ತಮ್ಮ ಅಭಿಮಾನಿಗಳೊಂದಿಗೆ ಅದ್ದೂರಿ ರೋಡ ಶೋ ನಡೆಸಿದರು.
ಎತ್ತಿನ ಬಂಡಿ ಏರಿ ಜನರತ್ತ ಕೈಬೀಸುತ್ತಾ ಜನರಿಗೆ ಕೈ ಮುಗಿತಾ ಸಾಗಿದ ಎಸ್ ಐ ಚಿಕ್ಕನಗೌಡ್ರ ರೊಂದಿಗೆ ಮಗಳು ನಂದಾ ಚಿಕ್ಕನಗೌಡ್ರ,ಎ. ಬಿ. ಉಪ್ಪಿನ, ಶಂಕರಗೌಡ ನಿರಂಜನ ಗೌಡ್ರ, ರುದ್ರಪ್ಪ ಗಾಣಿಗೇರ್,ಮಾಣಿಕ್ಯ ಚಿಲ್ಲೋರ, ಸೇರಿದಂತೆ ಹಲವು ಮುಖಂಡರು ಸಾಥ ನೀಡಿದರು.ಪಟ್ಟಣದ ಗಾಳಿ ಮಾರಮ್ಮ ದೇವಸ್ಥಾನದ ಆರಂಭವಾದ ರೋಡ್ ಶೋ ಬಸ್ ಸ್ಟ್ಯಾಂಡ್ ಮಾರ್ಗವಾಗಿ ಮೂರ್ ಅಂಗಡಿ ಕೂಟದ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೂ ಮಾಡಲಾಯಿತು .
ಮೆರವಣಿಗೆ ಉದ್ದಕ್ಕೂ ಚಿಕ್ಕನಗೌಡರ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಹಸಿರು ಟವಲ್ ಹಾಕಿಕೊಂಡು ಬಿಸಿಲನ್ನು ಲೆಕ್ಕಿಸದೆ ಸಾಗಿದರು.ನಾಮಪತ್ರ ಸಲ್ಲಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಚಿಕ್ಕನಗೌಡರ
ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ಸಂತೋಷ ತಂದಿದೆ ಹಿಂದೆ ಶಾಸಕನಾಗಿ ಮಾಡಿರುವ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುವೆ, ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಈ ಬಾರಿ ಜನರ ಅನುಕಂಪ ನನ್ನ ಮೇಲಿದೆ ಹಾಗೂ ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಸಿ ಫಾರ್ಮ್ ಸಿಗುವ ಅಭಿಲಾಷೆವನ್ನು ವ್ಯಕ್ತಪಡಿಸಿದರು.
ಮೆರವಣಿಗೆಯಲ್ಲಿ ಎಂ ಎಚ್ ಮಾದನೂರ್, ವಿ ಡಿ ಸೀಮಿಕೆರೆ ಮಲ್ಲಿಕಾರ್ಜುನ ಕಿರೇಸೂರ, ಜಾಕಿರ್ ಹುಸೇನ್ ಯರಗುಪ್ಪಿ, ಸಲೀಂ ಕಡ್ಲಿ, ಮುಸ್ತಾಕ ಕಿಲೆದಾರ,ಎಚ್ ವಿ ಪಾಟೀಲ, ಯೂಸಫ್ ಛಡ್ಡಿ, ವೈ ಜಿ ಪಾಟೀಲ ಭಾಗವಹಿಸಿದ್ದರು.
*ವರದಿ ಕಿರಣಗೌಡ ತುಪ್ಪದಗೌಡ್ರ ಹುಬ್ಬಳ್ಳಿ*