ನಾವು ಭಾರತದ ಪ್ರಜೆಗಳು ನಮ್ಮ ಸಮಸ್ಯೆಗಳಿಗೂ ಸ್ಪಂಧಿಸಿ ಮಂಗಳಮುಖಿ ಕಿರಣ ಬೇಡಿ
ಬೆಳಗಾವಿ : ಕರ್ನಾಟಕ ಸಾರ್ವತ್ರಿಕ ಆರೋಗ್ಯ ಆಂಧೋಲನ ಇದು ರಾಜ್ಯಮಟ್ಟದ ಸಂಗಮ ಸಂಸ್ಥೆಯಾಗಿದೆ. ಈ ಸಂಸ್ಥೆ ಮಖಾಂತರ ನಾವು ನಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದೇವೆ ಎಂದು ಮಂಗಳಮುಖಿಯರ ಮುಖಂಡರಾದ ಕಿರಣ ಬೇಡಿ ಅವರು ಹೇಳಿದರು.
ಆರೋಗ್ಯ ಸಮಸ್ಯೆ ಚಿಕ್ಕ ಮಗುವಿನಿಂದ ಹಿಡಿದು, ವೃದ್ಧರವರೆಗೆ ಕಾಡುತ್ತಿದೆ. ಆರೋಗ್ಯ ಸಮಸ್ಯೆ ಪ್ರತಿಯೊಬ್ಬರಿಗೂ ಅನ್ವಯಿಸುವಂತದ್ದು, ಆದ್ದರಿಂದ ಸರ್ಕಾರದ ಚೌಕಟ್ಟಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಾಗಿರಬಹುದು, ಸಿವಿಲ್ ಆಸ್ಪತ್ರೆಗಳಾಗಿರಬಹುದು, ಟ್ರಾನ್ ಜೆಂಡರ್ಸ್ ಗಳು ಹಲವು ರೀತಿಯಲ್ಲಿ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಾರೆ.ಇಂತಹ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿಗಳ ಸ್ಪಂದಿಸುವಂತ ವರ್ತನೆ ಅಷ್ಟೊಂದು ಸರಿಯಾಗಿ ಇರುವುದಿಲ್ಲ. ತ್ರಿಲಿಂಗಿ ಗಳದ್ದು ಬೆಳಗಾವಿಯಲ್ಲಿ ಎರಡು ಸೆಂಟರ್ ಇರಬಹುದು ಅದರಲ್ಲು ಸಹ ಸರಿಯಾಗಿ ಸ್ಪಂದನೆ ಇರುವುದಿಲ್ಲ.
ಬೇರೆ ರಾಜ್ಯದಲ್ಲಿ ಹೊಲಿಸಿದರೆ ನಮ್ಮ ರಾಜ್ಯದಲ್ಲಿ ಯಾವುದೇ ಸರ್ಜರಿಗಳಿಲ್ಲ ಜಾರಿಗೆ ಇಲ್ಲ. ಕೇರಳದಲ್ಲಿ ನೋಡಿದರೆ ಆಧಾರ ಕಾರ್ಡ್ ಗಳನ್ನು ತೆಗೆದುಕೊಂದು ಅವರಿಗೆ ಬೇಕಾದ ಆಸೆ ಆಕಾಂಕ್ಷೆಗಳು ಸ್ಪಂಧಿಸಿ, ಕೌನ್ಸಲಿಂಗ್ ಮಾಡುವ ಮೂಲಕ ಕ್ರಿಯೆ ಪ್ರತಿಕ್ರಿಯಿಸಿ ಉತ್ತಮ ರೀತಿಯ ವೈಧ್ಯಕೀಯ ಸೌಲಭ್ಯಗಳನ್ನು ನೀಡಿ ಪಾಲಸಿ ರೂಪದಲ್ಲಿ ಜಾರಿಗೊಳುತ್ತಿದ್ದಾರೆ.
ನಮ್ಮ ರಾಜ್ಯದಲ್ಲಿ ನೋಡಿದರೆ ತ್ರಿಲಿಂಗಿಗಳು ಸಾಕಷ್ಟು ಜನ ಪುಟ್ ಪಾತ್ ಮೇಲೆನೆ ಇದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಮನೆಯಿಂದ, ಸಮಾಜದಿಂದ ಮಾನಸಿಕ ಕೊರತೆಗೆ ಗುರಿಯಾಗಿ ಹಲವಾರು ಹವ್ಯಾಸಗಳಲ್ಲಿ ತೊಡಗುವುದರಿಂದ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಇಂತಹ ಸ್ಥಿತಿಯಲ್ಲಿ ಅವರಿಗೆ ಮಾನಸಿಕವಾಗಿ ಪ್ರಬಲವಾಗಿ ಶಕ್ತಿನು ಇರುವುದಿಲ್ಲ, ದೈಹಿಕವಾಗಿ ಕಾಪಾಡಿಕೊಳ್ಳುವ ಶಕ್ತಿನು ಇರುವುದಿಲ್ಲ. ಇಂತಹ ಸಮಯದಲ್ಲಿ ಪುಟ್ ಪಾತ್ ಮೇಲೆ ಅವರ ಜೀವನ ಸಾಗಿಸಬೇಕಾಗತ್ತೆ.
ಈ ವಿಚಾರವಾಗಿ ಕೇಂದ್ರ ಸರ್ಕಾರ, ಮತ್ತು ರಾಜ್ಯ ಸರ್ಕಾರಕ್ಕೆ ಕೇಳಿಕೊಳ್ಳುವುದೆನೆಂದರೆ, ಹಲವಾರು ಸಂಘಟನೆಗಳು ಹೋರಾಟ ಮಾಡುವ ಮೂಲಕ ಸರ್ಕಾರವನ್ನು ಕಣ್ಣು ತೆರೆಸುವ ಕಾರ್ಯವನ್ನು ಮಾಡಿದರು ಸಹ ಇನ್ನು ಕೆಲವು ಕೆಲಸಗಳು ಅಲ್ಲಿ ನಿಂತಿವೆ. ಇದು ಸಣ್ಣ ಸಮುದಾಯವಾಗಿದ್ದರೂ ಕೂಡ ಈ ಸಮುದಾಯದ ಬಗ್ಗೆ ಕಣ್ಣು ತೆರೆಯುವ ಕಾರ್ಯ ಮಾಡಬೇಕು.
ನಾವು ಭಾರತದ ಪ್ರಜೆಗಳು ಓಟು ಹಾಕಬೇಕಾದರೇ ನಾವು ಬೇಕಾಗುತ್ತಿವೆ, ಹಕ್ಕುಗಳನ್ನು ಕೇಳಬೇಕಾದರೆ ನಾವು ಬೇಡವಾ?,
ಇಗ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಮೆಡಿಶನ್ ಕೊಟ್ಟು ದುಬಾರಿ ಮೆಡಿಶನ್ ನ್ನು ಹೊರಗಡೆ ಬರೆದು ಕೋಡುತ್ತಾರೆ. ಆದರೆ ನಮ್ಮ ಪರಿಸ್ಥಿತಿಗಳು ಕೈ ಬಡಕೊಂಡ ಜೀವನಾ ಮಾಡುವ ಪರಸ್ಥಿತಿ. ಅನಾರೋಗ್ಯದಿಂದ ಪರಿಸ್ಥಿತಿಯಿಂದ ಗ್ರೌಂಡ್ ಲೆವಲ್ ಪರಿಸ್ಥಿಗಳು ಸರ್ಕಾರ ನಮ್ಮ ಪರಿಸ್ಥಿತಿಗಳನ್ನು ಕಟ್ಟು ತೆರೆದು ನೋಡಬೇಕು.
ನಮ್ಮಲ್ಲು ಭಾವನೆಗಳಿವೆ, ನಮ್ಮ ಭಾವನೆಗಳು ಹೆಣ್ಣಿಗೆ ಬದುಕಬೇಕು ಎನ್ನುವ ಆಸೆ ಆಕಾಂಕ್ಷೆಗಳನ್ನು ಕಟ್ಟಿಕೊಂಡು ಬದುಕಿತ್ತಿದ್ದೆವೆ ಎಂದಮೇಲೆ, ನಮ್ಮ ಆಸೆ ಆಕಾಂಕ್ಷೆಗಳಿಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನು ಹೇಳಲು ಇಷ್ಟ ಪಡುತ್ತೇವೆ.
ನನ್ನ ವಯಸ್ಸಾಗಿರುವ ಸಮುದಾಯವಿದೆ, ಹೈರಿಸ್ಕನಲ್ಲಿ ಇರುವ ಸಮುದಾಯವಿದೆ. ಹಲವಾರು ಅನಾರೋಗ್ಯಗಳಿಗೆ ತುತ್ತಾಗಿದ್ದಾರೆ. ಅವರಿಗೆ ಸರಳವಾಗಿ, ಸುಗಮವಾಗಿ ವೈಧ್ಯಕೀಯ ಸೌಲಭ್ಯಗಳು ದೊರೆಯಬೇಕು.
ಪ್ರಸ್ತುತ ಸಮಾಜದಲ್ಲಿ ಚುನಾವಣೆಯನ್ನೆ ಗುರಿಯಿಟ್ಟುಕೊಂಡು ಒಟವನ್ನು ನೋಡುತ್ತಿದ್ದೆವೆ. ಆದರೆ ಕರ್ನಾಟಕ ಸ್ಥಿತಿಗತಿಯಲ್ಲಿ ನಾವು ಯಾವುದರಲ್ಲಿ ಓಡುತ್ತಿದ್ದವೆ ಯಾವುದರಲ್ಲಿ ಬಿದ್ದಿದ್ದೆವೆ ಎನ್ನುವುದನ್ನು ಯಾರು ಗಮನಿಸುತ್ತಿಲ್ಲ.
ಮುಂದಿನ ದಿನದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಅಧಿಕಾರಕ್ಕೆ ಬರೆದ ಇರು ಪಕ್ಷದವರಾಗಲಿ ದಯವಿಟ್ಟು ನಮ್ಮ ಸಾರ್ವತ್ರಿಕ ಆರೋಗ್ಯ ಆಂಧೋಲನದ ಪ್ರಣಾಳಿಕೆಯನ್ನು, ಅವರು ಗಟ್ಟಿಗೊಳಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ.
ಕೇವಲ ನಮ್ಮ ತ್ರಿಲಿಂಗಿ ಸಮುದಾಯದ ಸಮಸ್ಯೆಯಲ್ಲ. ನಮ್ಮಕಿಂತ ಕೇಳಮಟ್ಟದಲ್ಲಿ ಗಾರ್ಮೆಂಟ್ಸ್ , ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ದಲಿತರು, ಲೈಂಗಿಕ ಅಲ್ಪಸಂಖ್ಯಾತರು, ರೈತರು , ಕಾಗದ ಆಯುವವರ , ವೃದ್ದಾಪ್ಯ ಜನರ, ಸಾಕಷ್ಟು ಕಡುಬಡವ ಕುಟುಂಬಗಳಿವೆ ಇವರು ಸಹ ನಮ್ಮ ಕರ್ನಾಟಕ ಪ್ರಜಾಪ್ರಭುತ್ವದಲ್ಲಿ ಇರುವಂತಹ ಪ್ರಜೆಗಳಾಗಿದ್ದಾರೆ.
ಇವತ್ತಿನ ಈ ಹೋರಾಟ ಕರ್ನಾಟಕದಲ್ಲಿ ನಡೆಯುವಂತಹ ಚುನಾವಣೆಗೆ ಒಂದು ಸವಾಲಾಗಿದೆ. ಮುಂಬರುವ ರಾಜಕೀಯ ವ್ಯಕ್ತಿಗಳು ಇದಕ್ಕೆ ಒತ್ತು ನೀಡಿ ಪಾಲಿಸಿಗಳನ್ನು ಜಾರಿಗೊಳಿಸಬೇಕು ಎಂದು ಕಿರಣ ಬೇಡಿ ಮಾಧ್ಯಮಗಳ ಮುಂದೆ ಮನವಿ ಮಾಡಿಕೊಂಡರು.
ಕೇವಲ ನಮ್ಮ ತ್ರಿಲಿಂಗಿ ಸಮುದಾಯದ ಸಮಸ್ಯೆಯಲ್ಲ. ನಮ್ಮಕಿಂತ ಕೇಳಮಟ್ಟದಲ್ಲಿ ಗಾರ್ಮೆಂಟ್ಸ್ , ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ದಲಿತರು, ಲೈಂಗಿಕ ಅಲ್ಪಸಂಖ್ಯಾತರು, ರೈತರು , ಕಾಗದ ಆಯುವವರ , ವೃದ್ದಾಪ್ಯ ಜನರ, ಸಾಕಷ್ಟು ಕಡುಬಡವ ಕುಟುಂಬಗಳಿವೆ ಇವರು ಸಹ ನಮ್ಮ ಕರ್ನಾಟಕ ಪ್ರಜಾಪ್ರಭುತ್ವದಲ್ಲಿ ಇರುವಂತಹ ಪ್ರಜೆಗಳಾಗಿದ್ದಾರೆ.
ಇವತ್ತಿನ ಈ ಹೋರಾಟ ಕರ್ನಾಟಕದಲ್ಲಿ ನಡೆಯುವಂತಹ ಚುನಾವಣೆಗೆ ಒಂದು ಸವಾಲಾಗಿದೆ. ಮುಂಬರುವ ರಾಜಕೀಯ ವ್ಯಕ್ತಿಗಳು ಇದಕ್ಕೆ ಒತ್ತು ನೀಡಿ ಪಾಲಿಸಿಗಳನ್ನು ಜಾರಿಗೊಳಿಸಬೇಕು ಎಂದು ಕಿರಣ ಬೇಡಿ ಮಾಧ್ಯಮಗಳ ಮುಂದೆ ಮನವಿ ಮಾಡಿಕೊಂಡರು.
ಜೊತೆಗೆ ಮಂಗಳಮುಖಿಯರ ಮಾನಸಿಕ ಸ್ಥಿತಿ ಬಗ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಕೌನ್ಸಿಲಿಂಗ್ ಮಾಡುವ ವ್ಯವಸ್ಥೆ ಮಾಡಬೇಕು.
ಹಾರ್ಮೋನ್ ಟ್ಯಾಬ್ಲೆಟ್ ಗಳು ಸರಳವಾಗಿ ದೊರೆಯಬೇಕು. ಲಿಂಗ ಪರಿವರ್ತನೆ ( ನಿರ್ವಾಣ) ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ದೊರೆಯಬೇಕು. ಎಂದು ಮನವಿ ಮಾಡಿದರು.