NOTHING LIKE VOTING, I VOTE FOR SURE, ಮತದಾರರಲ್ಲಿ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆಯಿಂದ ಬೃಹತ್ ಬೈಕ್ ರ್ಯಾಲಿ.
ಬೆಳಗಾವಿ : ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರ NOTHING LIKE VOTING, I VOTE FOR SURE ಎಂಬ ಧ್ಯೇಯಯೊಂದಿಗೆ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ರವಿವಾರ(ಏ.23) 11 ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರ ಹಾಗೂ 12 ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮತದಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನೆರವೇರಿಸಲಾಯಿತು.

ಮೇ 10, 2023 ರಂದು ಎಲ್ಲ ಸಾರ್ವಜನಿಕರು ತಮ್ಮ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅರಿವು ಮೂಡಿಸಲು ಮಹಾನಗರ ಪಾಲಿಕೆಯ ಸಿಬ್ಬಂದಿಯ ಒಳಗೊಂಡ ಬೃಹತ್ ಬೈಕ್ ರೈಲಿಯನ್ನು ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯಿಂದ ಪ್ರಾರಂಭಿಸಿ ಕೊಲ್ಲಾಪುರ್ ಸರ್ಕಲ್ ಚನ್ನಮ್ಮ ಸರ್ಕಲ್ ಧರ್ಮವೀರ ಸಂಭಾಜಿ ಚೌಕ್ ರಾಮಲಿಂಗ ಕಿಂಡ್ ಗಲ್ಲಿ ಕಪಿಲೇಶ್ವರ ಬ್ರಿಜ್ ಮೂಲಕ ಪಿಬಿ ರಸ್ತೆ ವರೆಗೂ ತಿಳಿಸಿ ಮುಕ್ತಾಯಗೊಳಿಸಲಾಯಿತು.
ಈ ರ್ಯಾಲಿಯನ್ನು ರಾಘವೇಂದ್ರ ಅನ್ವೇಕರ್ ರವರು ಉದ್ಘಾಟಿಸಿದರು. ಉತ್ತರ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳಾದ ಗುರುಸಿದ್ಧ ಹಿರೇಮಠ್ ಸಹಾಯಕ ಚುನಾವಣಾ ಅಧಿಕಾರಿ ಶ್ರೀ ಸುಹಾಸ p ಇಂಗಳ. ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳಾದ ಹಾಗೂ ಆಯುಕ್ತರಾದ ಡಾ ರುದ್ರೇಶ್ ಗಾಳಿ, ಮಹಾನಗರ ಪಾಲಿಕೆ ಉಪಯುಕ್ತರಾದ ಶ್ರೀಮತಿ ಭಾಗ್ಯಶ್ರೀ ಹುಗ್ಗಿ, ಕಾರ್ಯನಿರ್ವಾಹಕ ಅಭಿಯಂತರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸಮಸ್ತ ಮಹಾನಗರ ಪಾಲಿಕೆಯ ಸಿಬ್ಬಂದಿಯವರು ಪಾಲ್ಗೊಂಡರು.