ಸಿದ್ದರಾಮಯ್ಯ ಅವರು ಸುಳ್ಳು ಆರೋಪ ಮಾಡೋದ ಬಿಟ್ರೇ ಜೀವನದಲ್ಲಿ ಏನು ಸಾಧನೆ ಮಾಡಿಲ್ಲ.
ಲೋಕಾಯುಕ್ತ ಸಂಸ್ಥೆ ಅದೊಂದು ಸ್ವತಂತ್ರ ಸಂಸ್ಥೆ, ಅದರ ಬಗ್ಗೆ ನಾನು ಕಮೆಂಟ್ ಮಾಡಲ್ಲ. ಎಲ್ಲಿ ನಿರ್ದಿಷ್ಟವಾದ ಆರೋಪಗಳಿರತ್ತೆ ಅಂತವರನ್ನು ತಖಿಕೆ ಮಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೊಳ ಹೇಳಿದರು.
ಸಿದ್ದರಾಮಯ್ಯ ಅವರು ಸುಳ್ಳು ಆರೋಪ ಮಾಡೋದ ಬಿಟ್ರೇ ಜೀವನದಲ್ಲಿ ಏನು ಸಾಧನೆ ಮಾಡಿಲ್ಲ. ಸಿದ್ದರಾಮಯ್ಯ ಅಷ್ಟೇ ಅಲ್ಲ ಕಾಂಗ್ರೆಸ್ ಕೂಡ ಹೀನಾಯ ಸ್ಥಿತಿಗೆ ಹೋಗುತ್ತದೆ. ಸಿದ್ದರಾಮಯ್ಯ ಅವರು ಅಷ್ಟೊಂದು ಒಳ್ಳೆಯ ಕೆಲಸ ಮಾಡಿದ್ದರೆ ಐದು ವರ್ಷ ಸರ್ಕಾರ ನಡೆಸಿ ಅವರೇ ಕಾಂಗ್ರೆಸ್ ಯಾಕೆ ಸಿಎಂ ಕುರ್ಚಿ ಮೇಲೆ ಕುಳಳ್ಳಿಲ್ಲ, ಹೀನಾಯವಾಗಿ ಸೋತರು ಎಂದರು.
ಲೋಕಾಯುಕ್ತ ತಖಿಕೆ ವಿಚಾರವಾಗಿ ನಮ್ಮ ಸರ್ಕಾರ ಯಾವುದೇ ತಖಿಕೆಯಲ್ಲಿ ಭಾಗಿಯಾಗುವುದಿಲ್ಲ, ಸ್ಪಷ್ಟವಾಗಿ ಅದರ ಅಧಿಕಾರ ಚಲಾಯಿಸುತ್ತದೆ.
ಗಡ್ಡಿ ಬಸವಣ್ಣ ಏತ್ ನೀರಾವರಿ ಯೋಜನೆ ವಿಚಾರ ರಮೇಶ ಜಾರಕಿಹೊಳಿ ಒಬ್ಬರೆ ಚಾಲನೆ ನೀಡಿದರು, 4.5 ಕೋಟಿ ಕಾಮಗಾರಿ ಚಾಲನೆಗೆ ಸಿಎಂ ನ ಕರೆಸುತ್ತಿರಾ, 950 ಕೋಟಿ ಕಾಮಗಾರಿಗೆ ಸಿಎಂ ಅವರನ್ನ ಯಾಕ ಕರೆಸಲಿಲ್ಲ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಕಾರಜೋಳ ಅವರು ಚಾಲನೆಗೆ ಅನಿವಾರ್ಯ ಕಾರಣದಿಂದ ಬರಲ್ಲಿಲ್ಲ ಆದರೇ ಉದ್ಘಾಟನೆ ನಾವೇ ಮಾಡುತ್ತೇವೆ ಎಂದರು.