ತಮ್ಮ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಶಿಬಿರದಲ್ಲಿ ಖುದ್ದು ತಾವೇ ರಕ್ತದಾನ ಮಾಡಿದ ಸ್ವಾಮೀಜಿ
ನಯಾನಗರ ಸುಕ್ಷೇತ್ರದಲ್ಲಿ ಶ್ರೀಗಳ ಬರ್ತಡೆ ಸಂಭ್ರಮ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರದ ಸುಖದೇವಾನಂದ ಆಶ್ರಮದಲ್ಲಿ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ ಅವರ 39 ನೇ ವರ್ಷದ ಜನ್ಮದಿನಾಚರಣೆ ಆಚರಿಸಲಾಯಿತು.
ಜನ್ಮದಿನದ ಪ್ರಯುಕ್ತ ಬೆಳವಡಿ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಈ ರಕ್ತದಾನ ಶಿಬಿರದಲ್ಲಿ ಶ್ರೀಗಳು ಖುದ್ದು ತಾವೂ ಸಹ ರಕ್ತದಾನ ಮಾಡಿದರು.
ಜೊತೆಗೆ ಮಠಕ್ಕೆ ಆಗಮಿಸಿದ ನೂರಾರು ಭಕ್ತರು ಪಾಲ್ಗೊಂಡು, ರಕ್ತದಾನ ಮಾಡಿದರು.
ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳು SSLC ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಅಲ್ಲದೇ ಜನ್ಮದಿನದ ಸಂಭ್ರಮಕ್ಕೆ ಬಂದ ಭಕ್ತರಿಗೆ ಸಸಿಗಳನ್ನು ವಿತರಿಸಲಾಯಿತು.
ಸಂಜೆ ಶ್ರೀಗಳಪಾದ ಪೂಜೆಯೊಂದಿಗೆ ಮುಖ್ಯ ಕಾರ್ಯಕ್ರಮ ಆರಂಭಗೊಂಡಿತು.
ಬರ್ತಡೆ ಕಾರ್ಯಕ್ರಮದಲ್ಲಿ ಶ್ರೀಗಳು ಭಕ್ತರನ್ನು ಉದ್ದೇಶಿಸಿ ಮಾತನಾಡಿ, ಈಗಿನ ಸಮಾಜದಲ್ಲಿ ಧರ್ಮ ಉಳಿಯಬೇಕಾಗಿದೆ. ಆದಷ್ಟು ನೊಂದವರಿಗೆ ಒಳ್ಳೆಯದನ್ನು ಮಾಡುವುದರ ಮೂಲಕ ಇದು ಸಾಧ್ಯವಾಗುತ್ತದೆ. ಬರ್ತಡೆಯನ್ನು ಅದ್ದೂರಿಯಾಗಿ ಆಚರಣೆ ಮಾಡಿದ ಶಿಷ್ಯವೃಂದಕ್ಕೆ ಧನ್ಯವಾದ ಎಂದರು.
ವಿಶೇಷವಾದ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ಶುಭಕೋರಲು ದೂರದ ಊರುಗಳಿಂದ ಗಣ್ಯರು ಭಕ್ತರು ಮಠಕ್ಕೆ ಆಗಮಿಸಿದ್ದರು.
ಉತ್ತರ ಕರ್ನಾಟಕ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರ ರಾಜ್ಯದಿಂದಲೂ ಭಕ್ತರು ಬಂದಿದ್ದರು.