ಬೆಳಗಾವಿಯನ್ನು ಹಸಿರು ಮತ್ತು ಸುಂದರಗೊಳಿಸಲು ಜಂಟಿ ಪ್ರಯತ್ನಗಳನ್ನು ಮಾಡುವಂತೆ ಶಾಸಕ ಆಸೀಪ್ ಆಸಿಫ್ ಅಲಿಯಾಸ್ ರಾಜು ಸೇಠ್ ಮನವಿ ಮಾಡಿದರು.
ಗ್ರೀನ್ ಸೇವಿಯರ್, ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಭೌರಾವ್ ಕಾಕತ್ಕರ್ ಕಾಲೇಜಿನ ಎನ್ ಎಸ್ ಎಸ್ ವಿಭಾಗ ಬೆಳಗಾವಿಯ ಮಹಾಂತೇಶನಗರದಲ್ಲಿ ಪರಿಸರ ದಿನಾಚರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಿತ್ತು.ರಾಜು ಸೇಠ್ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು. ನಂತರ ಮಾತನಾಡಿದ ಅವರು ಸಿಮೆಂಟ್ ಕಾಂಕ್ರೀಟ್ ಕಾಡಿನಲ್ಲಿ ಉದ್ಯಾನವನ ಅಥವಾ ಹಸಿರು ನೋಡುವುದು ಕಣ್ಣಿಗೆ ಮಾತ್ರವಲ್ಲ ಮನಸ್ಸಿಗೂ ಆಹ್ಲಾದಕರ ಅನುಭವ ಎಂದು ಹೇಳಿದರು.
ಹೀಗಾಗಿ ನಗರದಲ್ಲಿ ಹಸಿರೀಕರಣ ಮಾಡಬೇಕಿದೆ. ಕಳೆದ 5 ವರ್ಷಗಳಲ್ಲಿ ಬೆಳಗಾವಿ ನಗರದಲ್ಲಿ ಉದ್ಯಾನಗಳು ಹದಗೆಟ್ಟಿವೆ. ಅದನ್ನು ಸುಧಾರಿಸಬೇಕಾಗಿದೆ. ಇಂತಹ ಚಟುವಟಿಕೆಗಳ ಮೂಲಕ ಬೆಳಗಾವಿ ನಗರವನ್ನು ಸ್ವಚ್ಛ, ಹಸಿರು, ಸುಂದರವನ್ನಾಗಿಸುವ ಅಗತ್ಯವಿದೆ. ಅದಕ್ಕಾಗಿ ಸ್ಥಳೀಯ ಜನರು ಸಹ ನೆಟ್ಟ ಗಿಡಗಳಿಗೆ ನೀರು ಹಾಕಿ ಆರೈಕೆ ಮಾಡುವ ಮೂಲಕ ತಮ್ಮ ಪ್ರದೇಶವನ್ನು ಹಸಿರಾಗಿಸಲು ಶ್ರಮಿಸಬೇಕು.
ಬೆಳಗಾವಿಯನ್ನು ಹಸಿರಾಗಿ ಸುಂದರಗೊಳಿಸಲು ಸಂಘಟಿತ ಪ್ರಯತ್ನ ಮಾಡೋಣ ಎಂದು ಸೇಠ್ ಮನವಿ ಮಾಡಿದರು