ಲಕ್ಷಾಂತರ ಭಕ್ತಾಧಿಗಳಿಂದ ಅದ್ದೂರಿಯಾಗಿ ಉದ್ದಮ್ಮ ದೇವಿ ರಥೋತ್ಸವ, ರಾಜ್ಯ, ಹೊರರಾಜ್ಯದಿಂದ ಹರಿದು ಬಂದ ಜನಸಾಗರ.
ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದ ಗ್ರಾಮದೇವತೆ ಶ್ರೀ ಉದ್ದಮ್ಮ ದೇವಿ ಜಾತ್ರಾ ಮಹೋತ್ಸವ ಅತೀ ವಿಜೃಂಬನೆಯಿಂದ ಜರುಗಿತು. ರಥೋತ್ಸವದಲ್ಲಿ ನಮ್ಮ ರಾಜ್ಯದ ಎಲ್ಲ ಮುಲೆಯಿಂದ ಜನರು ಹರಿದು ಬಂದಿದ್ದರು. ಜೊತೆ ಹೊರರಾಜ್ಯದಿಂದ, ಮುಖ್ಯವಾಗಿ ಮಹಾರಾಷ್ಟ್ರದಿಂದ ಸಾವಿರಾರು ಭಕ್ತಾಧಿಗಳು ಉದ್ದಮ್ಮ ತಾಯಿ ಜಾತ್ರೆಗೆ ಬರುವ ಮೂಲಕ ಜಾತ್ರೆಯ ಕಳೆ ಹತ್ತು ಪಟ್ಟು ಹೆಚ್ಚಾಗಿತ್ತು.
ಗೋಕಾಕ ತಾಲೂಕಿನಲ್ಲಿ ಗೋಕಾಕ ಲಕ್ಷ್ಮೀದೇವಿ ಜಾತ್ರೆ ಬಿಟ್ಟರೆ, ಸುತ್ತ ಹತ್ತುರಲ್ಲಿ ಶ್ರೀ ಉದಗಟ್ಟಿ ಉದ್ದಮ್ಮ ದೇವಿ ಜಾತ್ರೆ ಅತೀ ವಿಜೃಂಬನೆಯಿಂದ ನಡೆಯುತ್ತದೆ. ಉದ್ದಮ್ಮ ದೇವಿ ಜಾತ್ರೆ ಕೇವಲ ಉದಗಟ್ಟಿ ಒಂದೇ ಗ್ರಾಮಕ್ಕೆ ಸೀಮಿತವಾಗಿರದೇ ಸುತ್ತಸುತ್ತಲಿನ ಹಳ್ಳಿಯವರು ತಮ್ಮ ಊರ ಜಾತ್ರೆ ಎನ್ನುವ ರೀತಿಯಲ್ಲಿ ಸಹಕಾರ ನೀಡುವ ಮೂಲಕ ಆಚರಣೆ ಮಾಡುತ್ತಾರೆ.
ಶ್ರೀ ಉದ್ದಮ್ಮ ದೇವಿ ರಥವನ್ನು ಅಲಂಕೃತವಾಗಿ ಮಾಡಿದ್ದು, ಪಕ್ಕದ ಗ್ರಾಮ ಹಡಗಿನಾಳ ಗ್ರಾಮ ದೇವರಾದ ಮುತ್ತೆಮ್ಮ ದೇವರ ಪಲ್ಲಕ್ಕಿ ಉತ್ಸವವನ್ನು ಭಕ್ತಾಧಿಗಳು ಹುಮ್ಮಸಿನಿಂದ ಎಳೆದು, ಜಾತ್ರೆ ಮಾಡುವ ಮೂಲಕ ಭಂಡಾರ ತಾಯಿ ಕೃಪೆಗೆ ಪಾತ್ರರಾದರು. ಇಡೀ ಉದಗಟ್ಟಿ ಗ್ರಾಮವೆಲ್ಲ ಭಂಡಾರದಿಂದ ತುಂಬಿತ್ತು. ಮುತ್ತೆಮ್ಮ ದೇವರ ಕುದುರೆ ಹಲವು ಬಂಗಿಯಲ್ಲಿ ಕುಣಿತ ಹಾಕುವ ಮೂಲಕ ಎಲ್ಲ ಭಕ್ತಾಧಿಗಳಿ ಆಶೀರ್ವಾದ ಮಾಡಿತು.
ಜಾತ್ರೆಯಲ್ಲಿ ತರ ತರದ ಬಣ್ಣದ ಆಟಿಕೆ ಸಾಮಗ್ರಿಗಳು, ಎಂದು ಕಾಣದ ಹಳ್ಳಿ ಸೋಬಗಿನಲ್ಲಿ ಹೆಣ್ಣು ಮಕ್ಕಳು ಬಣ್ಣ ಬಣ್ಣ ಸೀರೆಯನ್ನು ಉಟ್ಟುಕೊಂಡು ಎತ್ತಿನ ಬಂಡಿ, ಟ್ರ್ಯಾಕ್ಟರ್ ಗಳಲ್ಲಿ ಜಾತ್ರೆಗೆ ಬರುವುದು ನಮ್ಮ ಗ್ರಾಮೀಣ ಸಂಸ್ಕೃತಿ ಸೋಬಗು ನೋಡುವಂತಾಗಿದೆ.