ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಮೂಡಲಗಿ: ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಿಐಟಿಯು ಸಂಘಟನೆಯ ಸಹಯೋಗದೊಂದಿಗೆ ಅರಭಾವಿ ಶಿಶು ಅಭಿವೃದ್ಧಿಯ ಯೋಜನೆಯ ವ್ಯಾಪ್ತಿಯ ಅಂಗನವಾಡಿ ನೌಕರ ಸಂಘಟನೆಯಿಂದ ಸೋಮವಾರದಂದು ಮೂಡಲಗಿ ಪಟ್ಟಣದ ಪುರಸಭೆ ಆವರಣದಿಂದ ಕಲ್ಮೇಶ್ವರ ವೃತ್ತದ ಮುಖಾಂತರ ಸಿಡಿಪಿಒ ಕಚೇರಿಗೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಕಾರ್ಯಕರ್ತೆಯರ ಹಳೇ ಮೋಬೈಲ್ ವಾಸಪಡೆದು ಹೊಸದನ್ನು ನೀಡು ಬೇಕೆಂದು ಆಗ್ರಹಿಸಿ ಮೋಬೈಲ್‌ಗಳನ್ನು ಪ್ರದರ್ಶಿಸಿ ಸಿಡಿಪಿಒ ಯಲ್ಲಪ್ಪ ಗದಾಡಿ ಅವರ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ದೇಶದ ಎಲ್ಲ ಅಂಗನಾವಾಡಿ ಕಾರ್ಯರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿ ಮಾಡಬೇಕು, ಸಮಾಜಿಕ ಭದ್ರತೆಗಳಾದ ಇಎಸ್‌ಐ, ಪಿಎಫ್, ಪಿಂಚಣ , ಎಕ್ಸಗ್ರೇಷಿಯಾ ಇತರ ಸೌಲಭ್ಯಗಳನ್ನು, ೪೫ ಮತ್ತು ೪೬ನೇ ಇಂಡಿಯನ್ ಲೇಬರ್ ಕಾನ್ಪರೆನ್ಸ್ಗಳ ಶಿಫಾರೆಸ್ಸುಗಳು ಜಾರಿ ಮಾಡಬೇಕು, ಅಂಗನಾವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಕೋಡುವ ಕುರಿತು ಸುಪ್ರೀಂಕೋಟ ನೀಡಿರುವ ತೀರ್ಪನ್ನು ಕೂಡಲೇ ಜಾರಿ ಮಾಡಬೇಕು, ಏಕ ರೂಪದ ಸೇವಾ ನಿಯಮಗಳನ್ನು ಕೂಡಲೇ ರೂಪಿಸಬೇಕು, ಕೆಲಸದಿಂದ ವಜಾ ಮಾಡಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ಮರು ನೇಮಕ ಮಾಡಬೇಕು, ಪರಿಣಾಮಕಾರಿಯಾಗಿ ಕೆಲಸ ಮಾಡಲು ಹಳೇ ಮೋಬೈಲಗಳನ್ನು ವಾಪಸ ಪಡೆದು ಗುಣಮಟ್ಟದ ಹೊಸ ಮೊಬೈಲ್ ಗಳನ್ನು ನೀಡಬೇಕು, “ಪೋಷಣ್ ಅಭಿಯಾನ”ಕ್ಕೆ ಆಧಾರ್ ಅಥವಾ ಪೋನ್ ನಂಬರ ಲಿಂಕ್ ಮಾಡುವು ಕಡ್ಡಾಯ ಎಂಬ ಆದೇಶವನ್ನು ಹಿಂಪಡೆಯಬೇಕು ಹಾಗೂ ಇತರೆ ಇಲಾಖೆಗಳ ಕೆಲಸಗಳಿಗೆ ಹಚ್ಚಬಾರದು ಸೇರಿದಂತೆ ಇನ್ನೂ ವಿವಿಧ ಬೇಡಿಕೆಗಳ ಮನವಿಯನ್ನು ಸಂಘಟಕರು ಸಿಡಿಪಿ ಯಲ್ಲಪ್ಪ ಗದಾಡಿ ಅವರಿಗೆ ಸಲ್ಲಿಸಿದರು
ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ದೊಡ್ಡವ್ವ ಪೂಜಾರಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯ ಇಲಾಖೆಯ ಮೊಬೈಲ್‌ಗಳು ಸರಿಯಾಗಿ ಬಳಸಲು ಸಾಧ್ಯವಾಗುತ್ತಿಲ್ಲ. ದಾಖಲಾತಿಗಳನ್ನು ಮೊಬೈಲ್‌ದಲ್ಲಿ ತುಂಬಲು ತೊಂದರೆ ಉಂಟಾಗುತ್ತಿದೆ. ಶೀಘ್ರವಾಗಿ ಸರ್ಕಾರ ಹೊಸ ಮೊಬೈಲ್‌ಗಳನ್ನು ವಿತರಣೆ ಮಾಡಬೇಕು. ಹಾಗೂ ಕಾರ್ಯಕರ್ತೆಯರಿಗೆ ಸಂಬಳ ಸಹ ಕಡಿಮೆ ಇರುವುದರಿಂದ ತಮ್ಮ ಜೀವನ ಸಾಗಿಸಲು ಸಂಕಷ್ಟ ಎದುರಿಸುತ್ತಿದ್ದಾರೆ. ೨೦೨೩ರ ಬಜೆಟ್‌ನಲ್ಲಿ ಹೆಚ್ಚಳವಾದ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಮುನಿರಾ ಮುಲ್ಲಾ, ಗ್ರಾ.ಪಂ ನೌಕರರ ಸಂಘದ ಮೂಡಲಗಿ ತಾಲೂಕಾ ಅಧ್ಯಕ್ಷ ರಮೇಶ ಹೋಳಿ, ಉಪಾಧ್ಯಕ್ಷ ಬಸವರಾಜ ಮಿರ್ಜಿ, ಮೂಡಲಗಿ ತಾಲೂಕಾ ಸಹಕಾರ್ಯದರ್ಶಿ ಸುಜಾತಾ ಕೊಕಟನೂರ ಮತ್ತು ವಿಜಯಲಕ್ಷ್ಮೀ ಶೆರೆಗಾರ, ಸುರ್ವಣಾ ವಡೇರಹಟ್ಟಿ, ಬಂದವ್ವ ಘಂಟಿಚೂರ, ಸುವರ್ಣಾ ಪಾಟೀಲ, ಸುಜಾತ ಕಿತ್ತೂರ, ರೇಣುಕಾ ಪಾಟೀಲ, ಹೇಮಾ ಸಿದ್ದಪೂರ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟಣೆಯಲ್ಲಿ ಭಾಗವಹಿಸಿದರು.