ಅಂತರಾಷ್ಟ್ರೀಯ ಐರನ್ ಮ್ಯಾನ್ ಸ್ಪರ್ಧೆ ವಿಜೇತ ಸಿ.ಪಿ.ಐ ಶ್ರೀಶೈಲ್ ಅವರಿಗೆ ರೈತ ಸಂಘಟನೆಯಿಂದ ಸನ್ಮಾನ
ಮುಡಲಗಿ : ಖಜಗಿಸ್ತಾನ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ವಿಜೇತರಾದ ಮುಡಲಗಿಯ ಸಿ.ಪಿ.ಐ ಶ್ರೀಶೈಲ್ ಬ್ಯಾಕೂಡ ಅವರಿಗೆ ಗೋಕಾಕ ತಾಲೂಕಿನ ರೈತ ಸಂಘಟನೆಯ ಮುಖಂಡರು ಇಂದು ಸನ್ಮಾನಿಸಿ ಗೌರವಿಸಿದರು.
ರೈತ ಸಂಘಟನೆಯ ಮುಖಂಡರಾದ ಗಣೇಶ ಇಳಿಗೇರ, ಹೊಳೆಪ್ಪ ಉದ್ಯಾಗೋಳ, ಮಹಾದೇವ ಗೋಡೆರ, ರವಿ ದೊಡಮನಿ, ಮುತ್ತೆಪ್ಪ ಬಾಗನ್ನವರ ಹಾಗೂ ಉತ್ತರ ಕರ್ನಾಟಕ ಜಾನಪದ ಗಾಯಕ ಮಾಳು ನಿಪನ್ಯಾಳ ಇನ್ನು ಅನೇಕರು ಉಪಸ್ಥಿತರಿದ್ದರು.