ರಾಮದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಡಾ.ರೇಖಾ ಚಿನ್ನಾಕಟ್ಟಿ ಟಿಕೆಟ್, ಇಲ್ಲದಿದ್ದರೆ ಕ್ಷತ್ರಿಯ ಸಮಾಜದ ನಡೆ ಬೇರೆ ಪಕ್ಷದ ಕಡೆ ಎಂದು ಬಿಜೆಪಿಗೆ ಎಚ್ಚರಿಕೆ
ಕರ್ನಾಟಕ ಕ್ಷತ್ರಿಯ ಒಕ್ಕೂಟ ಸಮುದಾಯಕ್ಕೆ ರಾಮದುರ್ಗ ವಿಧಾನಸಭಾ ಕ್ಷೇತ್ರಕ್ಕೆ, ಡಾ.ರೇಖಾ ಮ ಚಿನ್ನಾ ಕಟ್ಟಿ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಜಿಲ್ಲೆಯ ರಾಜ್ಯದ ವರಿಷ್ಕರಿಗೆ ರಾಮದುರ್ಗದ ಕರ್ನಾಟಕ ಕ್ಷತ್ರಿಯ ಒಕ್ಕೂಟ ಸಮುದಾಯ ವತಿಯಿಂದ ಪಕ್ಕುತ್ತಾಯ ಮಾಡಲಾಯಿತು.
ಬಿಜೆಪಿ ಶ್ರೀರಾಮನ ಹೆಸರ ಮೇಲೆ ರಾಜಕೀಯ ಮಾಡುತ್ತಿದ್ದು, ನಾವು ಕ್ಷತ್ರಿಯರು ಶ್ರೀರಾಮನ ವಂಶಸ್ಥರು, ಕ್ಷತ್ರಿಯ ಸಮಾಜದ ಶೇ90% ಜನರು ಬಿಜೆಪಿಗೆ ಬೆಂಬಲ್ ನೀಡುತ್ತಾ ಬಂದಿದ್ದೇವೆ. ಆದರೇ ಬಿಜೆಪಿ ಪಕ್ಷವು ನಮ್ಮನ್ನು ಕಡೆಗಣಿಸುತ್ತಲೆ ಬಂದಿದೆ. ರಾಜ್ಯದಲ್ಲಿ ಕ್ಷತ್ರಿಯ ಸಮಾಜವು ಸುಮಾರು ಒಂದು ಕೋಟಿ ಜನ ಬಲ ಹೊಂದಿದ್ದು, ರಾಜ್ಯದಲ್ಲಿ 50 ಬಿಜೆಪಿ ಟಿಕೆಟ್ ಕ್ಷತ್ರಿಯ ಸಮಾಜದ ಆಕಾಂಕ್ಷಿಗಳಿಗೆ ನೀಡಬೇಕು. ಇಲ್ಲದಿದ್ದರೆ ನಮಗೆ ಯಾವ ಪಕ್ಷದವರು ಬೆಂಬಲ ನೀಡುತ್ತಾರೆ ಅವರ ಕಡೆ ನಮ್ಮ ಪಯಣ ಎಂದು ಬಿಜೆಪಿ ಪಕ್ಷಕ್ಕೆ ಕ್ಷತ್ರಿಯ ಸಮಾಜದಿಂದ ಬಿಜೆಪಿ ಪಕ್ಷಕ್ಕೆ ಎಚ್ಚರಿಕೆ ನೀಡಿದರು.