ಮಕ್ಕಳು ದೇವರಿಗೆ ಸಮಾನ ನನಗೆ ದೊರೆತ ಸನ್ಮಾನ ಏನೇ ಇದ್ದರು ಆ ದೇವರಿಗೆ ಅರ್ಪಣೆ- ವಿರೇಶ ಹಿರೇಮಠ
ಗಣ್ಯ ವ್ಯಕ್ತಿಗಳಿಗೆ, ಸಮಾಜಮುಖಿ ಕಾರ್ಯ ನಿರ್ವಹಿಸುವ ಸಮಾಜ ಸೇವಕರಿಗೆ, ಹಲವಾರು ಸಭೆ ಸಮಾರಂಭಗಳಲ್ಲಿ ದೊರೆತ ಪುರಸ್ಕಾರ ಮಾನ ಸನ್ಮಾನಗಳನ್ನು ತಮ್ಮ ಮನೆ ಅಥವಾ ಕಛೇರಿಯಲ್ಲಿ ಇರಿಸಿರುವುದನ್ನು ನಾವು ನೋಡಿರುತ್ತೇವೆ.
ಆದರೆ ಇಲ್ಲಿ ನಾವು ವಿಭಿನ್ನವಾದ ಹಾಗೂ ವಿಶೇಷವಾದ ಸದಾ ಬಡವರ ಕಾಳಜಿ, ಪರಿಸರ ಪ್ರೇಮಿ, ಮುಂತಾದ ಸಮಾಜ ಸೇವೆಗಳ, ಮುಖಾಂತರ ಹೆಸರು ವಾಸಿಯಾದ ಕೇವಲ ಸಮಾಜ ಸೇವಕರರಷ್ಟೇ ಅಲ್ಲದೇ ದೇವರ ಪುತ್ರ ಎಂಬ ಬಿರುದು ನೀಡಿರುವ ಜನರಿಗೆ ಅವರ ಇನ್ನೊಂದ ಸಮಾಜಮುಖಿ ಕಾರ್ಯವನ್ನ ನೋಡಬಹುದಾಗಿದೆ.
ಆಗಸ್ಟ್ -19 ರಂದು ನಗರದ ಬಿಮ್ಸ್ ಆಸ್ಪತ್ರೆಗೆ ತೆರಳಿ ಅಲ್ಲಿನ ತಾಯಿ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿದರು ಈ ಸಂಧರ್ಭದಲ್ಲಿ ನವಜಾತು ಶಿಶುಗಳ ತಾಯಿ- ಮಗುವಿನ ಆರೋಗ್ಯ ವಿಚಾರಿಸಿ ಅಲ್ಲಿನ ನವಜಾತು ಶಿಶುಗಳಿಗೆ ಅವರಿಗೆ ಅನೇಕ ಕಾರ್ಯಕ್ರಮ ಗಳಲ್ಲಿ ಸನ್ಮಾಸಿದ ಶಾಲುಳನ್ನು ಮಕ್ಕಳಿಗೆ ಹೊದೆಸುವ ಮೂಲಕ ನವಜಾತು ಶಿಶುಗಳಿಗೆ ವಿಶೇಷವಾಗಿ ಗೌರವ ಸಲ್ಲಿಸಿ ಸನ್ಮಾಸಿದರು.
ಮಕ್ಕಳು ದೇವರಿಗೆ ಸಮಾನ
ಭಗವಂತನಿಂದ ದೊರೆತ ಸನ್ಮಾನ ಭಗವಂತನಿಗೆ ಅರ್ಪಣೆ ಇರಲಿ ಚಿಕ್ಕ ಮಕ್ಕಳಲ್ಲಿ ನಾವು ಭಗವಂತನನ್ನ ಕಾಣಬೇಕು ಎಂದು ತಿಳಿಸಿದರು.
ಅನೇಕರು ಗಣ್ಯ ವ್ಯಕ್ತಿಗಳು ದೊರೆತ ಶಾಲುಗಳನ್ನು ಅದೇ ಸಮಾರಂಭದಲ್ಲಿಯೇ ಇಟ್ಟು ಬರುತ್ತಾರೆ. ಅಥವಾ ಅದೇ ಶಾಲುಗಳ ಬಟ್ಟೆ ಅಂಗಡಿಗಳು ಸೇರುತ್ತವೆ. ಸನ್ಮಾನದ ಶಾಲುಗಳನ್ನ ಸರಿಯಾದ ಕ್ರಮದಲ್ಲಿ ಬಳಕೆ ಮಾಡಿದರೆ ಅದು ಪುನಃ ಭಗವಂತನ ಪಾಲಿಗೆ ನಾವುಗಳು ಮೆಚ್ಚುಗೆ ಪಾತ್ರರಾಗುತ್ತೇವೆ ಎಂದು ತಿಳಿ ಹೇಳಿದರು.
ಗಣ್ಯರು ಬಳಿ ಇರುವ ಶಾಲುಗಳನ್ನು ನೀಡಿದರೆ ಅದನ್ನು ನವಜಾತು ಶಿಶುಗಳಿಗೆ ನೀಡಲು ಸಿದ್ದ ಎಂದು ಅವರು ಮಾತನಾಡಿದರು.
ತಾಯಿ-ಮಗವಿಗೆ ವಿಶೇಷವಾಗಿ ಕಾಳಜಿ ವಹಿಸಬೇಕು
ಬಾಣಂತಿಯರ ಸಂಧರ್ಭದಲ್ಲಿ ತಾಯಿ-ಮಗುವಿನ ಆರೈಕೆ ಅತ್ಯಂತ ಮಹತ್ವದಾಗಿದೆ ಎಂದು ಅವರು ಸಲಹೆ ನೀಡಿದರು.
ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಜನಿಸಿರುವ ಶಿಶುಗಳಿಗೆ ಹಣ್ಣು-ಹಂಪಲ ನೀಡಿ ತಾಯಿಯಾದವಳು ಮಗುವಿನ ಆರೈಕೆಗಾಗಿ ತೆಗೆದುಕೊಳ್ಳಬೇಕಾದಂತಹ ಸಲಹೆಗಳನ್ನು ನೀಡಿದರು.
ಆಧುನಿಕ ಜಗತ್ತಿನಲ್ಲಿ ಪೌಷ್ಟಿಕ ಆಹಾರ ಕೊರತೆಯಿಂತ ಮಕ್ಕಳ ಬೆಳವಣಿಗೆಯಲ್ಲಿ ಕುಂಟಿತಗೊಂಡು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದು ಕಂಡು ಬರುತ್ತಿದೆ.
ಬಾಣಂತಿಯರು ದೈನಂದಿನ ಜೀವನದಲ್ಲಿ ಶುದ್ಧ ನೀರು, ಆಹಾರ ಕ್ರಮ ಹಾಗೂ ವ್ಯಾಯಮ-ಪ್ರಾಣಾಯಾಮದ ಅವಶ್ಯಕತೆ ಇದ್ದು ಮಗುವಿನ ಆರೋಗ್ಯದ ಜೊತೆಗೆ ತಾಯಿಯ ಆರೋಗ್ಯ ಅತ್ಯಂತ ಮಹತ್ವದಾಗಿದೆ ಎಂದು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಬಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸರ್ವಲೋಕಾ ಸೇವಾ ಫೌಂಡೇಶನನ ಸೇವಕರು ಹಾಗೂ ಸಿಬ್ಬಂದಿಗಳು ಉಪಸ್ಥಿತಿತರಿದ್ದರು……