ಮಕ್ಕಳ ದಿನಾಚರಣೆ ನಿಮಿತ್ತ ಸ್ಪರ್ಧೆ : ಹರುಷದಿಂದ ಆಟವಾಡಿದ ಶಿಂದಿಕುರಬೇಟ ವಿದ್ಯಾರ್ಥಿಗಳು
ಬೆಳಗಾವಿ 17 : ಗೋಕಾಕ ತಾಲೂಕಿನ ಶಿಂದಿಕುರಬೇಟ ಮಾಧ್ಯಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳಿಗೆ ಮೋಜಿನ ಆಟ, ಮ್ಯಾಜಿಕ್ ಚೇರ್, ಲಿಂಬು ಚಮಚೆ, ಗೋಣಿ ಚೀಲ, ಮೂರು ಕಾಲಿನ ಓಟ ಸೇರಿದಂತೆ ಇತ್ಯಾದಿ ಆಟಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
೨೦೧೪-೧೫ನೇ ಸಾಲಿನ ಸಾಧಕ ವಿದ್ಯಾರ್ಥಿಗಳಾದ ಯಾಸೀನ ಸೌದಾಗರ, ಇಲಿಯಾಸ ಮಕಾಂದಾರ, ಅಮಿತ ನಾಯ್ಕ ಇವರು ಆಗಮಿಸಿ ತಮ್ಮ ಅನುಭವ ಹಂಚಿಕೊಂಡರು. ಇವರು ಸದ್ಯ ಕೆಇಬಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮುಖ್ಯಾಧ್ಯಾಪಕ ಪಿ. ಎಚ್. ಗೋಸಬಾಳ ಇವರು ಮಕ್ಕಳ ದಿನಾಚರಣೆ ಕುರಿತು ವಿವರಿಸಿದರು. ಎಸ್. ಎನ್.ವಡರಟ್ಟಿ ಸ್ವಾಗತಿಸಿದರು. ಎಂ.ಎಸ್. ಬೆಳಗಲಿ ವಂದಿಸಿದರು. ಕೊನೆಗೆ ಸಿಹಿ ವಿತರಿಸಲಾಯಿತು,