ಸಹಕಾರ ರತ್ನ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡ ಮುದಕಪ್ಪ ದೊಡಮನಿ
ಬೆಳಗಾವಿ : ಕಾವ್ಯಶ್ರೀ ಸೇವ ಟ್ರಸ್ಟ್(ರಿ) ವತಿಯಿಂದ ಪ್ರತಿವರ್ಷ ನೀಡಲ್ಪಡುವ ಸಹಕಾರ ರತ್ನ ಪ್ರಶಸ್ತಿಯನ್ನು ಮಂಗಳವಾರ(ಫೆ.13) ಮುದಕಪ್ಪ ದೊಡಮನಿಯವರಿಗೆ ನೀಡಿ ಗೌರವಿಸಲಾಯಿತು.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ನಿವಾಸಿಯಾದ ಮುದಕಪ್ಪ ಯಲ್ಲಪ್ಪ ದೊಡಮನಿ ಅವರು “ದಿ ಬೆಳಗಾವಿ ಕೇಂದ್ರ ಜಿಲ್ಲಾ ಸಹಾಕಾರಿ ಬ್ಯಾಂಕ್ ಬೆಳಗಾವಿಯ ಶಾಖೆ ಯಾದವಾಡದಲ್ಲಿ ದ್ವಿತೀಯ ದರ್ಜೆ ಸುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಕಾವ್ಯಶ್ರೀ ಸೇವ ಟ್ರಸ್ಟ್ “ಸಹಕಾರ ರತ್ನ ಪ್ರಶಸ್ತಿ” ನೀಡಿದೆ.
ಕಾವ್ಯಶ್ರೀ ಸೇವ ಟ್ರಸ್ಟ್ 1520 9ನೇ ಮುಖ್ಯರಸ್ತೆ 6ನೇ ಅಡ್ಡರಸ್ತೆ ಶ್ರೀನಿವಾಸನಗರ, ಬನಶಂಕರಿ ಮೂರನೇ ಹಂತ ಬೆಂಗಳೂರ ಇವರು ನಯನ ಸಂಭಾಂಗಣ ಜೆಸಿ ರಸ್ತೆ ಯಲ್ಲಿ ಮುದಕಪ್ಪ ದೊಡಮನಿ ಅವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಮುದಕಪ್ಪ ಯಲ್ಲಪ್ಪ ದೊಡಮನಿಯಲ್ಲಿ ಎಂ.ಎಸ್.ಡಬ್ಲೂ ವಿದ್ಯಾರ್ಹತೆ ಮುಗಿಸಿದ್ದು ಸುಮಾರು ಆರು ವರ್ಷಗಳಿಂದ ದಿ ಬೆಳಗಾವಿ ಕೇಂದ್ರ ಜಿಲ್ಲಾ ಸಹಕಾರಿ ಬ್ಯಾಂಕ್ ಯಾದವಾಡ ಶಾಲೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಆರು ವರ್ಷಗಳಲ್ಲಿಯೇ ಅವರ ಕಾರ್ಯದಕ್ಷತೆಗೆ ಸಂದ ಸಹಕಾರ ರತ್ನ ಪ್ರಶಸ್ತಿ ಇದಾಗಿದೆ.
ಪ್ರಶಸ್ತಿ ಪಡೆದ ನಂತರ ಮಾತನಾಡಿದ ಮುದಕಪ್ಪ ದೊಡಮನಿ ಅವರು, ಸತತ ಆರು ವರ್ಷಗಳಿಂದ ಡಿ.ಸಿ.ಸಿ ಬ್ಯಾಂಕ್ ನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತಿದ್ದು, ನನ್ನ ಸೇವೆಯನ್ನು ಕಂಡು ಕಾವ್ಯಶ್ರೀ ಸೇವ ಟ್ರಸ್ಟ್ ನನಗೆ ಸಹಕಾರ ರತ್ನ ಪ್ರಶಸ್ತಿ ನೀಡಿದ್ದಕ್ಕೂ ಧನ್ಯವಾದಗಳನ್ನು ಅರ್ಪೀಸುತ್ತೇನೆ ಎಂದರು.
ನನಗೆ ಸದಾ ಸಹಕಾರ ಮಾರ್ಗದರ್ಶನ ನೀಡಿದ ಎಲ್ಲ ನನ್ನ ಸಹೋದ್ಯೋಗಿಗಳಿದೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇನ್ನು ಮುಂದೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದು ಮುದಕಪ್ಪ ದೊಡಮನಿ ಅವರು ಹೇಳಿದರು.