ಮಳೆಯ ಅಬ್ಬರಕ್ಕೆ ಮೊದಲ ಬಲಿ. ನದಿಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಪತ್ತೆ
ಚಿಕ್ಕೋಡಿ : ಕೃಷ್ಣಾ ನದಿ ಅಬ್ಬರಕ್ಕೆ ತಾಲೂಕಿನಲ್ಲಿ ಮೊದಲ ಬಲಿಯಾಗಿದೆ. ಇದೇ 29 ರಂದು ಕೃಷ್ಣಾ ನದಿಯಲ್ಲಿ ಕೊಚ್ಚಿಹೋಗಿದ್ದ ರೈತನ ಶವ ಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದಿದೆ.
ಸಂತೋಷ ಸಿದ್ದಪ್ಪ ಮೇತ್ರಿ(41) ಕೃಷ್ಣಾ ನದಿಯಲ್ಲಿ ಕೊಚ್ಚಿಹೊಗಿದ್ದ.
ಕೃಷ್ಣಾ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದ ಸಂತೋಷ ಈತನ ಕುಟುಂಬ. ಜುಲೈ 29 ರಂದು ಜಾನುವಾರುಗಳಿಗೆ ಮೇವು ತರಲು ನದಿ ಬಳಿಯ ತನ್ನ ಜಮೀನಿಗೆ ತೆರಳಿದ್ದ, ಮೇವು ಮಾಡಿಕೊಂಡು ವಾಪಸ್ ಆಗುವಾಗ ಕೃಷ್ಣಾ ನದಿಯಲ್ಲಿ ಕೊಚ್ಚಿಹೋಗಿದ್ದ.
ಇಂದು ಬೆಳಗ್ಗೆ ಕುಡಚಿ ಪಟ್ಟಣದ ಕೃಷ್ಣಾ ನದಿ ಬಳಿ ಸಂತೋಷ ಮೇತ್ರಿ ಶವ ಪತ್ತೆಯಾಗಿದೆ.
ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.