22 ಗೃಹಬಳಕೆ ಸಿಲಿಂಡರ್ ವಶಕ್ಕೆ ಪಡೆದ ತಹಶಿಲ್ದಾರ ಬುರ್ಲಿ ನೇತ್ರತ್ವ ತಂಡ
ಕಾಗವಾಡ : ಅಕ್ರಮವಾಗಿ ಗೃಹ ಬಳಕೆ ಸಿಲಿಂಡರ್ ನ್ನು ವಾಣಿಜ್ಯ ಉಪಯೋಗಕ್ಕಾಗಿ ಬಳಸುತ್ತಿದ್ದರು. ಈ ಘಟನೆ ನಡೆದಿದ್ದು ಕಾಗವಾಡ ತಾಲೂಕಿನಲ್ಲಿ.
ಮಾಹಿತಿ ತಿಳಿದ ಕಾಗವಾಡ ತಹಶಿಲ್ದಾರರಾದ ರಾಜೇಶ ಬುರ್ಲಿ ನೇತೃತ್ವದಲ್ಲಿ ಆಹಾರ ಇಲಾಖೆಯ ಅಧಿಕಾರಿ ಸಂಗಮೇಶ ಬಾಗೇವಾಡಿ ಗುರುವಾರ(ಜ.16) ರಂದು ದಾಳಿ ನಡೆಸಿದ್ದಾರೆ.
22 ಸಿಲಿಂಡರ್ ಗಳನ್ನು ವಶಕ್ಕೆ ಪಡೆದುಕೊಂಡು ಕ್ರಮ ಜರುಗಿಸಿದ್ದಾರೆ.
ಗ್ರಾಮ ಆಡಳಿತಾಧಿಕಾರಿ ಕೆ.ಪಿ ಬಡಿಗೇರ , ಇಂಡಿಯನ್ ಆಯಿಲ್ ಸಂಸ್ಥೆಯ ಸಿಬ್ಬಂದಿ ಸುನೀಲ ಮಾಂಜರೆ ಉಪಸ್ಥಿತರಿದ್ದರು.