ಡಾ.ರಾಮಚಂದ್ರಪ್ಪ ಅವರಿಗೆ “ರಂಗ ಚೇತನ” ಪ್ರಶಸ್ತಿ
ಚಿತ್ರದುರ್ಗ : ರಂಗ ಭಂಡಾರ ಕಲಾ ಸಂಘ ಚಿತ್ರದುರ್ಗ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸಹಯೋಗದಲ್ಲಿ ಶ್ರಾವಣ ಸಂಭ್ರಮ
ಜಿಲ್ಲಾ ಪತ್ರಕರ್ತರ ಸಂಘ ಚಿತ್ರದುರ್ಗ ಶನಿವಾರ(ಆ.24) ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಡಾ. ಬಸವಕುಮಾರ ಮಹಾಸ್ವಾಮಿಗಳು ಆಡಳಿತ ಮಂಡಳಿ ಸದಸ್ಯರು, ಎಸ್.ಜೆ.ಎಂ.ವಿದ್ಯಾಪೀಠ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠ ಚಿತ್ರದುರ್ಗ ಇವರ ಅಧ್ಯಕ್ಷತೆಯಲ್ಲಿ ಕನ್ನಡ ಮತ್ತು ಸಂಸ್ಥೆ ಇಲಾಖೆ ಮತ್ತು ರಂಗಭಂಡಾರ ಕಲಾಸಂಘ ಕಾರ್ಯಕ್ರಮದಲ್ಲಿ ಡಾ.ರಾಮಚಂದ್ರಪ್ಪ ಅವರಿಗೆ *”ರಂಗ ಚೇತನ”* ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ. ರಾಮಚಂದ್ರಪ್ಪ ಎಸ್ ರವರು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಆಂಧ್ರಪ್ರದೇಶದ ಗಡಿಭಾಗದವರು, ಮತ್ತು ಮುಖ್ಯವಾಗಿ ವಿದ್ಯಾರ್ಥಿಯ ದೆಸೆಯಿಂದಲೇ ಜಾನಪದ ಕಲೆಗಳಲ್ಲಿ ತೊಡಗಿದರು ಮತ್ತು ಕನ್ನಡ ರಂಗಭೂಮಿಯ ಮೂಲಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ, ಹಲವಾರು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ತೊಡಗಿಸಿಕೊಂಡಿದ್ದಾರೆ. ಇವರು ಅಭಿನಯಿಸಿದ ನಾಟಕಗಳು ಹೆಜ್ಜೆಗಳು, ಮಾಂತೆ ಸ್ವಾಮಿ ಕಥಾ ಪ್ರಸಂಗ, ಸಂಗ್ಯಾ-ಬಾಳ್ಯಾ, ಶರೀಪಾ, ದ್ರೋಹ, ಅಂಬೇಡ್ಕರ್, ದೀವ್ಯಾ, ದಳವಾಯಿ ಇತ್ಯಾದಿ 50ಕ್ಕಿಂತ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ಮತ್ತು ಹಲವು ನಾಟಕಗಳನ್ನು ನಿರ್ದೇಶನ ಮಾಡುವುದರ ಮುಖಾಂತರವಾಗಿ ರಂಗಭೂಮಿಯಲ್ಲಿ ಎರಡು ದಶಕಗಳಿಂದಲೂ ಹೆಚ್ಚು ಕಾಲ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಇವರು ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿ ಸ್ನಾತಕೋತರ ಸಮಾಜಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ…
ಸಾಮಾಜಿಕ ರಚನೆಗಳಲ್ಲಿ ಪ್ರದರ್ಶನ ಕಲೆಗಳು ಮಹತ್ವದ ಪಾತ್ರವಹಿಸುತ್ತವೆ. ಇವು ಸಾಮಾಜಿಕ ಮೌಲ್ಯಗಳು, ಸಂಸ್ಕೃತಿಗಳು, ಹಾಗೂ ರಾಜಕೀಯ ಭಾವನೆಗಳ ಪ್ರತಿಬಿಂಬವಾಗಿಯೂ, ಅವುಗಳ ಪರಿವರ್ತನೆಗೆ ಪ್ರೇರಣೆ ನೀಡುವ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತವೆ.
ಪ್ರದರ್ಶನ ಕಲೆಗಳು, ಹಾಡುಗಾರಿಕೆ, ನಾಟಕ, ಮತ್ತು ನೃತ್ಯಗಳ ಮೂಲಕ ಸಮಾಜದ ವಿವಿಧ ಆಯಾಮಗಳನ್ನು ಪರಿವರ್ತಿಸುತ್ತವೆ. ಇವು ಸಮಾಜದ ವಿವಿಧ ಅಸಮಾನತೆ, ಅನ್ಯಾಯ ಮತ್ತು ಅಲೆಮಾರಿ ಜವಾಬ್ದಾರಿ ಗಳನ್ನು ಬಹಿರಂಗ ಪಡಿಸಲು ಸಹಾಯ ಮಾಡುತ್ತವೆ. ಜೊತೆಗೆ, ಇವು ಸಾಮಾಜಿಕ ಹೋರಾಟಗಳಿಗೆ ಚೇತನವನ್ನು ಒದಗಿಸುತ್ತವೆ.
ಉದಾ: ನಾಟಕಗಳು ಹಾಗೂ ಹಾಡುಗಾರಿಕೆಗಳು ಸಾಮಾಜಿಕ ಚರ್ಚೆಗಳನ್ನು ಸೃಷ್ಟಿಸಲು, ಸಾಮೂಹಿಕ ಚೇತನವನ್ನು ಪ್ರಬಲಗೊಳಿಸಲು, ಮತ್ತು ವಿವಿಧ ಸಮಾಜದ ವರ್ಗಗಳ ನಡುವಿನ ಸಂಬಂಧವನ್ನು ಪುನರ್ ಪರಿಕಲ್ಪನೆಗೆ ಸಹಾಯ ಮಾಡುತ್ತವೆ. ಇವುಗಳ ಮೂಲಕ ಕಲಾವಿದರು ತಾವು ಅಭಿಪ್ರಾಯಿಸುವ ಸಂದೇಶಗಳನ್ನು ನೇರವಾಗಿ ಸಮಾಜಕ್ಕೆ ತಲುಪಿಸುತ್ತಾರೆ.
ಈ ರೀತಿ, ಪ್ರದರ್ಶನ ಕಲೆಗಳು ಸಮಾಜದ ಬದಲಾವಣೆಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತವೆ.
ಆಧುನಿಕ ಸಮಾಜದಲ್ಲಿ ಪ್ರದರ್ಶನ ಕಲೆಗಳು ಒಂದು ಪ್ರಬಲ ಮಾರ್ಗವಾಗಿ ಅಭಿವೃದ್ಧಿ ಹೊಂದಿವೆ. ಇವು ಹೊಸ ಚಿಂತನೆ, ಸಂವಾದ ಮತ್ತು ಬದಲಾವಣೆಗಾಗಿ ವೇದಿಕೆಗಳನ್ನು ಒದಗಿಸುತ್ತವೆ, ಮತ್ತು ಜನರು ಮತ್ತು ಸಮುದಾಯಗಳ ನಡುವಿನ ಸಂಪರ್ಕವನ್ನು ಉಂಟು ಮಾಡುತ್ತವೆ..