ಶಿಕ್ಷಕರ ದಿನಾಚರಣೆ ನಿಮಿತ್ಯ, ಕಂಪ್ಯೂಟರ್ ವಿಷಯ ಕುರಿತು ಸ್ಪರ್ಧಾತ್ಮಕ ಪರೀಕ್ಷೆ, ಬಹುಮಾನ ವಿತರಣೆ
ಗೋಕಾಕ : ಶಿಕ್ಷಕರ ದಿನಾಚರಣೆ ನಿಮಿತ್ಯವಾಗಿ “ಸ್ವಾಮಿ ವಿವೇಕಾನಂದ ಕಂಪ್ಯೂಟರ್ ತರಬೇತಿ ಕೇಂದ್ರ ಗೋಕಾಕ” ವತಿಯಿಂದ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ವಿಷಯ ಕುರಿತು ಸ್ಪರ್ಧಾತ್ಮಕ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಕೇವಲ ಡಾ.ಸರ್ವಪಲ್ಲಿ ರಧಾಕೃಷ್ಣನವರ ಭಾವಚಿತ್ರವನ್ನು ಪೂಜೆ ಮಾಡದೇ, ವಿದ್ಯಾರ್ಥಿಗಳಿಗೆ ಒಳ್ಳೆಯ ಜ್ಞಾನವನ್ನು ನೀಡುವ ಉದ್ದೇಶದಿಂದ ತಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆಯುವವರಿಗೆ ಮಾತ್ರ ಕಂಪ್ಯೂಟರ್ ವಿಷಯದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ರೀತಿಯಲ್ಲಿ ಕಂಪ್ಯೂಟರ್ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವ ಉದ್ದೇಶದಿಂದ ಬಹುಮಾನಗಳನ್ನು ನೀಡುವ ಮೂಲಕ ಪರೀಕ್ಷೆಯನ್ಮು ನಡೆಸಿದರು.
ಸ್ವಾಮಿ ವಿವೇಕಾನಂದ ಕಂಪ್ಯೂಟರ್ ತರಬೇತಿ ಕೇಂದ್ರ, ಗೋಕಾಕ ಕೋರ್ಟ್ ಸರ್ಕಲ್ ಹತ್ತಿರವಿದ್ದು, ಹಲವು ಶಿಕ್ಷಣ ಪ್ರೇಮಿಗಳ ಸಹಯೋಗದಲ್ಲಿ ಐದು ಬಹುಮಾನಗಳನ್ನು ಇಟ್ಟು ಸ್ಪರ್ಧೆಯನ್ನು ನಡೆಸಿದರು.
ಸೆಪ್ಟೆಂಬರ್ 05 ರಂದು ಪರೀಕ್ಷೆ ನಡೆಸಿ, ಸೆಪ್ಟೆಂಬರ್ 06 ರಂದು ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಥಮ ಬಹುಮಾನ 5 ಸಾವಿರ ರೂ.ಗಳನ್ನು ಕ.ದ.ಸಂ.ಗೋಕಾಕನ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ರಮೇಶ ಯ. ಹರಿಜನ ನೀಡಿದರು. ದ್ವಿತೀಯ ಬಹುಮಾನ 3 ಸಾವಿರ ರೂ.ಗಳನ್ನು ವರದಿಗಾರರಾದ ಮಲ್ಲಪ್ಪ ನಿ. ಗೌಡರ ಅವರು ನೀಡಿದರು. ತೃತೀಯ ಬಹುಮಾನ 2 ಸಾವಿರ ರೂ.ಗಳನ್ನು ಬೆಣಚಿನಮರಡಿ ಬಿಜೆಪಿ ಕಾರ್ಯಕರ್ತರಾದ ಉದ್ದಪ್ಪ ಖಿಲಾರಿ ಹಾಗೂ ಚತುರ್ಥ ಬಹುಮಾನ 1500 ರೂ.ಗಳನ್ನು ಮೆಳವಂಕಿ ಸಮಾಜ ಸೇವಕರಾದ ಸೋಮರಾಯ ಸಿ. ಹುಳಕನ್ನವರ ಮತ್ತು ಪಂಚಮ ಬಹುಮಾನ 1 ಸಾವಿರ ರೂ.ಗಳನ್ನು ಶಿವರಾಜ ಮುತ್ತೇನ್ನವರ ಅವರು ನೀಡಿದರು.
ಈ ಕಂಪ್ಯೂಟರ್ ಪರೀಕ್ಷೆಯಲ್ಲಿ 200 ಕ್ಕೂ ಹೆಚ್ಚೂ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು, ಅದರಲ್ಲಿ ಕ್ರಮವಾಗಿ 1)ಐಶ್ವರ್ಯ ಮಾಲ್ಯಾಗೋಳ, 2)ಅಂಬಿಕಾ ಪೂಜೇರಿ, 3)ಸುಜಾತಾ ಬೆಣಚಿನಮರಡಿ 4) ಸಮೃದ್ಧಿ ಕಟಹಟ್ಟಿ 5)ರೂಪಾ ಸುಣಗಾರ ಮತ್ತು ವಿಠ್ಠಲ ಪಡೇನ್ನವರ ಬಹುಮಾನ ವಿಜೇತರಾಗಿದ್ದಾರೆ.
ಬಿ.ಎ.ಹುಲಿಕಟ್ಟಿ ಅವರು ಸ್ವಾಮಿ ವಿವೇಕಾನಂದ ಕಂಪ್ಯೂಟರ್ ತರಬೇತಿ ಕೇಂದ್ರದ ಸಂಸ್ಥಾಪಕರಾಗಿದ್ದು, ಈ ಕಂಪ್ಯೂಟರ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಕಂಪ್ಯೂಟರ್ ಜ್ಞಾನ ನೀಡುತ್ತಿದ್ದಾರೆ.