ರಾಜ್ಯ ಸರಕಾರ ಮೀಸಲಾತಿ ನೀಡಲು ಮೀನಮೇಷ ಮಾಡುತ್ತಿದೆ : ಭಾಸ್ಕರ ಹಿರಮೇತ್ರಿ
ಯರಗಟ್ಟಿ: ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಸುಪ್ರೀಂಕೋರ್ಟ್ ಮಹತ್ತರ ತೀರ್ಪು ನೀಡಿದ್ದರೂ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿರುವುದನ್ನು ವಿರೋಧಿಸಿ ತಾಲೂಕಾ ದಲಿತ ಸಂಘಟನೆಗಳ ವತಿಯಿಂದ ಪಟ್ಟಣದ ಸಂಗೋಳ್ಳಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ದಲಿತ ಸಂಘದ ಮುಖಂಡ ಭಾಸ್ಕರ ಹಿರಮೇತ್ರಿ ಪರಿಶಿಷ್ಟ ಜಾತಿಗಳಲ್ಲಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅತಿ ಹೆಚ್ಚು ಹಿಂದುಳಿದಿರುವ ಜಾತಿಗಳ ಅಭಿವೃದ್ಧಿಯ ಸದುದ್ದೇಶದಿಂದ ಆಯಾ ಜಾತಿಗಳಿಗೆ ಸೇರಿದವರಿಗೆ ಮೀಸಲಾತಿ ಸೌಲಭ್ಯ ತಲುಪಲು ಒಳಮೀಸಲಾತಿ ನೀಡುವ ಸಾಂವಿಧಾನಿಕ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೂರ್ಣ ಪೀಠವು ಆಗಸ್ಟನಲ್ಲಿ ತಿರ್ಪು ನೀಡಿದೆ ರಾಜ್ಯ ಸರಕಾರ ಮೀಸಲಾತಿ ನೀಡಲು ಮೀನಮೇಷ ಮಾಡುತ್ತಿದೆ ಎಂದು ಸರಕಾರ ವಿರುದ್ಧ ಹರಿಹಾಯ್ದರು.
ಈ ವೇಳೆ, ಯಲ್ಲಪ್ ಪಟ್ಯಪ್ಪನವರ, ಸಂತೋಷ್ ಚನ್ನ ಮೇತ್ರಿ, ಸುರೇಶ್ ತಮ್ಮನವರ್, ಹನುಮಂತ್ ನರೇರ್,
ಬಾಬು ಚನ್ನ ಮೇತ್ರಿ, ರಾಜು ದಾಸನಾಳ, ಲಂಕೇಶ್ ಮೇತ್ರಿ, ಪ್ರಕಾಶ್ ತಳವಾರ್, ಯಶ್ವಂತ್ ನೀಲಪ್ಪನವರ್, ಮಾಂತೇಶ್ ಚನ್ನ ಮೇತ್ರಿ, ಸುನಿಲ್ ಚನ್ನ ಮೇತ್ರಿ, ಲಕ್ಕಪ್ಪ ಜಗದಾರ್, ಹನುಮಂತ ಕಳಸಪ್ಪನವರ್, ಕರಿಯಪ್ಪ ಕೊಡ್ಲಿವಾಡ, ಇನ್ನುಳಿದ ದಲಿತ ಸಂಘದ ಪದಾಧಿಕಾರಿಗಳು ಇದ್ದರು