ಹಲವು ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೇರವೇರಿಸಿದ ಚಾಲನೆ ನೀಡಿದ ಶಾಸಕ ರಾಜು ಕಾಗೆ
ಕಾಗವಾಡ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷರು ಹಾಗೂ ಕಾಗವಾಡ ಮತಕ್ಷೇತ್ರದ ಶಾಸಕರಾದ ರಾಜು ಅಣ್ಣಾ ಕಾಗೆ ಅವರು ಶನಿವಾರ (ನ.23) ರಂದು ಕ್ಷೇತ್ರದ ಹಲವಾರು ರಸ್ತೆ ಸುಧಾರಣೆ ಮತ್ತೆ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿದರು.
ಕಾಗವಾಡ ತಾಲೂಕಿನ ಹಣಮಾಪೂರ-ತೇವರಟ್ಟಿ (ಅಮೋಘಸಿದ್ದ ದೇವಸ್ಥಾನ) ರಸ್ತೆ ಖಡೀಕರಣ ಮತ್ತು ಡಾಂಬರೀಕರಣ, ತೇವರಟ್ಟಿ-ಖೋತ ತೋಟ ರಸ್ತೆ ಖಡೀಕರಣ ಮತ್ತು ಡಾಂಬರೀಕರಣ, ಶಿವನೂರ – ಗುಂಡೇವಾಡಿ ಒಳಗಿನ ರಸ್ತೆ ಖಡೀಕರಣ ಮತ್ತು ಡಾಂಬರೀಕರಣ, ಅಗ್ರಾಣಿ ಇಂಗಳಗಾವ-ಮಸರಗುಪ್ಪಿ (ವಾಯಾ ಚಿಪ್ಪರಗಿ ತೋಟ) ರಸ್ತೆ ಖಡೀಕರಣ ಮತ್ತು ಡಾಂಬರೀಕರಣ, ಅಬ್ಬಿಹಾಳ ಗ್ರಾಮದಿಂದ ಮಾನೆ ತೋಟದ ರಸ್ತೆ ಖಡೀಕರಣ ಮತ್ತು ಡಾಂಬರೀಕರಣ, ಮಾಯನಟ್ಟಿ-ಅಬ್ಬಿಹಾಳ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಮುಖಂಡರು, ಗ್ರಾಮಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಹರಿಶ್ಚಂದ್ರ ವಗ್ಗಿ, ಕಾಗವಾಡ