ರಾಮಗೊಂಡ ಪಾಟೀಲ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆ
ಅಥಣಿ : ಸರಕಾರಿ ನೌಕರರ ಸಂಘದ ಅಥಣಿ ತಾಲೂಕಾ ಅಧ್ಯಕ್ಷರಾಗಿ ಆರೋಗ್ಯ ಇಲಾಖೆಯ ರಾಮಗೊಂಡ ಪಾಟೀಲ ಎರಡನೇ ಬಾರಿಗೆ ಆಯ್ಕೆಯಾದರು. ರಾಜ್ಯ ಪರಿಷತ್ ಸದಸ್ಯರಾಗಿ ಅರಣ್ಯ ಇಲಾಖೆಯ ರಾಜೇಶ್ ಪಾಟೀಲ, ಖಜಾಂಚಿಯಾಗಿ ಕಂದಾಯ ಇಲಾಖೆಯ ಈರಪ್ಪ ನಿಂಗವ್ವಗೊಳ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ರಾಮಗೊಂಡ ಪಾಟೀಲ, ತಾಲೂಕಿನ ಎಲ್ಲ ಸರಕಾರಿ ನೌಕರರ ಸಹಯೋಗದಲ್ಲಿ ಸೌಹಾರ್ದಯುತವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು. ಅವರು ಸರಕಾರಿ ನೌಕರರ ಮೇಲೆ ಹಲ್ಲೆಯಂತಹ ಪ್ರಕರಣಗಳು ನಡೆದಿದ್ದು, ಇಂತಹ ಸಂದರ್ಭಗಳಲ್ಲಿ ನಾವೆಲ್ಲ ಕೂಡಿ ತಾಲೂಕಿನ 2380 ಸರಕಾರಿ ನೌಕರರ ಹಿತ ಕಾಪಾಡುತ್ತೇವೆ ಎಂದು ಹೇಳಿದರು.
ಜಿಲ್ಲೆಯ ಅನೇಕ ನಕಲಿ ಪತ್ರಕರ್ತರು ಸರಕಾರಿ ಕಛೇರಿಗೆ ಬಂದು ನೌಕರರನ್ನು ಪಿಡಿಸುತ್ತಿದ್ದು, ಇಂತಹ ಪತ್ರಕರ್ತರಿಂದ ರಕ್ಷಣೆ ಹೇಗೆ ಮಾಡುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಮಗೊಂಡ ಪಾಟೀಲ, ಕೆಲವೇ ದಿನಗಳಲ್ಲಿ ಸಂಘದ ಪದಾಧಿಕಾರಿಗಳು ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು ಹಾಗೂ ನಮ್ಮ ಈ ಕಾರ್ಯಕ್ಕೆ ಅಥಣಿ ಪತ್ರಕರ್ತರು ನಮ್ಮ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿ.ಪಂ ಅಧಿಕಾರಿ ಮತ್ತು ನೌಕರರ ಸಂಘದ ಮಾಜಿ ಅಧ್ಯಕ್ಷ ವೀರಣ್ಣಾ ವಾಲಿ ಮಾತನಾಡಿ, ಅಥಣಿ ಸರಕಾರಿ ನೌಕರರ ಸಂಘ ರಾಜ್ಯದಲ್ಲಿಯೇ ಮಾದರಿ ಸಂಘ ಎಂದು ಹೆಸರು ಮಾಡಿದೆ, ಅಥಣಿ ಸರಕಾರಿ ನೌಕರರ ಸಂಘ ನೌಕರರ ಅನಕೂಲಕ್ಕಾಗಿ ಸಹಕಾರಿ ಸಂಘದ ಸ್ಥಾಪನೆ ಮತ್ತು ನೌಕರರ ಭವನವನ್ನೂ ಕೂಡ ನಿರ್ಮಿಸಲಾಗಿದೆ. ಪ್ರಸಕ್ತ ಅವಧಿಯಲ್ಲಿಯೂ ಕೂಡ ರಾಮಗೊಂಡ ಪಾಟೀಲ ಅಧ್ಯಕ್ಷತೆಯಲ್ಲಿ ಸಂಘದ ಚಟುವಟಿಕೆಗಳು ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಮಾಜಿ ಅಧ್ಯಕ್ಷ ರಾಮಣ್ಣಾ ಧರಿಗೌಡರ, ನೌಕರರ ಸಂಘದ ಶ್ರೀಕಾಂತ ಮಾಕಾಣಿ, ಪ್ರವೀಣ ಹುಣಸಿಕಟ್ಟಿ, ಸುರೇಶ ವಾಲಿಕಾರ, ರಮೇಶ ಚೌಗಲಾ, ದಶರಥ ಮದಭಾವಿ, ಎಸ್ ಪಿ ಮಾದರ, ಸುರೇಶ ಜತ್ತಿ, ರವಿ ಅಂಗಡಿ, ಪರಶುರಾಮ ಸನದಿ, ಮಲ್ಲಪ್ಪ ಅಸ್ಕಿ, ಧನಪಾಲ ಹಳ್ಳೂರ, ಎಮ್ ಪಿ ಚನಗೌಡರ, ಮಲ್ಲಪ್ಪ ಸೋಮನ್ನವರ, ಎಸ್ ಟಿ ಮಜ್ಜಗಿ, ಓಗೆಪ್ಪ ಅರಟಾಳ, ಮಹಾಂತೇಶ ಕೋರಿ ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಜಯ್ ಮೇಲ್ಗಡೆ, ಅಥಣಿ