ಭೀಕರ ಅಪಘಾತ : ದಂಪತಿ ಸಾವು
ಕಾಗವಾಡ : ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ನೀರು ತುಂಬಿದ ಹಳ್ಳಕ್ಕೆ ಬಿದ್ದ ಪರಿಣಾಮ ದಂಪತಿಗಳಯ ಸಾವನ್ನಪ್ಪಿರುವ ಘಟನೆ ತಾಲೂಕಿನ ಮಂಗಸೂಳಿ ಐನಾಪುರ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಕೂಪಿರೆ ಗ್ರಾಮದ ಆದರ್ಶ ಯುವರಾಜ್ ಪಾಂಡವ್ (27) ಈತನು ಫೋರ್ಡ್ ಕಾರ್ ತೆಗೆದುಕೊಂಡ, ಮಂಗಸೂಳಿ ಐನಾಪುರ ರಸ್ತೆಯಲ್ಲಿ ಪ್ರಯಾಣಿಸುವಾಗ ರಸ್ತೆ ತಿರುವಿನಲ್ಲಿ ಕಾರಿನ ನಿಯಂತ್ರಣ ತಪ್ಪಿ ಪಕ್ಕದ ಹಳ್ಳಕ್ಕೆ ಮುಗುಚಿ ಬಿದ್ದಿದೆ. ಸ್ಥಳದಲ್ಲಿ ಆದರ್ಶ ಮತ್ತು ಆತನ ಪತ್ನ ಶಿವಾನಿ ಆದರ್ಶ ಪಾಂಡವ್ (20) ಮೃತಪಟ್ಟಿದ್ದಾರೆ.
ಕಾರಿನಲ್ಲಿ ಒಟ್ಟು ಏಳು ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ರೂಪಲಿ ಗಾಡೇಕರ, ಕುನಾಲ ಗಾಡೇಕರ್, ರಜವೀರ ಪಾಂಡವ್, ಅನವಿ ಪಾಂಡವ್, ಪೂಜಾ ಬಾಮನೆ ಇವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಕುರಿತು ಕಾಗವಾಡ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಹರಿಶ್ಚಂದ್ರ ವಗ್ಗಿ, ಕಾಗವಾಡ