ಪಂಚಮಸಾಲಿ 2ಎ ಮೀಸಲಾತಿ ಅಸಂವಿಧಾನಿಕ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಸಮಾಜಕ್ಕೆ ನೋವಾಗಿದೆ
ಬೆಳಗಾವಿ : ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಕೇಸ್ ಹ್ಯಾಂಡಲ್ ಮಾಡುತ್ತಿರುವ ವಕೀಲರಾದ ದಿನೇಶ್ ಪಾಟೀಲ ಹಿರಿಯ ನ್ಯಾಯವಾದಿಗಳು ಇಂದು ಸುದ್ದಿಗೋಷ್ಠಿಯಲ್ಲಿ ನಡಿಸಿ ಮಾತನಾಡಿದ ಅವರು ಪಂಚಮಸಾಲಿ 2ಎ ಮೀಸಲಾತಿ ಅಸಂವಿಧಾನಿಕ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಸಮಾಜಕ್ಕೆ ನೋವಾಗಿದೆ ಎಂದರು.
ಮೀಸಲಾತಿ ವಿಷಯ ಸುಪ್ರೀಂ ಕೋರ್ಟ್ ನಲ್ಲಿ ಇದೆ, ಉಚ್ಚ ನ್ಯಾಯಾಲಯದಲ್ಲಿ ಇದೆ. ಅಲ್ಲದೇ, ಹಿಂದುಳಿದ ವರ್ಗಗಳ ಆಯೋಗದವರು ವರದಿ ಸಲ್ಲಿಸಿಲ್ಲ…ಆದರೂ ಮುಖ್ಯಮಂತ್ರಿ ಹೇಳಿಕೆ ಆಘಾತ ತಂದಿದೆ.
ಮುಖ್ಯಮಂತ್ರಿಗಳು ಮೊದಲು ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಿಕೊಳ್ಳಬೇಕು…. ಕೂಡಲೇ 2ಎ ಮೀಸಲಾತಿಗೆ ಸಂಬಂಧಿಸಿದಂತೆ ವರದಿ ತರಿಸಿಕೊಂಡು ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬೇಕು. ಆಮೇಲೆ ಕೊಡುವುದು ಬಿಡುವುದು ವಿಚಾರ ಬರುತ್ತದೆ...ಆದರೆ ಮುಖ್ಯಮಂತ್ರಿಗಳ ಹೇಳಿಕೆ ಮೀಸಲಾತಿ ಕೊಡಬಾರದೆಂದೇ ನಿರ್ಧಾರ ಮಾಡಿದಂತಿದೆ ಎಂದು ಹಿರಿಯ ನ್ಯಾಯವಾಧಿಗಳಾದ ದಿನೇಶ್ ಪಾಟೀಲ ಅವರು ಆರೋಪ ಮಾಡಿದರು.