ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಉಕ್ಕಿನ ಮಹಿಳೆ ಅಕ್ಕ ಮಾಯಾವತಿ ಅವರ ಹುಟ್ಟು ಹಬ್ಬವನ್ನು ರೋಗಿಗಳಿಗೆ ಹಣ್ಣುಹಂಪಲ ಹಂಚುವ ಮೂಲಕ ಆಚರಣೆ
ಬೆಳಗಾವಿ : ಅಶಕ್ತ ಸಮಾಜದ ಶಕ್ತಿ ಸ್ವರೂಪವಾದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಉಕ್ಕಿನ ಮಹಿಳೆ ಅಕ್ಕ ಮಾಯಾವತಿ ಅವರ 69ನೇ ಹುಟ್ಟು ಹಬ್ಬವನ್ನು ರೋಗಿಗಳಿಗೆ ಹಣ್ಣುಹಂಪಲ ಹಂಚುವ ಮೂಲಕ ಅತಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಹುಸಾಹೇಬ ಕಾಂಬಳೆ ಹೇಳಿದರು.
ಅವರು ಚಿಕ್ಕೊಡಿ ಜಿಲ್ಲಾ ಬಹುಜನ ಸಮಾಜ ಪಕ್ಷದ ವತಿಯಿಂದ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣುಹಂಪಲ ಹಂಚುವುದರ ಮೂಲಕ ಮಾಯಾವತಿಯವರ ಹುಟ್ಟುಹಬ್ಬವನ್ನು ಆಚರಿಸಿ ಮಾತನಾಡಿದರು.
ಮಾಯಾವತಿ ಅವರು ರಾಷ್ಟ್ರಮಟ್ಟದಲ್ಲಿ ಪ್ರಭಾವಿಯಾಗಿದ್ದು ಉತ್ತರ ಪ್ರದೇಶದಲ್ಲಿ ತಮ್ಮ ಶ್ರೇಷ್ಠ ಛಾಪು ಮೂಡಿಸಿದ್ದರು ಅವರು ಮೊದಲು 1995 ರಲ್ಲಿ ಮುಖ್ಯಮಂತ್ರಿಯಾಗಿ ದಲಿತ ಮಹಿಳೆಯೊಬ್ಬರು ಇಷ್ಟು ಉನ್ನತ ಮಟ್ಟದ ಆಡಳಿತವನ್ನು ತಲುಪಿದ್ದು ಇದೇ ಮೊದಲು ಇನ್ನು 2007 ರಲ್ಲಿ ಉತ್ತರ ಪ್ರದೇಶ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದ ಬಹುಪಾಲು ಸ್ಥಾನಗಳನ್ನು ಗೆದ್ದುಕೊಂಡು ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ ಆದ ಕಾರಣ ಇವತ್ತು ಅವರ ಅತ್ಯಂತ ಸರಳ ರೀತಿಯಲ್ಲಿ ಅವರ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿದ್ದೆವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಅಜೀತ ಕಾಂಬಳೆ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ ಕಾಂಬಳೆ,ನ್ಯಾಯವಾದಿಗಳಾದ ಗೀತಾ ಕಾಂಬಳೆ,ಪೂಜಾ ಐಹೊಳೆ,ರಾಬೀಯಾಬಾನು,ರಾಮು ಪುಜಾರಿ,ಸದಾಶಿವ ಕಾಂಬಳೆ, ಶ್ರಾವಣ ಕಾಂಬಳೆ,ಸದಾಶಿವ ಗೊಂದಳೆ,ಮುತ್ತಪ್ಪ ಕಾಂಬಳೆ,ಕೀರ್ತಿ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು