ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸಂತೋಷ ಅಣ್ಣಾ ಅಭಿಮಾನಿ ಬಳಗದ ವತಿಯಿಂದ ಸವಿನೆನಪಿನ ಕಾಣಿಕೆ
ಗೋಕಾಕ : 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭದಲ್ಲಿ ಕೈಲಾಸವಾಸಿ ಸಂತೋಷ ಕಾಂಡ್ರೆ ಅವರ “ಸಂತೋಷ ಅಣ್ಣಾ ಅಭಿಮಾನಿ ಬಳಗ” ದ ವತಿಯಿಂದ ಮೇಡಲ್ ಹಾಗೂ ಸವಿ ನೆನಪಿನ ಕಾಣಿಕೆಯನ್ನು ವಿತರಣೆ ಮಾಡಲಾಯಿತು.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಡಾ|| ಅಂಬೇಡ್ಕರ್ ಸಮತಾ ಶಿಕ್ಷಣ ಸಮಿತಿ ಶಿಂಧಿಕುರಭೇಟಿನ ಮಾಧ್ಯಮಿಕ ಶಾಲೆಯಲ್ಲಿ ಬುಧವಾರ(ಮಾರ್ಚ್ 5) ರಂದು ಮಾಧ್ಯಮಿಕ ಶಾಲಾ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು.
ಸಮಾರಂಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಶಿಂಧಿಕುರಭೇಟ ಗ್ರಾಮ ಘಟಕ್ ವತಿಯಿಂದ ಹಾಗೂ ಸಂತೋಷ್ಅಣ್ಣಾ ಅಭಿಮಾನಿ ಬಳಗ ವತಿಯಿಂದ ಮೆಡಲನ್ನು ಹಾಗೂ ಸವಿ ನೆನಪಿನ ಕಾಣಿಕೆ ಕೊಡಲಾಯಿತು ಹಾಗೂ ಗುರುಗಳಿಗೆ ಹಾಗೂ ಗುರುಮಾತೆರಿಗೆ ಸತ್ಕಾರ ಹಾಗೂ ಸನ್ಮಾನ ಮಾಡಲಾಯಿತು.
ಇದೇ ವೇಳೆ ಶಿಂಧಿಕುರಭೇಟ ಗ್ರಾಮ ಘಟಕ ಅಧ್ಯಕ್ಷರು. ಭೀಮಶಿ.ರಾ.ಬೆಳಗಲಿ, ವಿಜಯ ಲಕ್ಷ್ಮಿ ಸಂತೋಷ್ ಕಂಡ್ರಿ, ಯಾಸೀನ್ ಕುಡುಚಿಕರ್, ತಮ್ಮನಾ ಅರಭಾವಿ, ಕಾಶಪ್ಪ ನಿಂಗನೂರ್, ಮಲಿಕ್ ತುಕ್ಕಾನಟ್ಟಿ, ಶಿವಾನಂದ್ ಸಿ ಕಂಡ್ರಿ, ಬಡಪ್ಪಾ. ಬಂಡಿವಡ್ಡರ್. ಶಶಿಕಾಂತ್ ಪವಾರ್, ಇಮ್ರಾನ್ ಪಠಾಣ, ಪ್ರಕಾಶ ಬೀರನಾಳಿ ಮತ್ತು ಶಿಂದಿಕುರಬೇಟ ಗ್ರಾಮದ ಹಿರಿಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.