ಒಳಮೀಸಲಾತಿ ವಿಂಗಡಣೆ ವಿರುದ್ದ ಭೋವಿ ವಡ್ಡರ ಯುವ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ.
ಬೆಳಗಾವಿ : ಸರ್ಕಾರ ಒಳಮೀಸಲಾತಿ ವಿಂಗಡಣೆಗೆ ಮುಂದಾಗಿರುವುದನ್ನು ವಿರೋಧಿಸಿ ಇಂದು ಬೆಳಗಾವಿ ಸುವರ್ಣ ಸೌಧ ಎದುರಿಗಿನ ಕೊಂಡಸ್ಕೊಪ್ಪದಲ್ಲಿ ಭೋವಿ ವಡ್ಡರ, ಬಂಜಾರ, ಲಮಾಣಿ, ಕೊರಮ, ಕೊರಚ ಜಾತಿಗಳ ಮಹಾ ಒಕ್ಕೂಟ ಬೃಹತ್ ಹೋರಾಟ ಕೈಗೊಂಡಿದ್ದರು,

ಇದೆ ಸಂದರ್ಭದಲ್ಲಿ ಭೋವಿ ವಡ್ಡರ ಯುವ ವೇದಿಕೆ ಜಿಲ್ಲಾಧ್ಯಕ್ಷ ಸಿದ್ದಾರ್ಥ್ ಪಾತ್ರೋಟ್ ಮಾತನಾಡಿ ನಮ್ಮ ಜನಾಂಗದ ಬಾಂಧವರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದವರು. ರಾಜ್ಯ ಸರ್ಕಾರ ಅವೈಜ್ಞಾನಿಕ, ಅಸಾಂವಿಧಾನಿಕವಾಗಿ ಕಾನೂನು ಬಾಹಿರ ಮತ್ತು ದ್ವೇಷ ಅಶಾಂತಿಗೆ ಕಾರಣವಾಗಿರು ಸಂವಿಧಾನ ಬಾಹಿರ ಒಳಮೀಸಲಾತಿ ವರ್ಗೀಕರಣವು ಭವಿಷ್ಯದ ಮಕ್ಕಳ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸಲಿದೆ. ಹಾಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು. ಸರ್ಕಾರ ಈ ನಿರ್ಣಯದಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಮುಂಬರುವ ದಿನಳಗಲ್ಲಿ ಹೋರಾಟ ತೀರ್ವ ಸ್ವರೂಪ ಪಡೆಯುವುದು ಎಂದು ತಿಳಿಸಿದರು.
ಇನ್ನು ಪ್ರತಿಭಟನೆಯಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಿಂದ ಜನರು ಭಾಗವಹಿಸಿದ್ದರು ಹಾಗೂ ಇದೆ ಸಂದರ್ಭದಲ್ಲಿ ಅಖಿಲ್ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಾರ್ಥ್ ಪಾತ್ರೋಟ ಹಾಗೂ ರಾಜ್ಯ ಸಂಚಾಲಕರಾದ ಸುನೀಲ್ ದೋತ್ರೆ ಮತ್ತು ಬಾಗಲಕೋಟೆ ಜಿಲ್ಲಾಧ್ಯಕ್ಷ ಬಸವರಾಜ್ ಪಾತ್ರೋಟ ಹಾಗೂ ರಾಜ್ಯದ ಭೋವಿ ವಡ್ಡರ ಸಮಾಜದ ಹಿರಿಯರು ಹಾಗೂ ಯುವಕರು, ಮಹಿಳಾ ಮುಖಂಡರು ಉಪಸ್ಥಿತರಿದ್ದರು.