ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವುದು ಮುಖ್ಯ : ತಾಲೂಕಾ ಸಂಯೋಜನಕರಾದ ಮಲ್ಲಪ್ಪ ತಂಬೂರಿ
ಗೋಕಾಕ : ಮಕ್ಕಳಿಗೆ ಬೇಸಿಗೆ ಸಿಬಿರದಲ್ಲಿ ನೈತಿಕ ಮೌಲ್ಯ, ಡಿಜಿಟಲ್ ಸಾಮರ್ಥ್ಯ, ಬೌದ್ಧಿಕ ಮಟ್ಟ ಹೆಚ್ಚಿಸುವುದು, ಕಡಿಮೆ ಸಮಯದಲ್ಲಿ ಗ್ರಂಥಾಲಯದಲ್ಲಿ ಇರುವ ಸಾಮಗ್ರಿಗಳನ್ನು ಬಳಸಿ ಹೆಚ್ಚಿನ ಸಾಮರ್ಥ್ಯ ಪಡೆಯಲು, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕಲಿಸುವುದು ಮುಖ್ಯ ಎಂದು ಶಿಕ್ಷಣ ಪೌಂಡೇಶನ್ ನ ಗೋಕಾಕ ತಾಲೂಕಾ ಸಂಯೋಜನಕರಾದ ಮಲ್ಲಪ್ಪ ತಂಬೂರಿಯವರು ಹೇಳಿದರು.
ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದಲ್ಲಿ ಗುರುವಾರ(ಎಪ್ರಿಲ್ 24) ರಂದು ಆರ್.ಡಿ.ಪಿ.ಆರ್ “ಓದುವ ಬೆಳಕು” ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ತಳಕಟನಾಳ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ತಳಕಟನಾಳ ಗ್ರಾಮ ಪಂಚಾಯತಿಯ ಸದಸ್ಯರಾದ ಲಕ್ಷ್ಮಣ ಸೊಗಲದ, ರವೀಂದ್ರ ದೊಡಮನಿ, ನಿಂಗಪ್ಪ ಗೋಟೂರ ಹಾಗೂ ಗ್ರಂಥಾಲಯದ ಮೇಲ್ವಿಚಾರಕರಾದ ಗೌರವ್ವ ಗೋಟೂರ ಮತ್ತು ಗ್ರಾಮದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.