ನಮಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಿ, ಎಂದು ಪರದಾಡುತ್ತಿರುವ ಜನರು, ಕ್ಯಾರೆ ಎನ್ನದ ಶಾಸಕರು, ಗ್ರಾ.ಪಂ.ಸದಸ್ಯರು ಹಾಗೂ ಅಧಿಕಾರಿಗಳು.
ಕಿತ್ತೂರು : ಊರಿಂದ 500 ಮೀಟರ್ ದೂರ ಆರು ಮನೆಗಳಿವೆ, ಆ ಮನೆಗಳಿಲ್ಲಿ 20 ಕ್ಕೂ ಅಧಿಕ ಜನರು, ಮತ್ತು ವಿದ್ಯಾರ್ಥಿಗಳು. ಈ ಜನರಿಗೆ ಸರಿಯಾಗಿ ಕುಡಿಯೋ ನೀರಿನ ವ್ಯವಸ್ಥೆ ಇಲ್ಲ, ಜೊತೆಗೆ ಊರಿನ ಮುಖ್ಯ ರಸ್ತೆಗೆ ಸೇರಲು ಸರಿಯಾದ ರಸ್ತೆ ವ್ಯವಸ್ತೆಯು ಇಲ್ಲ, ಮುಖ್ಯವಾಗಿ ವಿದ್ಯಾರ್ಥಿಗಳಿಗೆ ರಾತ್ರಿ ವೇಳೆ ಓದಲು ಬೆಳಕಿನ ವ್ಯವಸ್ಥೆಯು ಇಲ್ಲ. ಇವು ಕಥೆಯಲ್ಲಿ ಬರುವ ಸನ್ನಿವೇಶಗಳಲ್ಲ ಇವು ನಿಜವಾಗಿಯು ನಡೆದ ಸತ್ಯ ವಾಸ್ತವ ಸನ್ನಿವೇಶಗಳು. ಇದೆಲ್ಲ ನಡೆದಿದ್ದು ಎಲ್ಲಿ ಅಂತಿರಾ ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ..
ಇದು ನಡೆದಿದ್ದು ಕುಂದಾನಗರಿ ಬೆಳಗಾವಿ ಜಿಲ್ಲೆಯ ರಾಣಿ ಚನ್ನಮ್ಮಳ ಕಿತ್ತೂರು ತಾಲೂಕಿನ ಮಾರ್ಗನಕೊಪ್ಪ. ಗ್ರಾಮದಲ್ಲಿ. ಗ್ರಾಮದಿಂದ 500 ಮೀಟರ್ ಹೊರ ವಲಯದಲ್ಲಿರುವ ಈ ಆರು ಮನೆಗಳಿಗೆ ಯಾವುದೇ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ವ್ಯವಸ್ಥಿತ ರಸ್ತೆಯಾಗಲಿ, ಕುಡಿಯುವ ನೀರಿನ ವ್ಯವಸ್ಥೆಯಾಗಲಿ, ವಿದ್ಯುತ್ ವ್ಯವಸ್ತೆಯಾಗಲಿ ಇಲ್ಲ. ಇಲ್ಲಿಯ ಜನರ ಗೋಳು ಕೇಳುವವರ್ಯಾರು.

ಗ್ರಾಮದ ರಾಜಕೀಯ ನಾಯಕರಾಗಲಿ, ಕಿತ್ತೂರು ಕ್ಷೇತ್ರದ ಶಾಸಕರಾಗಲಿ ಇವರ ಕಡೆ ಗಮನ ಹರಿಸುತ್ತಿಲ್ಲ. ಸಂಬಂದಪಟ್ಟ ಎಲ್ಲ ಅಧಿಕಾರಿಗಳಿಗೂ ಇವರು ಮನವಿ ಸಲ್ಲಿಸಿದರು ಕ್ಯಾರೆ ಅನ್ನುತ್ತಿಲ್ಲ.
ಮಾರ್ಗನಕೊಪ್ಪದ ಈ ಆರು ಮನೆತನದ ಜನರು , ಗ್ರಾಮ ಪಂಚಾಯತಿಗೆ, ಕಿತ್ತೂರು ಶಾಸಕರಿಗೆ ಮತ್ತೆ ಸಂಬಂದಪಟ್ಟ ಎಲ್ಲ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾರು ಇವರತ್ತ ನೋಡುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಹಿಂತಹ ಮನೆಗೆಳು ನೆನಪಿಗೆ ಬರುತ್ತವೆ ಎಂದು ಅಲ್ಲಿಯ ಜನರ ಅಳಲು. ಇಲ್ಲಿನ ವಿದ್ಯಾರ್ಥಿಗಳು ಧೀಪದ ಅಂಗಳಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ವಿಷಾದಣಿಯ.
ನಮಗೆ ಮೂಲಭೂತ ಸೌಕರ್ಯಗಳಿಲ್ಲ, ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಇಲ್ಲಿಯ ಜನರು ಪರದಾಡುತ್ತಿರುವುದು ನಿಜಕ್ಕೂ ಅಮಾನವಿಯತೆಯ ಸ್ವರೂಪದ್ದಾಗಿದೆ.
ಇನ್ನಾದಾರೂ ಸಂಬಂದಪಟ್ಟ ಗ್ರಾಮ ಪಂಚಾಯತಿಯವರು ಹಾಗೂ ಕಿತ್ತೂರು ಶಾಸಕರು ಈ ವಿಚಾರವಾಗಿ ಪರಿಗಣಿಸಿ, ಕೇವಲ ಆರು ಮನೆಗಳು ಎಂದು ಅಲ್ಲಗಳಿಯದೇ ಇಲ್ಲಿಯ ಜನರ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.