ರಾಜು ದುಮಾಳೆ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದ ಬೆಳಗಾವಿ ಜಿಲ್ಲಾ ವರಿಷ್ಠಾಧಿಕಾರಿ…!!
ಘಟಪ್ರಭಾ : ಬೆಳಗಾವಿ ಜಿಲ್ಲೆಯ ಗೋಕಾಕ ಉಪವಿಭಾಗದ ಘಟಪ್ರಭಾ ಪೋಲಿಸ್ ಠಾಣೆಯ ತನಿಖಾ ಸಹಾಯಕ ಕರ್ತವ್ಯ ನಿರ್ವಹಿಸುತ್ತಿರುವ(ಸಿ.ಪಿ.ಸಿ) ಪೋಲಿಸ್ ಕಾನ್ಸ್ಟೆಬಲ್ ರಾಜು ದುಮಾಳೆ ಅವರು 01ಪ್ರಕರಣದಲ್ಲಿ ಅಪರಿಚಿತ ಶವದ ಬಗ್ಗೆ ವಿಚಾರಣೆ ಮಾಡಿ ಅದು ಕೊಲೆ ಪ್ರಕರಣವೆಂದು ಪತ್ತೆ ಹಚ್ಚುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದನ್ನು ಗುರುತಿಸಿ ನಿಮ್ಮ ಕರ್ತವ್ಯವು ಶ್ಲಾಘನೀಯವಾಗಿದೆ ಎಂದು ಬೆಳಗಾವಿ ಜಿಲ್ಲಾ ವರಿಷ್ಠಾಧಿಕಾರಿ ಡಾ ಭೀಮಾಶಂಕರ ಎಸ್ ಗುಳೇದ ರವರು ಮೆಚ್ಚುಗೆಯ ವ್ಯಕ್ತಪಡಿಸಿದ್ದಾರೆ.ಬೆಳಗಾವಿ ನೈಸರ್ಗಿಕ ಹಾಲು
ನಿಮ್ಮ ಕರ್ತವ್ಯವನ್ನು ನಾನು ಮನಪೂರ್ವಕ ಅಭಿಂನಂದಿಸಿ ಹಾಗೂ ತುಂಬು ಹೃದಯದಿಂದ ಶ್ಲಾಘಿಸಿ ಮುಂದೆಯೂ ಸಹ ನೀವು ಇದೇ ರೀತಿ ಕರ್ತವ್ಯವನ್ನು ನಿರ್ವಹಿಸುಕೊಂಡು ಬರುತ್ತಿರೆಂದು ಹಾರೈಸಿ ಈ ಪ್ರಂಶಸನಾ ಪತ್ರ ನೀಡಿ ಗೌರವಿಸಿದ್ದಾರೆ