ಶ್ರಾವಣ ಮಾಸ ಅಂದ್ರೆ ಒಳ್ಳೆಯದನ್ನು ಶ್ರವಣ ಮಾಡುವುದು : ಶ್ರೀ ಮಹೇಶಾನಂದ ಶ್ರೀಗಳು
ಅಥಣಿ : ಶ್ರೀ ಸದಾಶಿವ ಮುತ್ಯಾನ ಮಠದೊಳಗೆ ಶ್ರಾವಣ ಮಾಸದ ಪ್ರಯುಕ್ತ ಶ್ರೀ ಮಹೇಶಾನಂದ ಶ್ರೀಗಳು ಪ್ರವಚನವನ್ನ ನಡೆಸಿಕೊಟ್ಟರು. ಶ್ರೀಗಳು ಶ್ರಾವಣ ಮಾಸ ಅಂದ್ರೆ ಒಳ್ಳೆಯದನ್ನು ಶ್ರವಣ ಮಾಡುವುದು ಒಳ್ಳೆಯದಾಗಿ ನಡೆದುಕೊಳ್ಳುವುದು ದೈವಿಕವಾಗಿ ಉಪಾಸನೆ ಮಾಡುವುದು. ಸದ್ಭಕ್ತ ಜನ ಸಮುದಾಯಕ್ಕೆ ದಾಸೋಹ ನೆರವೇರಿಸುವುದು ಎಂದರು.
ಹಾಗೆಯೇ ಸೃಷ್ಟಿಕರ್ತ ಶಿವ, ವಿಷ್ಣು ಬ್ರಹ್ಮ ಸೃಷ್ಟಿ ಹೇಗೆ ಕೈಕೊಂಡರು ಎಂಬುದನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಅವರ ರಾಗ ಮಾಲಿಕೆಯ ಪ್ರವಚನದೊಂದಿಗೆ ಮನಮುಟ್ಟುವಂತೆ ಉಣವಡಿಸಿದರು.
ಇನ್ನೊಬ್ಬ ಹಿರಿಯರಾದ ಗೊಮಟೆಯವರು ಪ್ರವಚನ ಮುಗಿದ ಮೇಲೆ ಎದ್ದು ಹೋಗುವಾಗ ನಿಮಗೆ ತಗುಲಿದ ಧೂಳನ್ನು ಜಾಡಿಸುವಂತೆ ಶ್ರೀಗಳು ಹೇಳಿದ ವಿಚಾರವನ್ನು ಜಾಡಿಸದೆ ತಮ್ಮ ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದರು. ವೇದಿಕೆ ಮೇಲೆ ಸತ್ಯಪ್ಪ ಭಾಗ್ಯನವರ್, ಸುರೇಶ ಇಚಾರಿ, ದಿಲೀಪ್ ಕಾಂಬಳೆ, ರಾಜು ನಡುವಿನಮನಿ, ಸಿದ್ದಲಿಂಗನಾಚಾರಿ ಮುಂತಾದವರು ಉಪಸ್ಥಿತರಿದ್ದರು. ಅರುಣ್ ಮೇಲ್ಗಡೆ ಸ್ವಾಗತಿಸಿದರು. ತಿಪ್ಪಣ್ಣ ತೇರದಾಳ ವಂದಿಸಿದರು.