10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಡಿ ಎಸ್ ಹೂಲಗೇರಿ .
ಹಟ್ಟಿ ಚಿನ್ನದ ಗಣಿ.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಆನ್ವರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರೇನಗನೂರು ಗ್ರಾಮದಲ್ಲಿ ಲಿಂಗಸಗೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕ ಡಿ ಎಸ್ ಹೂಲಗೇರಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಲಿಂಗಸಗೂರು ತಾಲೂಕಿನ ಹಿರೇ ನಗನುರು ಕ್ರಾಸ್ ನಿಂದ. ಆನ್ವರಿ ಗ್ರಾಮದ ವರೆಗೆ ಸುಮಾರು 0.00 ರಿಂದ 10.70Km ವರೆಗೆ ರಸ್ತೆ ಕಾಮಗಾರಿಗೆ ಸುಮಾರು ಹತ್ತು ಕೋಟಿ ರೂಪಾಯಿಗಳ ಅನುದಾನ ಆಗಿದ್ದು ಈ ಅನುದಾನವು 2022 .23 ನೇ ಸಾಲಿನ 5054 ಅಪೆಂಡಿಕ್ಸ್– ಇ ಯೋಜನೆಯ ಅಡಿಯಲ್ಲಿ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಕಳೆದ ಐದು ವರ್ಷಗಳಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಜನರೇ ಮಾತನಾಡುತ್ತಾರೆ ಅದನ್ನ ನಾನು ಹೇಳುವುದು ಬೇಕಿಲ್ಲ ನಾನು ಒಬ್ಬ ಶಾಸಕನಾಗಿ ಅದರಲ್ಲೂ ವಿರೋದ ಪಕ್ಷದ ಶಾಸಕನಾಗಿ ನನ್ನ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ ಇನ್ನು ಮುಂದೆಯೂ ನಿಮ್ಮ ಆಶೀರ್ವಾದ ಇರಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಚುನಾವಣೆಗೂ ಮುನ್ನ ನಿಮ್ಮಿರಿನ ಸಮಸ್ಯೆಗಳ ಕುರಿತು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ, ಗರಿಬಿನ ದಾರಿ ಕುರಿತು ನಾನು ಶಾಸಕನಾಗಿ ಬಂದಾಗಿನಿಂದ ಕೇಳುತ್ತಾ ಇದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ನ್ಯೊನ್ಮುಖರಾಗಿದ್ದು ರಸ್ತೆಯ ಉದ್ದಕ್ಕೂ ಎಡ ಬಲದಲ್ಲಿ ಇರುವ ಹೊಲಗಳ ರೈತರು ಸಹಕರಿಸಿದರೆ ಕೆಲಸ ಬೇಗ ಮಾಡಬಹುದು ಎಂದು ಹೇಳಿದರು.
ಈ ತಾಲೂಕಿನ ಎಂಎಲ್ಎ ನಾನಿದ್ದೇನೆ ಈಗಿರುವಾಗ ಬೇರೆಯವರಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡುತ್ತಾರೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಹಾಗಾಗಿ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿದರು.
ಇದೇ ವೇಳೆ ಲಿನಗಸಗುರಿನಲ್ಲಿ ಇತ್ತೀಚಿಗೆ ನಡೆದ ಕುರುಕ್ಷೇತ್ರ ಎನ್ನುವ ಕಾರ್ಯಕ್ರಮದಲ್ಲಿ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಾರೆ ಒಂದು ಪುಟ್ಟಿ ಮಣ್ಣು ಕೂಡ ರಸ್ತೆಗಳು ಕಂಡಿಲ್ಲ ಎನ್ನುವ ಮಾತನ್ನು ಆಡಿದ್ದು ಅದಕ್ಕೆ ನನ್ನ ಉತ್ತರ ಇಷ್ಟೇ ಆಗಿತ್ತು ಅದನ್ನ ನಾನು ಹೇಳುವುದಿಲ್ಲ ಯಾವುದೇ ಗ್ರಾಮದಲ್ಲಿ ಹೋಗಿ ಅಲ್ಲಿನ ಜನಗಳನ್ನು ಕೇಳಿ ಅವರೇ ನಿಮಗೆ ಸರಿಯಾದ ಉತ್ತರ ನೀಡುವರು ,ಕಳೆದ ಹತ್ತು ವರ್ಷಗಳಲ್ಲಿ ಮಾಡಲಾಗದ ರಸ್ತೆ ಕಾಮಗಾರಿಗಳನ್ನು ಮಾಡಿದ್ದೆ ಜನರೇ ನನಗೆ ನಿರ್ಣಾಯಕ ಹೊರತು ಯಾರೋ ಸುಳ್ಳು ಆರೋಪ ಮಾಡುತ್ತಾರೆ ಎಂದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಜನರೇ ನನಗೆ ಶ್ರೀರಕ್ಷೆ ಎಂದು ಹೇಳಿದರು.
ಇದೇ ವೇಳೆ ಗ್ರಾಮದ ಹಿರಿಯರಾದ ಮೆಹಬೂಬ್ ಸಾಬ್ ಶರಣರು ಮಾತನಾಡಿ ಡಿ ಎಸ್ ಹೂಲಗೇರಿ ಯವರು ಒಳ್ಳೆಯ ಕಾರ್ಯಗಳನ್ನು ಮಾಡಿದ್ದು ಮುಂದೆಯೂ ಇನ್ನೂ ಹೆಚ್ಚಿನ ಕೆಲಸ ಮಾಡುವಂತೆ ದೇವರು ಶಕ್ತಿ ನೀಡಲಿ, ನೀಡುತ್ತಾನೆ ಎಂದು ಶುಭ ಹಾರೈಸಿದರು, ನಂತರ ಫಾತೀಮಾ ಮಾತೆಯ ದೇವಾಲಯದ ರೆವರೆಂಡ್ ಫಾದರ್ ಟಿ ಜೋಬ್ ಮಾತನಾಡಿ ಶಾಸಕರು ಅಭಿವೃದ್ಧಿ ಕೆಲ್ಸ ಮಾಡುತ್ತಾ ಬಂದಿದ್ದಾರೆ ಮುಂದೆಯೂ ಹೆಚ್ಚು ಹೆಚ್ಚು ಕೆಲಸ ಮಾಡುವರೇ ಭಗವಂತ ಶಕ್ತಿ ನೀಡಲಿ ಎಂದು ಆಶಿಸಿದರು.
ನಂತರ ಗ್ರಾಮದ ಹಿರಿಯರು ಬುದ್ದಿಜೀವಿಗಳು ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಸವರಾಜಪ್ಪ ಗೌಡ ಕುರುಗೊಡ ಮಾತನಾಡಿ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಶಾಸಕರು ಇವರಾಗಿದ್ದು ಜನರ ಸಮಸ್ಯೆಗೆ ಸ್ಪಂದಿಸುವ ಗುಣವುಳ್ಳ ರಾಜಕಾರಣಿ ಸಿಗುವುದು ಅಪರೂಪ ಹಾಗಾಗಿ ಇಂತಹ ಎಂಎಲ್ಎ ನಮ್ಮ ಕ್ಷೇತ್ರಕ್ಕೆ ಮತ್ತೊಮ್ಮೆ ಅವಶ್ಯಕತೆ ಇದೆ ಅವರನ್ನು ಬೆಂಬಲಿಸುವ ಕೆಲಸವಾಗಬೇಕು ಎಂದು ಹೇಳಿ ಶಾಸಕರ ಸಾಧನೆಯನ್ನು ಮೆಲುಕು ಹಾಕಿದರು.
ನಂತರ ಪ್ರೌಢ ಎಸ್ ಡಿ ಎಂ ಸಿ ಅಧ್ಯಕ್ಷ ಚಿನ್ನಪ್ಪ ಕೊಟ್ರೀಕಿ ಮಾತನಾಡಿ ನಮ್ಮ ಶಾಸಕರು ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಅನೇಕ ಕೆಲಸಗಳನ್ನು ಮಾಡಿದ್ದು ಕಾಣುತ್ತೇವೆ ಯಾವುದೇ ಹಳ್ಳಿಗೆ ಹೋದರೂ ಕಡಿಮೆ ಅಂದರು ಎರಡು ಮೂರು ಕೆಲಸಗಳು ಇದ್ದೆ ಇರುತ್ತದೆ ಹಾಗಾಗಿ ಇಂತಹ ಶಾಸಕರಿಗೆ ಹೆಚ್ಚಿನ ಶಕ್ತಿ ನೀಡುವಂತೆ ಆಗಲಿ ಜನರ ಸೇವೆ ಮಾಡುವ ಭಾಗ್ಯ ಸಿಗಳು ಎಂದು ಹಾರೈಸಿ ಗ್ರಾಮದ ಕೆಲ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಶಾಸಕರು ಮುಂದಾಗಬೇಕು ಎಂದು ಹೇಳು ಗ್ರಾಮದ ಸಮಸ್ಯೆಗೆ ಕುರಿ ಮನವಿ ಪತ್ರ ನೀಡಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಶಿವನಗೌಡ ಪಾಟೀಲ ನಗರ, ಡಿ ಜಿ ಗುರಿಕಾರ, ನಾಗರಡ್ಡೆಪ್ಪ ಶಾವಂತಾಗೆರ,ಗುಂಡಪ್ಪ ಗೌಡ ,ಶಿವಪ್ಪ ಕೊಠ, ವೀರನಗೌಡ ಆನ್ವರಿ, ಜೋಸೆಫ್ ಚುಕನಟ್ಟಿ, ಬಸವರಾಜಪ್ಪ ಸಾಹುಕಾರ ಆನ್ವರಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜ್ಯೋತಿ ಭವಾನಿ v ಸೇರಿ ಗ್ರಾಮದ ಅನೇಕ ಮುಖಂಡರು,ಯುವಕರು ಸೇರಿ ಮಹಿಳೆಯರು ಭಾಗವಹಿಸಿ ಶಾಸಕರಿಂದ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಸ್ವೀಕರಿಸಿದರು. ಈ ವೇಳೆ ಮೌನುದ್ದಿನ್ ಬೂದಿನಾಳ ಕಾರ್ಯಕ್ರಮ ನೆರವೇರಿಸಿದರು ಒತ್ತಾರೆಯ
ಕಾರ್ಯಕ್ರಮವನ್ನು ನಿಂಗಪ್ಪ ಹುಬ್ಬಳ್ಳಿ, ಆನಂದ ಕಂದಳ್ಳಿ, ದೇವಪ್ಪ ನಿಂಗಪ್ಪ ಸೇರಿ ಇತರರು ಸೇರಿ ಯಶಸ್ವಿಯಾಗಿ ನೆರವೇರಿಸಿ ಕೊಟ್ಟರು.