ನಮ್ಮ ಸರ್ಕಾರ ಅನುದಾನ ಬೀಡುಗಡೆ ಮಾಡಿದೆ ಮಾಡಿದೆ ಎಂದು ಪದೇ ಪದೇ ಹೇಳಿದ ಸಿಎಂ ಬೋಮ್ಮಾಯಿ
ಯಳ್ಳೂರ ರಾಜಹಂಸಗಡದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಲೋಕಾರ್ಪಣೆ ಮಾಡಿ ಮಾತನಾಡಿದ ಸಿಎಂ ಬೋಮ್ಮಾಯಿಯವರು ರಾಜಹಂಸಗಡ ಐತಿಹಾಸಿಕ ಕೋಟೆ. ಐತಿಹಾಸಿಕ ಪರಂಪರೆ ಶಿವಾಜಿ ಕಾಲದ ವೈಭವ ಇದು ಪ್ರತಿನಿಧಿಸುತ್ತೆ. ಶಿವಾಜಿ ಮಹಾರಾಜರ ಬಗ್ಗೆ ಹೇಳುವ ಅವಶ್ಯಕತೆ ಇಲ್ಲಾ. ಈ ದೇಶ ಕಂಡ ಅಪ್ರತಿಮ ನಾಯಕ. ಹಿಂದು ಸಾಮ್ರಾಜ್ಯ ಉಳಿಸಲು ಪರಕೀಯರ ಆಡಳಿತ ಸೆದೆ ಬಡೆಯಲು ಶಿವಾಜಿ ಮಹಾರಾಜರ ಪಾತ್ರ ದೊಡ್ಡದು ಎಂದರು.
ಎಲ್ಲ ವಿಧ್ಯೆ ಪರಿಪೂರ್ಣವಾಗಿ ಕಲಿತ ಪರಿಣಿತರು. ಇಡೀ ಹಿಂದು ಕುಲವನ್ನು ರಕ್ಷಣೆ ಮಾಡಲು ಸಂಸ್ಥಾನಗಳನ್ನ ರಕ್ಷಣೆ ಮಾಡಲು ಪ್ರಮುಖರಾಗಿದ್ದರು. ಮೊಘಲರ ಸೈನ್ಯ ಬಲದಷ್ಟು ಇವರ ಸೈನ್ಯ ಇರಲಿಲ್ಲ. ಇವರ ಹೃದಯದಲ್ಲಿ ಛಲ, ಧೈರ್ಯ ಎಲ್ಲವನ್ನೂ ತುಂಬಿಕೊಂಡಿದ್ದರು. ಅವರ ಸೈನ್ಯ ಬಲ ನಮ್ಮ ತೋಳ ಬಲದಿಂದ ಅವರನ್ನ ಸೋಲಿಸಲು ಸಾಧ್ಯ ಅಂತಾ ಶಿವಾಜಿ ಮಹಾರಾಜರು ಹೇಳಿದ್ದರು.
ಶಿವಾಜಿ ಮಹಾರಾಜರು ಕಟ್ಟಿದ ಕೋಟೆ ರಾಜಹಂಸಗಡ. 2008ರಲ್ಲಿ ಯಡಿಯೂರಪ್ಪನವರು ನಮ್ಮ ಸರ್ಕಾರದ ಅಭಿವೃದ್ಧಿ ಮಾಡಲು ಅನುದಾನ ಕೊಟ್ಟಿತ್ತು. ನಾಲ್ಕೂವರೆ ಕೋಟಿ ರೂಪಾಯಿ ಬಿಡುಗಡೆ ಅವತ್ತೆ ಆಗಿತ್ತು. ಇವತ್ತು ಶಿವಾಜಿ ಮೂರ್ತಿ ಕೂಡ ಆಗಿದೆ. 2018-19ರಲ್ಲಿ ಇದಕ್ಕೆ ಅನುದಾನ ಬಿಡುಗಡೆ ಮಾಡಿದರು. ಸುಮಾರು ಐವತ್ತು ಲಕ್ಷ ರೂಪಾಯಿ ಬಿಡುಗಡೆ ಮಾಡಿದರು. ಶಿವಾಜಿ ಮಹಾರಾಜರ ಮೂರ್ತಿ ಮಾಡಿದ ಶಿಲ್ಪಿಕಾರರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮೊದಲೇ ನನ್ನ ಕಡೆ ಇದು ಸಿಕ್ಕಿದ್ರೇ ದೊಡ್ಡ ಪ್ರವಾಸಿ ತಾಣ ಮಾಡ್ತಿದ್ದೆ. ಕೆಲವರ ಕಾಲದಲ್ಲಿ ಅಭಿವೃದ್ಧಿ ಆಗಲ್ಲಾ ಮಾತಾಡುವುದೇ ಆಗುತ್ತೆ. ಕೋಟೆ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿಯಾಗಿ ಐದು ಕೋಟಿ ಅನುದಾನ ಕೊಡ್ತೇನೆ. ಸಮುದಾಯ ಭವನ ಸೇರಿದಂತೆ ಸಮುದಾಯ ಅಭಿವೃದ್ಧಿಗೆ ಅನುದಾನ ಕೊಡ್ತೇನಿ. ಶಿವಾಜಿ ಮಹಾರಾಜರ ಹೆಸರು ಅಮರವಾಗಿರಬೇಕು. ಅಂತಾ ಅತ್ಯಂತ ಅಭಿಮಾನದಿಂದ ಹೆಮ್ಮಯಿಂದ ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟನೆ ಮಾಡಿದ್ದೇನೆ ಎಂದು ಸಿಎಂ ಬಸವರಾಜ ಬೋಮ್ಮಾಯಿ ಹೇಳಿದರು.