ಬಿಜೆಪಿ ಯನ್ನು ಟಾರ್ಗೆಟ್ ಮಾಡಿ ಬೆಳಗಾವಿಯ 18 ಕ್ಷೇತ್ರಗಳಲ್ಲಿ ರಾಷ್ಟ್ರವಾದಿ ಕಾಂಗ್ರೇಸ ಪಕ್ಷದ ಅಭ್ಯರ್ಥಿಗಳು ಚುನಾವಣೆ ಕಣಕ್ಕೆ
ಬೆಳಗಾವಿ: ಜಿಲ್ಲಾ ರಾಷ್ಟ್ರವಾದಿ ಕಾಂಗ್ರೇಸ ಪಕ್ಷದ ಪದಾಧಿಕಾರಿಗಳು ಈ ವರ್ಷ ಕರ್ನಾಟಕ ವಿಧಾನ ಸಭಾ 2023ರ ಚುನಾವಣೆಯಲ್ಲಿ ರಾಷ್ಟ್ರವಾದಿ ಕಾಂಗ್ರೇಸ ಪಕ್ಷವು ಸ್ಪರ್ಧಿಸಲಿದ್ದು ಬೆಳಗಾವಿ ಜಿಲ್ಲೆಯ 18 ಮತ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಮೇತ್ರಿ ಎಂದು ತಿಳಿಸಿದೆ.
ರಾಷ್ಟ್ರೀಯ ನಾಯಕರಾದ ಶರದರಾವ ಪವಾರವರ ಆದೇಶದ ಮೇರೆಗೆ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ಹೆಚ್ಚು ಒತ್ತುಕೊಟ್ಟು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಈ ಮೊದಲು ಬೆಳಗಾವಿ ಜಿಲ್ಲೆಯಲ್ಲಿ ಸಾಮಾಜಿಕವಾಗಿ ಪಕ್ಷವು ಹಲವಾರು ಕಾರ್ಯಕ್ರಮಗಳನ್ನು ಮಾಡಿ, ತಾಲೂಕ ಪಂಚಾಯತ, ಜಿಲ್ಲಾಪಂಚಾಯತ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿಯು ಸಹ ಪಕ್ಷವು ಸ್ಪರ್ಧಿಸಿದೆ ಈ ಮೇಲಿನ ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿಗಳು ಭಾಗವಹಿಸುವರಿದ್ದರೆ ಅವರು ಬೆಳಗಾವಿ ಜಿಲ್ಲಾಧ್ಯಕ್ಷರನ್ನು ಬೇಗನೇ ಸಂಪರ್ಕಮಾಡಿ ತಮ್ಮ ಮಾಹಿತಿಯನ್ನು ನೀಡಬೇಕಾಗಿ ಮಾಧ್ಯಮದ ಮೂಲಕ ವಿನಂತಿಸಿದ್ದಾರೆ. ಸಂಪರ್ಕಿಸಬೇಕಾದ ನಂ. 7892002549