ವರುಣನ ಆರ್ಭಟಕ್ಕೆ ಗೋಮಾತೇ ಬಲಿ
ಮೂಡಲಗಿ : ಮಳೆಯ ಜೊತೆಗೆ ವರುಣನ ಆರ್ಭಟ ಹೆಚ್ಚಾಗಿದ್ದು, ವರಣನ ಆರ್ಭಟಕ್ಕೆ ಮರ ಉರುಳಿ ಗೋಮಾತೆ ಬಲಿ ಆಗಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪಿ.ಜಿ.ಹುಣಶಾಲ ಗ್ರಾಮದಲ್ಲಿ ವರಣನ ಆರ್ಭಟ ಹೆಚ್ಚಾಗಿದ್ದು, ಮರ ಒಂದು ಉರುಳಿ ಗ್ರಾಮ ನಿವಾಸಿಯಾದ ಶಂಕರ ರೊಡ್ಡಣ್ಣವರ ಎಂಬ ರೈತನ ಗೋವಿಗೆ ಮೇಲೆ ಬಿದ್ದು, ಗೋವು ಸ್ಥಳದಲ್ಲಿ ಬಲಿಯಾದ ಘಟನೆ ಗುರುವಾರ(ಮೇ 23) ರಂದು ನಡೆದಿದೆ.
ಗೋಮಾತೆ ಬಲಿಯಾಗಿದ್ದನ್ನು ಕಂಡ ಗೋ ಮಾಲಿಕ ಶಂಕರ ಹಾಗೂ ಕುಟುಂಬಸ್ಥರು ಕಣ್ಣಿರನ್ನು ಸುರಿಸುತ್ತಿದ್ದಾರೆ. ಗ್ರಾಮಸ್ಥರು ಸಹ ಗೋವು ಸಾವನ್ನಪ್ಪಿದನ್ನು ಕಂಡು ದುಃಖ್ಖಿತರಾಗಿದ್ದಾರೆ.