ಸಿದ್ದರಾಮಯ್ಯ ಅವರು ಹೈಕಮಾಂಡ ಅಲ್ಲಾ; ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಮುಂದಾಗ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳು
ರಾಮದುರ್ಗ ಕ್ಷೇತ್ರಕ್ಕೆ ಯಾವುದೆ ಕಾರಣಕ್ಕೂ ಮಾಜಿ ಶಾಸಕ ಅಶೋಕ್ ಪಟ್ಟಣ ಅವರಿಗೆ ಕಾಂಗ್ರೆಸ್ ಟಿಕೇಟ್ ನೀಡಬಾರದು. ಕಾಂಗ್ರೆಸ್ ಪಕ್ಷಕ್ಕೆ ದುಡಿದು ಪಕ್ಷಕಟ್ಟಿದ ನೂತನ ಐದು ಟಿಕೇಟ್ ಆಕಾಂಕ್ಷಿಗಳಲ್ಲಿ ಯಾರಾದರೊಬ್ಬರಿಗೆ ಟಿಕೇಟ್ ಘೋಷಣೆ ಮಾಡಬೇಕೆಂದು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹೈಕಮಾಂಡಗೆ ಮನವಿ ಮಾಡಿದರು.
ಸಿದ್ದರಾಮಯ್ಯ ಅವರು ಅಶೋಕ್ ಪಟ್ಟಣ ಅವರಿಗೆ ಟಿಕೇಟ್ ನೀಡಲು ಅವರು ಹೈಕಮಾಂಡ ಅಲ್ಲ, ಕೆ.ಪಿ.ಸಿ.ಸಿ ಅಧ್ಯಕ್ಷರು ಡಿಕೆ ಶಿವಕುಮಾರ ಇದ್ದಾರೆ, ಅವರು ರಾಮದುರ್ಗ ಮಾಜಿ ಶಾಸಕ ಸರಿಯಾದ ನಮ್ಮ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯ ಮಾಡುತ್ತಿಲ್ಲ, ಅವರಿಗೆ ಟಿಕೇಟ್ ನೀಡಬಾರದು ಒಂದು ವೇಳೆ ನೀಡಿದರೇ ಇಂಡಿಪೆಂಡೆಂಟ್ ಅಭ್ಯರ್ಥಿಯಾಗಿ ನಿಂತು ಕಾಂಗ್ರೆಸ್ ಅಶೋಕ್ ಪಟ್ಟಣ ಅವರನ್ನು ಸೋಲಿಸುತ್ತೇನೆ ಎಂದು ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಅರ್ಜುನ ಗಡ್ಡದ್ ತಿಳಿಸಿದರು.
ಇನ್ನಿಬ್ಬರು ಟಿಕೇಟ್ ಆಕಾಂಕ್ಷಿಗಳಾದ ರಾಜೇಂದ್ರ ಪಾಟೀಲ್ ಸಿ.ಬಿ ಪಾಟೀಲ್ ಅವರು ಅಶೋಕ್ ಪಟ್ಟಣ ಅವರಿಗೆ ಟಿಕೇಟ್ ನೀಡಬಾರದು ಒಂದು ವೇಳೆ ನೀಡಿದರೆ ನಮ್ಮ ಕಂಡಿಶನ್ ಗೆ ಒಪ್ಪಬೇಕು ಎಂದು ಮನವಿ ಮೂಲಕ ವಾರ್ನಿಂಗ್ ನೀಡಿದರು.