*ನನಗೆ ನೇರವಾಗಿ ಹೇಳ್ತಾರೆ, ಟಿಪ್ಪು ಮುಗಿಸಿದ ರೀತಿ ಸಿದ್ದರಾಮಯ್ಯ ನನ್ನು ಮುಗಿಸಿ ಅಂತಾರೆ, ಆಗ ಪ್ರಧಾನಿ ಅವರು ಅವರ ಮಂತ್ರಿಗೆ ಬುದ್ದಿ ಹೇಳಬಹುದಿತ್ತು ಎಂದ ಸಿದ್ದು
*ಬೆಳಗಾವಿ* ಶುಕ್ರವಾರ ನಗರದ ಕಾಂಗ್ರೆಸ್ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ.
ಎಡರು ಹಂತದ ಪ್ರಜಾದ್ವನಿ ಯಾತ್ರೆಯು ಈಗಾಗಲೇ ನಡೆದದ್ದು, ನಲವತ್ತು ಕ್ಷೇತ್ರ ಮುಗಿದಿವೆ, ನಿರೀಕ್ಷೆಗೂ ಮೀರಿ ಪ್ರಜದ್ವನಿ ಯಾತ್ರೆಗೆ ಜನರ ಪ್ರತಿಕ್ರಿಯೆ ಹಾಗೂ ಸ್ಪಂದನೆ ಇದೆ..
ಮಹಿಳೆಯರು ಮತ್ತು ಯುವಕರು ಈ ಸಲ ಹೆಚ್ಚು ಭಾಗವಹಿಸುತ್ತಿದ್ದಾರೆ..
ಕನಿಷ್ಟ 20 ಸಾವಿರ ಜನ ಒಂದು ವಿಧಾನ ಸಭೆಯಲ್ಲಿ ಜನ ಸೇರುತ್ತಿದ್ದಾರೆ.. ಉತ್ಸಾಹ ಹುರುಪುನಿಂದ ಜನ ಭಾಗಿಯಾಗಿದ್ದಾರೆ,
ಈ ಜನ ಜಾತ್ರೆ ನೋಡಿದಾಗ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಧೂಳೀಪಟ ಆಗಿ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಬರಿ ಗಾಳಿ ಅಲ್ಲಾ ಬಿರುಗಾಳಿ ಬೀಸುತ್ತಿದೆ ಎಂದರು..
ಬಿಜೆಪಿ ಅವರು ಹಿಂಬಾಗಲಿಣಿಂದ, ಅನೈತಿಕವಾಗಿ ಅಧಿಕಾರ ಹಿಡಿದಿದ್ದಾರೆ, ಭ್ರಷ್ಟಾಚಾರದಿಂದ ಎಂ ಎಲ್ ಎ ಗಳನ್ನು ಖರೀದಿ ಮಾಡಿ ಸರ್ಕಾರ ಮಾಡಿದ್ದರು, ಅದಕ್ಕಾಗಿಯೇ ಪೂರ್ತಿ ನಾಲ್ಕುವರೆ ವರ್ಷ ಭ್ರಷ್ಟಾಚಾರ ಮಾಡಿ, ಜನರನ್ನು ಬಡವರನ್ನಾಗಿ ಮಾಡುತ್ತಿದ್ದಾರೆ ಎಂದರು…
ಪಾಪ ಕಮಿಷನ್ ಕೊಡದೇ ಎಷ್ಟೋ ಗುತ್ತಿಗೆದಾರರು, ಬಿಜೆಪಿಯವರ ಹೆಸರು ಪತ್ರದಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು, ಇವೆಲ್ಲಾ ಸಾಕ್ಷಿ ಅಲ್ಲವಾ, ಇವರ ಮೇಲೆ ಏನು ಕ್ರಮ ಆಗಿದೆ,? ಒಂದು ಕೇಸನ್ನು ಕೂಡಾ ಸಿಬಿಐಗೆ ವಿಚಾರಣೆಗೆ ಒಳಪಡಿಸಲಿಲ್ಲ..
ನನ್ನ ಅಧಿಕಾರದಲ್ಲಿ ಆರೋಪ ಮಾಡಿದ ತಕ್ಷಣವೇ ಸಿಬಿಐಗೆ ವಿಚಾರಣೆಗೆ ನೀಡಿದೆ, ಅದು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗ, ಆ ನಿಯತ್ತು ಇವರಿಗೆ ಯಾಕೆ ಇಲ್ಲ ಎಂದರು…
ನಾಲ್ಕು ವರ್ಷ ಯಾವುದೇ ಕೆಸ್ ವಿಚಾರಣೆ ಮಾಡದೇ ಸುಮ್ಮನೆ ಕಡಬು ತಿನ್ನುತ್ತಾ ಕುಳಿತಿರುವಿರೇನು ಎಂದು ಪ್ರಶ್ನೆ ಮಾಡಿದರು..
ನಿನ್ನೆ ಯಡಿಯೂರಪ್ಪನ ಆಪ್ತ ಬಿಜೆಪಿ ಶಾಸಕ ವಿರೂಪಾಕ್ಷ ಪುತ್ರ 40, ಲಕ್ಷ ಲಂಚ ತಗೆದುಕೊಳ್ಳುವಾಗ ಸಿಕ್ಕಿಬಿದ್ದ, ಅವನ ಮನೆಯಲ್ಲಿ ಆರು ಕೋಟಿ ಲೆಕ್ಕವಿಲ್ಲದ ಹಣ ಸಿಕ್ಕಿದೆ, ಅದು ಎಲ್ಲಿಂದ ಬಂತು, ಅದು ಭ್ರಷ್ಟ ಹಣವೇ ಎಂದರು..
ನಾವು ಮಾಡಿದ ಕಾರ್ಯಕ್ರಮಗಳಿಗೆ ಇವರು ಪ್ರಧಾನಿ,. ಮತ್ತು ಕೇಂದ್ರ ನಾಯಕರನ್ನು ಕರೆದುಕೊಂಡು ಬಂದು ಉದ್ಘಾಟನೆ ಮಾಡುತ್ತಿದ್ದಾರೆ,
ಸರ್ಕಾರದ ಹಣವನ್ನು ಪ್ರಚಾರಕ್ಕೆ, ಜಾಹೀರಾತಿಗೆ ಬಳಸಿಕೊಳ್ಳುತ್ತಿದ್ದಾರೆ,, ಮೋದಿ ಅವರು ರೋಡ್ ಶೋಗೆ ಜನರನ್ನು 500 ರೂಪಾಯಿ ಕೊಟ್ಟು ಕರೆತರುತ್ತಾರೆ ಎಂದು ಬಸ್ಸಿನ ವಿಡಿಯೋದಲ್ಲಿ ಹೇಳಿದ್ದೆ, ಆದನ್ನು ತಿರುಚಿ ಬಿಜೆಪಿ ಅವರು ಕೆಟ್ಟದಾಗಿ ಪ್ರಚಾರ ಮಾಡುತ್ತಿದ್ದು, ಇಂತಹದನ್ನು ಮಾಡಿಯೇ ಅವರು ಅಧಿಕಾರಕ್ಕೆ ಬಂದವರು ಎಂದರು…
ಮೋದಿ ಅವರು ಏಷ್ಟು ಸುಳ್ಳು ಹೇಳುತ್ತಾರೆ ಎಂದರೆ, ಮರ್ ಜಾ ಮೋದಿ ಅಂತಾ ಕುಗಿದವರು ಯಾರೂ ಅಂತಾ ಹೇಳಲಿ, ಸುಮ್ಮನೆ ಜನರನ್ನು ದಡ್ಡರಾಗಿ ಮಾಡಿಸಲು ಸುಳ್ಳು ಹೇಳಬೇಡಿ,. ಹಾಗೆ ಅಂದವರ ಮೇಲೆ ಕ್ರಮ ತೆಗೆದುಕೊಳ್ಳಿ,,
ಆದರೆ ನನಗೆ ನೇರವಾಗಿ ಹೇಳ್ತಾರೆ, ಟಿಪ್ಪು ಮುಗಿಸಿದ ರೀತಿ ಸಿದ್ದರಾಮಯ್ಯ ನನ್ನು ಮುಗಿಸಿ ಅಂತಾರೆ, ಆಗ ಪ್ರಧಾನಿ ಅವರು ಅವರ ಮಂತ್ರಿಗೆ ಬುದ್ದಿ ಹೇಳಬಹುದಿತ್ತು, ಆದರೆ ಹೇಳಲಿಲ್ಲ ಅದರ ಬದಲಿಗೆ, ಮರ್ ಜಾ ಮೋದಿ ಮರ್ ಜಾ ಮೋದಿ ಅಂತಾ ಹೇಳ್ತೀವಿ ಅಂತಾರೆ, ಇಂತಾ ಸುಳ್ಳು ಪ್ರಧಾನಿ ಬೇಕಾ ಎಂದರು..