ಸರ್ಕಾರಿ ಖಾಸಗಿ ಹುದ್ದೆಗೆ ನಿವೃತ್ತಿ ಇದೆ, ರಾಜಕೀಯ ರಂಗದಲ್ಲಿ ಯಾಕೆ ಇಲ್ಲ? ನಾನು 62 ನೇ ವಯಸ್ಸಿಗೆ ನಿವೃತ್ತಿ ಹೊಂದುವ ಮೂಲಕ ಉಳಿದ ಶಾಸಕರಿಗೆ ಮಾದರಿಯಾಗುತ್ತೇನೆ ಎಂದ ಬಾಲಚಂದ್ರ ಜಾರಕಿಹೊಳಿ.
ಇಂದು ಅರಬಾಂವಿ ಮತಕ್ಷೇತ್ರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಜಾತ್ರೆಯು ವಿವಿಧ ಕಲಾ ತಂಡಗಳ ಮೂಲಕ, ಗೋಕಾಕ ಶಾಸಕರ ವಸತಿ ಗೃಹ ಎನ್.ಎಸ್.ಎಪ್ ದಿಂದ ಮೂಡಲಗಿ ವರೆಗೆ ಅತೀ ವಿಜೃಂಬನೆಯಿಂದ ನಡೆಯಿತು. ಮೂಡಲಗಿಯಲ್ಲಿ ವೇಧಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅರಬಾಂವಿ ಶಾಸಕ ಬಾರಲಚಂದ್ರ ಜಾರಕಿಹೊಳಿ ಈ ಬಾರ ನಾನು ರಾಜ್ಯದಲ್ಲಿ ಅತೀ ಹೆಚ್ಚು ಮತಗಳನ್ನು ಹೊಂದಿ ಜಯ ಗಳಿಸುವುದೇ ನಿಶ್ಚಿತ, ಜೊತೆ ನನ್ನ 62 ನೇ ವಯಸ್ಸಿಗೆ ರಾಜಕೀಯ ನಿವೃತ್ತಿ ಹೊಂದುವ ಮೂಲಕ ಬೇರೆ ರಾಜಕೀಯ ನಾಯಕರಿಗೆ ಮಾದರಿಯಾಗುತ್ತದೆ ಎಂದು ಹೇಳಿದರು.
ಎಲ್ಲ ಸರ್ಕಾರಿ ಖಾಸಗಿ ಹುದ್ದೆಗಳಿಗೆ ನಿವೃತ್ತಿ ಇದೆ ಆದರೆ ರಾಜಕೀಯ ಹುದ್ದೆಗೆ ಯಾಕೆ ನಿವೃತ್ತಿ ಇಲ್ಲ. ರಾಜಕೀಯ ನಾಯಕರು 80-90 ವಯಸ್ಸಾದರೂ ರಾಜಕೀಯದಲ್ಲಿ ಇರುತ್ತಾರೆ ಇದು ಬದಲಾಗಬೇಕು ರಾಜಕೀಯ ನಾಯಕರಿಗೂ ನಿವೃತ್ತಿ ಇರಬೇಕು ಎಂದರು.
ಐದು ವರ್ಷದಿಂದ ಬರದೇ ಇರುವ ಬೇರೆ ಪಕ್ಷದವರು ಇನ್ನು ಚುನಾವಣೆ ಸಮೀಪ ಬಂದಿದೆ. ಇನ್ನು ಆರು ತಿಂಗಳು ಭಾಷಣ ಬೀಗಿಯುತ್ತಾರೆ, ಯೂಟ್ಯೂಬ್, ಪೇಸ್ ಬುಕ್ ಗಳಲ್ಲಿ ಅಭಿವೃದ್ದಿಯ ಬರವಸೆ ನೀಡುತ್ತಾರೆ. ನ ಅಂತು ಈ ವಿಚಾರವನ್ನು ತಲೆಗೆ ಹಾಕಿಕೊಳ್ಳುವುದಿಲ್ಲ, ಮತಬಾಂಧವರು ನೀವು ಕೂಡ ತಲೆಗೆ ಹಾಕಿಕೊಳ್ಳಬೇಡಿ.
ಇಪ್ಪತ್ತು ವರ್ಷದಿಂದ ನಾವು ನಿಮ್ಮ ಶಾಸಕನಾಗಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೆನೆ. 2004 ರಲ್ಲಿ ಮೊದಲನೇ ಚುನಾವಣೆಯಲ್ಲಿ ನಾವು ಮಾತು ಕೊಟ್ಟಹಾಗೇ ಶಿಕ್ಷಣದಲ್ಲಿ ಒಳ್ಳೆಯ ಅಭಿವೃದ್ದಿ ಮಾಡುತ್ತೇನೆ ಎಂದು ಹೇಳಿದೆ ಅದೇ ರೀತಿ ಪ್ರಸ್ತುತ ನಮ್ಮ ಕ್ಷೇತ್ರ ನಮ್ಮ ಶೈಕ್ಷಣಿಕ ಜಿಲ್ಲೆ ರಾಜ್ಯದಲ್ಲಿ ಮುಂಚೂನಿಯಲ್ಲಿದೆ ಇದು ನಾನು ಕೊಟ್ಟ ಮಾತಿನ ನಿದರ್ಶನ ಎಂದರು.
ನಾನು ಕೊಟ್ಟ ಮಾತು ನಡೆಯಿಸಿ ಕೊಡಲು ಸಹಕಾರ ನೀಡಿದ ಬಿಜೆಪಿ ಅದರಲ್ಲು ನರೇಂದ್ರ ಮೋದಿಯವರಿಗೆ ಧನ್ಯವಾದ ಎನ್ನುತ್ತ ಇನ್ನು ಕೆಲವೊಂದು ಕಾರ್ಯಗಳು ಮಾಡುವುದಿದೆ ಅದಕ್ಕಾಗಿ ಮತ್ತೆ ಬಿಜೆಪಿ ಪಕ್ಷ ಅಧಿಕಾರಿಕ್ಕೆ ಬರತ್ತೆ ಉಳಿದ ಕೆಲಸವನ್ನು ಪೂರ್ಣಗೊಳಿಸುತ್ತೇನೆ, ಒಂದು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವ ಸಮಯದಲ್ಲಿ ರಾಜ್ಯದಲ್ಲಿಯೇ ನನ್ನ ಕ್ಷೇತ್ರ ಅಭಿವೃದ್ಧಿ ಕ್ಷೇತ್ರ ಮಾಡುತ್ತೇನೆ ಎಂದು ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.