ರಾಜ್ಯದಲ್ಲಿ ಯಾವ ಕ್ಷೇತ್ರದಲ್ಲು ಕಾಣದ ಜನಸ್ಪಂದನೆ ಅರಬಾಂವಿ ಮತಕ್ಷೇತ್ರದಲ್ಲಿ ಕಂಡಿದ್ದು ಖುಷಿಯಾಗುತ್ತಿದೆ : ಗೋವಿಂದ ಕಾರಜೋಳ
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕ್ಷೇತ್ರವಾದ ಅರಬಾಂವಿ ಮತಕ್ಷೇತ್ರದಲ್ಲಿ ಇಂದು ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಇಲ್ಲಿಯವರಗೆ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಇಷ್ಟೊಂದು ಜನಸ್ಪಂದನೆ ಸಿಕ್ಕಿತ್ತು ಅರಬಾಂವಿ ಕ್ಷೇತ್ರದಲ್ಲಿ ಎಂದರು.
ಬಾಲಚಂದ್ರ ಜರಕಿಹೊಳಿ ಅವರು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಈ ಕ್ಷೇತ್ರದಲ್ಲಿ ಮಾಡಿದ್ದಾರೆ ಅದಕ್ಕೆ ನಿದರ್ಶನ ಕಣ್ಣ ಮುಂದೆ ಕಾಣುತ್ತಿದೆ. ಹಿಂದಿನ ಬಾರಿ 47 ಸಾವಿರ ಅಂತರದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಜಯ ಗಳಿಸಿದ್ದರು ಈ ಬಾರಿ 97 ಸಾವಿರ ಮತ ಅಂತರದಲ್ಲಿ ಜಯ ಗಳಿಸಬೇಕು, ಗಳಿಸುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷವು ಸುಳ್ಳು-ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಬರುತ್ತಿದೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜನತೆ ಹತ್ತು ಕೆ.ಜಿ ಅಕ್ಕಿ ಕೊಟ್ಟಿದ್ದೆವೆ ಅದನ್ನು ಕಡಿಮೆ ಮಾಡಿ ಐದು ಕೆ.ಜಿ ಕೋಡುತ್ತಿದ್ದಾರೆ ಎಂದು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಜನರು ಅಕ್ಕಿಗಾಗಿ ಜೀವನ ಮಾಡಬೇಕೆ? ಜನರಿಗೆ ಬೇಕಾಗಿರುವುದು ಅಕ್ಕಿ ಅಲ್ಲ, ಒಳ್ಳೆಯ ಶಿಕ್ಷಣ, ಉದ್ಯೋಗ. ನಮ್ಮ ಸರ್ಕಾರ ನರೇಂದ್ರ ಮೋದಿ ಹಾಗೂ ಬೋಮ್ಮಾಯಿ ಸರ್ಕಾರ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ ಎಂದರು.