ಸಿ ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಡಿ. ಎಸ್. ಹೂಲಗೆರಿ.
ಹಟ್ಟಿ ಚಿನ್ನದ ಗಣಿ.
ಪಟ್ಟಣದ ಅಬ್ದುಲ್ ಕಾಲೊನಿಯಲ್ಲಿ ಕೆ. ಕೆ. ಆರ್. ಡಿ. ಬಿ. ಮೈಕ್ರೋ ಯೋಜನೆಯ ಅಡಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಲಿಂಗಸಗೂರು ತಾಲೂಕಿನ ಜನಪ್ರಿಯ ಶಾಸಕ ಡಿ ಎಸ್ ಹೂಲಗೆರಿ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅಭಿವೃದ್ಧಿಗೆ ಪೂರಕವಾಗಿ ಸದಾ ನಾವು ಸಿದ್ಧರಿದ್ದೇವೆ ತಾಲೂಕಿನ 163 ಹಳ್ಳಿಗಳು ಮೂರು ಪಟ್ಟಣ ಸೇರಿ ಅನೇಕ ತಾಂಡಾಗಳ ನಿರ್ವಹಣೆ ಮಾಡಬೇಕಿದ್ದು ಹಂತ ಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಅದಕ್ಕಾಗಿ ನಿಮ್ಮ ಸಹಕಾರ ಅಗತ್ಯ ಎಂದು ಶಾಸಕ ತಿಳಿಸಿದರು.
ಹಟ್ಟಿ ಪಟ್ಟಣಕ್ಕೆ ಅಗತ್ಯವಾಗಿ ಕುಡಿಯುವ ನೀರಿನ ಅಗತ್ಯತೆ ಇದ್ದು ಹಟ್ಟಿ ಚಿನ್ನದ ಗಣಿ ಅಧಿಕಾರಿಯೊಂದಿಗೆ ಚರ್ಚೆ ಮಾಡಲಾಗಿದ್ದು ನಾಳೆ ಅಥವಾ ನಾಡಿದೂ ನೀರು ಬಿಡುವ ವ್ಯವಸ್ಥೆ ಮಾಡುತ್ತೇವೆ , ಟಣಮಕಲ್ ನಲ್ಲಿ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವೇಗವಾಗಿ ನಡೆಯುವಂತೆ ಅಧಿಕಾರಿಗೆ ತಾಕೀತು ಮಾಡಿ ಕಾಮಗಾರಿಯ ಯಾವ ಹಂತದಲ್ಲಿ ಇದೆ ಅಳೆಂದು ಕೇಳಿದಾಗ ಈ ವಾರದಲ್ಲಿ ಕಾಮಗಾರಿ ಮುಗಿಸಿ ನೀರು ಬಿಡುವ ವ್ಯವಸ್ಥೆ ಮಾಡುತ್ತೇವೆ ಈವಾಗ ಮೋಟಾರ್ ಸಂಪರ್ಕ ಕಲ್ಪಿಸುವುದು ಬಾಕಿ ಇದೆ ಇನ್ನೇನು ಕೆಲ ದಿನಗಳಲ್ಲಿ ಮಾಡಿಸಿ ನೀರು ಸರಬರಾಜು ಮಾಡಲಾಗುವುದು ಎಂದು ಅಧಿಕಾರಿ ತಿಳಿಸಿದಾಗ ಆದಷ್ಟು ಬೇಗ ಕೆಲಸ ಮುಗಿಸಿ ನೀರು ಬಿಡುವ ವ್ಯವಸ್ಥೆ ಮಾಡಿ ಎಂದು ಖಡಕ್ಕಾಗಿ ವಾರ್ನ್ ಮಾಡಿದರು.
ಇದೇ ವೇಳೆ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ವಿತರಿಸುವ ಮೂಲಕ ಎಂಬರುವ ಚುನಾವಣೆಗೆ ಸಕಲ ಸಿದ್ಧತೆಯಲ್ಲಿ ಇದ್ದೇವೆ ಎನ್ನುವುದನ್ನು ಪಕ್ಷದ ಪ್ರಣಾಳಿಕೆಯ ಭಾಗವಾಗಿ ಮಹಿಳೆಯರಿಗೆ ಗ್ಯಾರೆಂಟಿ ಕಾರ್ಡ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಡಿ ಎಸ್ ಹೂಲಗೇರಿ, ಪಟ್ಟಣ ಪಂಚಾಯ್ತಿಯ ಅಧ್ಯಕ್ಷೆ ಪಾರ್ವತಿ ನಿಂಗಪ್ಪ ಮನಗೂಳಿ,ಲಿಂಗಸಗೂರು ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಮಹಮದ್ ರಫಿ, ನಿಂಗರಾಜ ತಾಲೂಕ ಪಂಚಾಯತ ಮಾಜಿ ಸದಸ್ಯರು, ಶಾಂತಪ್ಪ ಆನ್ವರಿ, ಮೌಲಸಾಬ್ ಎಸ್ ಡಿ ಎಂ ಸಿ ಉಪಾಧ್ಯಕ್ಷ, ಪಟ್ಟಣ ಪಂಚಾಯ್ತಿ ಸದಸ್ಯರು ಸೇರಿ ಅನೇಕ ಕಾಂಗ್ರೆಸ್ ಮುಖಂಡರು ಯುವಕರು ಉಪಸ್ಥಿತರಿದ್ದರು.