ಕೊಲ್ಹಾರ: ತಾಲೂಕಿನ ತೆಲಗಿ ಗ್ರಾಮದಲ್ಲಿ ಮಾರುತೇಶ್ವರ ದೇವಸ್ಥಾನ ಎದುರುಗಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಶಾಸಕ ಶಿವಾನಂದ ಪಾಟೀಲ ಚಾಲನೆಯನ್ನು ನೀಡುವುದರ ಮೂಲಕ ಉದ್ಘಾಟನೆಯನ್ನು ಮಾಡಿದರು ಇದೆ ಸಂದರ್ಭದಲ್ಲಿ ಶಾಸಕರು ಗ್ರಾಮಕ್ಕೆ ಆಗಮನದ ಸಮಯದಲ್ಲಿ ಸಾವಿರಾರು ಗ್ರಾಮಸ್ಥರು ಆಗಮಿಸಿ ನಂತರ ಸ್ಥಳೀಯ ಯುವಕರು ಬೈಕ್ ರ್ಯಾಲಿ ನಡೆಸುವುದರ ಮೂಲಕ ಕರಡಿ ಮಚಲು ಬಾರಿಸಿಕೊಂಡು ಶಾಸಕರನ್ನು ಗ್ರಾಮಕ್ಕೆ ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು
ವಿವಿಧ ಕಾಮಗಾರಿಗಳಿಗೆ ನೀಡಲಾದ ಅನುದಾನ:
ತೆಲಗಿ ಗ್ರಾಮದ ಅಗಸಿ ಬಾಗಿಲು ನಿರ್ಮಾಣಕ್ಕೆ 12,00,000 ರೂ.ಅಂದರಂತೆ ತೆಲಗಿ ಗ್ರಾಮದ ದೇವಸ್ಥಾನದ ಸಭಾಭವನಕ್ಕೆ 25,00,000 ರೂ. ತೆಲಗಿ ಗ್ರಾಮದ ಎಸ್‌ಟಿ ಕಾಲೋನಿಯಲ್ಲಿ ಲಕ್ಷ್ಮಿ ದೇವಸ್ಥಾನಕ್ಕೆ 2,00,000 ರೂ. ಭಜಂತ್ರಿ ಕಾಲೋನಿಯಲ್ಲಿ ಲಕ್ಷ್ಮಿ ದೇವಸ್ಥಾನಕ್ಕೆ3,00,000 ರೂ. ಹಾಗೂ ರಂಗ ಮಂದಿರ ನಿರ್ಮಾಣಕ್ಕೆ 14,00,000 ರೂ. ತೆಲಗಿ ಗ್ರಾಮದ ರೈಲ್ವೆ ನಿಲ್ದಾಣದ ಹತ್ತಿರ ಸಿ ಸಿ ರಸ್ತೆ ನಿರ್ಮಾಣ 20,00,000 ರೂ. ತೆಲಗಿ ಗ್ರಾಮದಿಂದ ತಡಲಗಿ ಹೋಗುವ ಸಿಸಿ ರಸ್ತೆ ನಿರ್ಮಾಣ 28,00,000 ರೂ .ಚಿರಲದಿನ್ನಿ ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಾಣ 27,80,000 ರೂ .ಇದೆ ಚಿರಲದಿನ್ನಿ ಗ್ರಾಮದಲ್ಲಿ ಭಾಗ್ಯವಂತಿ ದೇವಿ ದೇವಸ್ಥಾನ ನಿರ್ಮಾಣಕ್ಕೆ 4,00,000 ರೂ. ತೆಲಗಿ ಗ್ರಾಮದ ಇಂದಿರಾನಗರದಲ್ಲಿ ಮೊಹರಂ ಗುಡಿ ನಿರ್ಮಾಣ 4,00,000 ರೂ.ತೆಲಗಿ ಗ್ರಾಮದ ಇಂದಿರಾನಗರದಲ್ಲಿ ಮಸೀದಿ ನಿರ್ಮಾಣಕ್ಕೆ 4,00,000 ರೂ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ತಮ್ಮ ಶಾಸಕರ ಅನುದಾನದಲ್ಲಿ ಕಾಮಗಾರಿಗಳಿಗೆ ಅನುದಾನವನ್ನು ನೀಡಿದ್ದೆನೆಂದು ಶಾಸಕ ಶಿವಾನಂದ ಪಾಟೀಲ ಇದೆ ಸಂದರ್ಭದಲ್ಲಿ ತಿಳಿಸಿದ್ದಾರೆ