ಕಾಂಗ್ರೆಸ್ ಸಂವಿಧಾನ ಬಾಹಿರವಾಗಿ ಮೀಸಲಾತಿ ನೀಡಿತ್ತು, ಅದನ್ನು ತೆಗೆದುಹಾಕಿ ಎಲ್ಲರಿಗೂ ನ್ಯಾಯ ಒದಗಿಸಿದ್ದೇವೆ ಎಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ದಾವಣಗೆರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ಮತ ಬ್ಯಾಂಕಿನ ಓಲೈಕೆಗೆ ಮುಸ್ಲಿಂರಿಗೆ ಕಾಂಗ್ರೆಸ್ ಮೀಸಲಾತಿ ನೀಡಿತ್ತು.. ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡುವ ಆಗಿಲ್ಲ.. ಜಾತಿ, ಹಿಂದುಳಿದರ ಬಗ್ಗೆ ಮೀಸಲಾತಿ ನೀಡಬೇಕು.. ಆದರೆ ಕಾಂಗ್ರೆಸ್ ಸಂವಿಧಾನ ಬಾಹಿರವಾಗಿ ಮೀಸಲಾತಿ ನೀಡಿತ್ತು ಅದನ್ನು ತೆಗೆದುಹಾಕಿ ಎಲ್ಲರಿಗೂ ನ್ಯಾಯ ಒದಗಿಸಿದ್ದೇವೆ ಎಂದರು.
ನಮ್ಮಲಿಂಗಾಯಿತ, ಒಕ್ಕಲಿಗ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಡಲಾಗಿದೆ, ಇದು ಸಂವಿಧಾನ ಅಡಿಯಲ್ಲಿ ಮಾಡಿದ ಕೆಲಸ. ತಪ್ಪು ಕಲ್ಪನೆ ಮೂಡಿಸಲಾಗುತ್ತಿದೆ, ಭೋವಿ, ಕೊರಚ ಸಮುದಾಯಕ್ಕೆ ಅನ್ಯಾಯ ಆಗಿಲ್ಲ, ಧ್ವನಿ ಇಲ್ಲದಂತವರಿಗೆ ಮೀಸಲಾತಿ ಸಿಗುತ್ತಿರಲಿಲ್ಲ..
ಇವತ್ತು ಒಳ ಮೀಸಲಾತಿ ತಂದು ನ್ಯಾಯ ಕೊಟ್ಟದ್ದು ನಮ್ಮ ಸರ್ಕಾರ. ಕಾಂಗ್ರೆಸ್ ನ ಷ್ಯಡ್ಯಂತ್ರದಿಂದ ತಪ್ಪು ಸಂದೇಶ ಹೋಗುತ್ತಿದೆ.. ಎಲ್ಲಾ ಸಮಾಜಕ್ಕೆ ಧ್ವನಿ ಕೊಡುವ ಕೆಲಸ ಮಾಡಲಾಗಿದೆ, ಹಲವು ವರ್ಷಗಳ ಬೇಡಿಕೆ ಇದ್ದ ಒಳಮೀಸಲಾತಿ ಜಾರಿಗೆ ತರಲಾಗಿದೆ.. ಯಾರು ಈ ಧೈರ್ಯ ತೋರಲಿಲ್ಲ, ಒಳಮೀಸಲಾತಿ ನೀಡಿ ಬಿಜೆಪಿ ನ್ಯಾಯ ಕೊಟ್ಟಿದೆ ಎಂದರು.
ಪ್ರಧಾನಿಯವರು ಎಲ್ಲೆ ಪ್ರವಾಸ ಮಾಡಲಿ ಡಬಲ್ ಎಂಜಿನ್ ಸರ್ಕಾರದ ಬಗ್ಗೆ ಮಾತನಾಡುತ್ತಾರೆ..ದೇಶದ ರಕ್ಷಣೆ, ಅಭಿವೃದ್ದಿ ಕೆಲಸಕ್ಕಾಗಿ ಬಿಜೆಪಿ ಬೇಕಿದೆ.. ಪ್ರಧಾನಿಯವರ ಕೆಲಸ ಹಳ್ಳಿ ಹಳ್ಳಿಗೂ ತಲುಪಬೇಕು.. ಈ ಹಿನ್ನಲೆ ರಾಜ್ಯದ ಜನ ಬಿಜೆಪಿಗೆ ಬಹುಮತ ನೀಡುತ್ತಾರೆ. ಪ್ರಧಾನಿಯವರ ಕೈ ಬಲಪಡಿಸಲು ಜನ ಶಕ್ತಿ ತುಂಬುತ್ತಾರೆ ಎಂದರು.
ಬೂತ್ ಮಟ್ಟದ ಕಾರ್ಯಕ್ರಮಗಳನ್ನ ಚುನಾವಣೆ ಸಲುವಾಗಿ ಮಾಡೋದಿಲ್ಲ. ನಿರಂತರ ನಮ್ಮ ಕಾರ್ಯಕರ್ತರು ಫೀಲ್ಡ್ ನಲ್ಲಿ ಇರುತ್ತಾರೆ. ಜನರಿಗೆ ಸರ್ಕಾರದ ಯೋಜನೆ ತಲುಪಿಸುತ್ತಾರೆ. ಪಾರ್ಟಿಯ ಅಪೇಕ್ಷೆ, ಕಾರ್ಯಕರ್ತರ ಅಭಿಪ್ರಾಯ ಕೇಳಲು ಇಂದು ಚುನಾವಣೆ ನಡೆಸಿದ್ದೇವೆ ಎಂದು ಹೇಳಿದರು.
ಬೂತ್ ಪ್ರಮುಖರು, ಕಾರ್ಯಕರ್ತರು ತಮ್ಮ ಅಭಿಪ್ರಾಯ ತಿಳಿಸಲು ಒಂದು ಅವಕಾಶ. ರಾಜ್ಯದಿಂದ ಅಂತಿಮ ಹೆಸರುಗಳು ಕೇಂದ್ರಕ್ಲೆ ಹೋಗಿ ಬಳಿಕ ಸೀಟು ಹಂಚಿಕೆ ಆಗುತ್ತದೆ ಎಂದರು.