ರಾಜ್ಯ ಮಟ್ಟದ “ಹುಲಿಕುಂಟೆ ಶ್ರೀ” ಪ್ರಶಸ್ತಿಗೆ ಭಾಜನರಾದ ಡಾ.ರಾಮಚಂದ್ರಪ್ಪ ಎಸ್.
ಬಳ್ಳಾರಿ : ದಾವಣಗೆರೆ ವಿಶ್ವವಿದ್ಯಾನಿಲಯ ಸಮಾಜಶಾಸ್ತ್ರ ಅಧ್ಯಯನ ವಿಭಾಗ ಉಪನ್ಯಾಸಕರಾದ ಡಾ.ರಾಮಚಂದ್ರಪ್ಪ ಎಸ್. ಇವರ ಸುದೀರ್ಘ ಕಲಾ ಸೇವೆ ಗುರ್ತಿನಿ, ಬಳ್ಳಾರಿಯ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ(ರಿ), ದಿ.ಶ್ರೀ ಹುಲೆಪ್ಪನವರ ಖ್ಯಾತ ತೊಗಲುಗೊಂಬೆ ಕಲಾವಿದರು, ಇವರ ಸ್ಮರಣಾರ್ಥ 15 ನೇ ವಾರ್ಷಿಕೋತ್ಸವದ ಪ್ರಸಕ್ತ ಸಾಲಿನ ರಾಜ್ಯಮಟ್ಟದ “ಹುಲಿಕುಂಟೆ ಶ್ರೀ” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಸಕ್ತ ಸಾಲಿನ ರಾಜ್ಯಮಟ್ಟದ ಹುಲಿಕುಂಟೆ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ 2025 ಇವರ ವತಿಯಿಂದ ಇದೆ ಫೆ. 22 ರಂದು ಶನಿವಾರ ಸಂಜೆ 6 ಗಂಟೆಗೆ ಬಳ್ಳಾರಿಯ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸಮಾರಂಭ ಹಮ್ಮಿಕೊಂಡಿದ್ದು, ಈ ಸಮಾರಂಭದಲ್ಲಿ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೀರ್ಲಗೊಂದಿ ಗ್ರಾಮದ ರಂಗಭೂಮಿ ಕಲಾವಿದರು ಹಾಗೂ ಜಾನಪದ ಕಲಾವಿದ ಡಾ.ರಾಮಚಂದ್ರಪ್ಪ ಎಸ್. ಅವರಿಗೆ ಗಣ್ಯರಿಂದ ರಾಜ್ಯಮಟ್ಟದ “ಹುಲಿಕುಂಟೆ ಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.