ಕನಕದಾಸರ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜಯಂತಿ ಆಚರಣೆಗೆ ಸಾರ್ಥಕ : ಪ್ರಗತಿಪರ ರೈತರು ಯಲ್ಲಪ್ಪ ಕೌಜಲಗಿ
ಗೋಕಾಕ : ನಾನು ಎನ್ನುವ ಭಾವನೆಯನ್ನು ಬಿಟ್ಟಾಗ ಮಾತ್ರ ಸ್ವರ್ಗವನ್ನು ಸೇರಬಹುದು, ನಾನು ನನ್ನದ್ದು ಎನ್ನದೇ ಎಲ್ಲ ನೀನೇ ನಿನ್ನದೇ ಎಂದು ಕನಕದಾಸರು ಬಾಳಿದವರು. ಅವರ ಮೂಲ ಸಿದ್ದಾಂತಗಳನ್ನು ಪ್ರಸ್ತುತ ಯುವ ಪೀಳಿಕೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಕನಕದಾಸರ ಜಯಂತಿ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಪ್ರಗತಿಪರ ರೈತರಾದ ಯಲ್ಲಪ್ಪ ಕೌಜಲಗಿ ಅವರು ಹೇಳಿದರು.
ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದಲ್ಲಿ ನಡೆದ ಕನಕದಾಸರು 536ನೇ ಜಯಂತಿ ಉತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತಮಾಡಿದರು.
ಮಹಾನ ವ್ಯಕ್ತಿಗಳ ಜಯಂತಿ ಆಚರಣೆ ಕೇವಲ ಆಚರಣೆ ಆಗಬಾರದು. ಪ್ರತಿಯೊಬ್ಬ ಮಾಹನ್ ವ್ಯಕ್ತಿಯು ತಮ್ಮದೇಯಾದ ಸಿದ್ದಾಂತಗಳನ್ನು-ನಿಯಮಗಳನ್ನು ಪಾಲಿಸಿ ಶ್ರೇಷ್ಠರಾಗಿರುತ್ತಾರೆ. ಅವರ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವುಗಳನ್ನು ಪಾಲನೆ ಮಾಡಿದರೆ ಜಯಂತಿ ಆಚರಣೆ ಫಲ ದೊರೆಯುತ್ತದೆ ಎಂದರು.
ದಾಸರಲ್ಲಿ ಶ್ರೇಷ್ಟರಾದ ಕನಕದಾಸರ ಜಯಂತಿಯನ್ನು ಕುರುಬ ಸಮಾಜದವರು ಮಾತ್ರವಲ್ಲದೇ ತಳಕಟನಾಳ ಗ್ರಾಮದ ಎಲ್ಲ ಸಮುದಾಯದ ಮುಖಂಡರು ಸೇರಿಕೊಂಡು ಆಚರಣೆ ಮಾಡಿದ್ದು ವಿಶೇಷವಾಗಿದೆ.
ಗ್ರಾಮದ ದುರ್ಗಾದೇವಿ ದೇವಸ್ಥಾನದಿಂದ ರೇವಣಸಿದ್ದೇಶ್ವರ ದೇವಸ್ಥಾನದ ವರೆಗೆ ಡಿ.ಜೆ ಸಾಂಗ್ ಹಚ್ಚಿ ಡ್ಯಾನ್ಸ್ ಮಾಡುತ್ತಾ ಕನಕದಾಸರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಪರಟ್ಟಿಯ ಶ್ರೀ ರೇವಣಸಿದ್ದೇಶ್ವರ ಮಠದ ಪೂಜ್ಯ ಗುರುಗಳಾದ ಬಸವರಾಜ ಹಿರೇಮಠ ಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಊರಿನ ಪ್ರಮುಖರಾದ , ನಿಂಗಪ್ಪ ದೊಡಮನಿ, ವಿರೂಪಾಕ್ಷ ಮುಂಗರವಾಡಿ, ಹಣಮಂತ ಅಜ್ಜನ್ನವರ, ಪುಂಡಲೀಕ ಕೌಜಲಗಿ, ಶಂಕರ ಕೌಜಲಗಿ, ಡಾ.ಲಕ್ಕಣ್ಣ ಸಿದ್ದಪ್ಪ ಕೌಜಲಗಿ, ಪ್ರಾಧ್ಯಾಪಕರಾದ ವಿಠ್ಠಲ್ ಕಣಿಲ್ದಾರ, ಶಿಕ್ಷಕರಾದ ಯಲ್ಲಪ್ಪ ನಂದಿ, ಶ್ರೀರಾಮ ಸೇನೆಯ ಸಂಜು ಬಾಗೇವಾಡಿ, ಲಕ್ಕಣ್ಣ ದುಂಡಪ್ಪ ಹುಲಕುಂದ, ನಾಗಪ್ಪ ಮಾದರ, ದಾನಪ್ಪ ತಂಬೂರಿ ಹಾಗೂ ತಳಕಟನಾಳ ಗ್ರಾಮ ಪಂಚಾಯತಿ ಸಧ್ಯಸ್ಯರು ಮತ್ತಿತರು ಉಪಸ್ಥಿತರಿದ್ದರು.