ಬೆಳಗಾವಿ ಉತ್ತರದಲ್ಲಿ ಸೈಲೆಂಟ್ ಆಗಿ ರಣತಂತ್ರ ಹೆಣೆದ ಜನಾರ್ಧನ ರೆಡ್ಡಿ
ಬೆಳಗಾವಿ ಉತ್ತರದಲ್ಲಿ ಕನ್ನಡಗಿನ ಕೈ ಹಿಡಿದ ರೆಡ್ಡಿ
ಬೆಳಗಾವಿ ಪಾಲಿಟಿಕ್ಸ್ ಕಾವೇರುತ್ತಿದ್ದು ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಸಸ್ಪೆನ್ಸ್ ರೀತಿಯಲ್ಲಿ ಬಿಡುಗಡೆ ಮಾಡುತ್ತಿವೆ, ಬೆಳಗಾವಿ ಉತ್ತರದಲ್ಲಿ ಟಿಕೆಟಗಾಗಿ ಮಹಾ ಪೈಪೋಟಿ ನಡೆದಿದ್ದು ಎಎಪಿ ಈಗಾಗಲೆ ಲಿಂಗಾಯತ ಮುಖಂಡನಿಗೆ ಮನೆ ಹಾಕಿದೆ.
ಇನ್ನು ಕೆಆರಪಿಪಿ ಪಕ್ಷದ ಗಾಲಿ ಜನಾರ್ಧನ ರೆಡ್ಡಿ ಅವರು ಬೆಳಗಾವಿಯ ಪ್ರವೀಣ ಹಿರೇಮಠ ಅವರ ಕೈ ಹಿಡಿದಿದ್ದು ,ಒಬ್ಬ NRE ಮತ್ತು ಪ್ರತಿಭಾವಂತ ಅಭ್ಯರ್ಥಿ ಹಾಗು ಮರ್ಚೆಂಟ್ ನೇವಿ ಅಧಿಕಾರಿಯವರ ಕೈಗೆ ಬೆಳಗಾವಿ ಉತ್ತರದ ಟಿಕೆಟ್ ನೀಡಿದ್ದಾರೆ.
ಪ್ರತಿಭಾವಂತ ಮತ್ತು ವಿದ್ಯಾವಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದ್ದ ಗಾಲಿ ಜನಾರ್ಧನ್ ರೆಡ್ಡಿ ನುಡಿದಂತೆ ನಡೆದಿದ್ದಾರೆ ಎಂದು ಪ್ರವೀಣ್ ಹೇಳಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹೆಸರು ಮನೆ ಮನೆಗೆ ತಲುಪುವಂತೆ ಮಾಡಿದ ಪ್ರವೀಣ ಮನೆ ಮಗನಂತೆ ಜನರ ಹೃದಯಗೆದ್ದಿದ್ದಾರೆ ಎಂದು ತಿಳಿಸಿದ್ದಾರೆ.
ಬಿರುಸಾಗಿ ಪ್ರಚಾರ ಪ್ರಾರಂಭ ಮಾಡಿರುವ ಪ್ರವೀಣ್ ಹಿರೇಮಠ ಪ್ರತಿ ಮನೆ ಮನೆಗೆ ತೆರಳಿ ಪಕ್ಷದ ಅರಿವು ಮತ್ತು ಪಕ್ಷದ ಬಗ್ಗೆ ಮನವರಿಕೆ ಮೂಡಿಸಿದ್ದಾರೆ.
ಅನೇಕ ಯೋಜನೆಗಳ ಮೂಲಕ ಜನ ಮನ ಗೆದ್ದಿರುವ ಪ್ರವೀಣ ನಮ್ಮ ನಾಡು ಸಂಸ್ಕೃತಿ ಮತ್ತು ಅಪಾರ ದೇಶಾಭಿಮಾನ ಹೊಂದಿದ್ದಾರೆ , 86 ಕಿಂತ ಹೆಚ್ಚು ದೇಶಗಳ ನೀರು ಕುಡಿದಿರುವ ಪ್ರವೀಣ ಅಲ್ಲಿನ ಜನಸಹಾಯ ಯೋಜನೆ ಮತ್ತು ಅಲ್ಲಿನ ವ್ಯವಸ್ಥೆ ಬಗ್ಗೆ ಸಂಪೂರ್ಣವಾಗಿ ಅರಿತಿರುವುದಾಗಿ ತಿಳಿಸಿದ್ದಾರೆ.
ಅಣ್ಣ ಬಸವಣ್ಣವರ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ! ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ! ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ! ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ ಎಂದು ಹೇಳುವ ಮೂಲಕ ಜಾತಿ ಮತ ಭೇದ ಅನ್ನದೆ ಸಮಾನ ದ್ಯೆಯಯೊಂದಿಗೆ ಎಲ್ಲರೊಂದಿಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಕೆಲಸಮಾಡಿ ಜನರ ಹೃದಯದಲ್ಲಿ ಉಳಿದುಕೊಳ್ಳುವುದಾಗಿ ಪ್ರವೀಣ ಶಪಥ ಮಾಡಿದ್ದಾರೆ.
ನಿಮ್ಮ ಪಕ್ಷದವತಿಯಿಂದ ಬೆಳಗಾವಿ ಹಾಗು ಕರ್ನಾಟಕ ಜನತೆಗೆ ಸಿಗುವ ಲಾಭಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರವೀಣ ಹಿರೇಮಠ
ಮುಖ್ಯವಾಗಿ
ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆ ,
ಪ್ರತಿ ವಾರ್ಡ ಅಥವಾ ಏರಿಯಾಗಳಲ್ಲಿ ಮೆಡಿಕಲ ಸ್ಟೇಷನ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ.
ಬೆಳಗಾವಿ ಪರಿಸರದ ಬಗ್ಗೆ ನೆನೆದ ಪ್ರವೀಣ ಬೆಳಗಾವಿಯಲ್ಲಿನ ಗಿಡ ಮರ ಮತ್ತು ಇಲ್ಲಿನ ಪರಿಸರ ಕಾಪಾಡಲು ಎಲ್ಲ ಕ್ರಮ ತೆಗೆದು ಕೊಲ್ಲುವುದಾಗಿ ಹೇಳಿದ್ದಾರೆ
ತಾಂತ್ರಿಕ ಯೂನಿವರ್ಸಿಟಿ ಹೊಂದಿರುವ ಬೆಳಗಾವಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೆಲಸಕ್ಕಾಗಿ ಅನ್ಯ ನಗರಗಳಿಗೆ ಹೋಗುವಂತಾಗಿದೆ ಇದನ್ನು ಅರಿತ ಪ್ರವೀಣ ಬೆಳಗಾವಿಯಲ್ಲಿ ಮೊದಲೆನೆಯದಾಗಿ ಐಟಿ ಬಿಟಿ ಕಂಪನಿಗಳು ಬರುವಂತೆ ಮಾಡಿ ಪ್ರತಿ ವಿದ್ಯಾರ್ಥಿ ಕೆಲಸ ಗಿಟ್ಟಿಸಿಕೊಳ್ಳುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈಗಾಗಲೇ ಅನೇಕ ಮಹಿಳೆಯರು ಮತ್ತು ಯುವಕ ಯುವತಿಯರು ಕೆಆರಪಿಪಿ ಪಕ್ಷ ಸೇರಲು ಮುಂದಾಗಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಅವರೆಲ್ಲರನ್ನು ರಾಜ್ಯಾಧ್ಯಕ್ಷರ ಸಮ್ಮುಕದಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳುವುದಾಗಿ ಪ್ರವೀಣ್ ಹಿರೇಮಠ ತಿಳಿಸಿದ್ದಾರೆ.