ವಿಶ್ವ ಪರಿಸರ ದಿನಾಚಾರಣೆ ಅಂಗವಾಗಿ ಪ್ರಾಣವಾಯು : ತುಳಸಿ ಹಾಗೂ ಪಾರಿಜಾತ ಸಸಿಗಳ ಬಳಕೆ
ನಗರದ ಬಸವಣ ಕುಡಚಿಯಲ್ಲಿರುವ ನಾಗನೂರ ಶ್ರೀ ಬಸವೇಶ್ವರ ಟ್ರಸ್ಟಿನ್ ಚನ್ನಮ್ಮಾ ಬಸ್ಸಯ್ಯಾ ಹಿರೇಮಠ ವೃದ್ದಾಶ್ರಮದಲ್ಲಿ ಜೂನ 12 ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವೃದ್ದಾಶ್ರಮದ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ತುಳಸಿ ಹಾಗೂ ಪಾರಿಜಾತ ಸಸಿಗಳನ್ನು ನೆಟ್ಟು ವಿಶೇಷ ರೀತಿಯಲ್ಲಿ ಪರಿಸರ ದಿನ ಆಚರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಮಾಜಿಕ ಹಾಗೂ ಪರಿಸರವಾದಿ ವಿರೇಶ ಹಿರೇಮಠ ಅವರು ಮಾತನಾಡಿ ಪ್ರಕೃತಿ ಮಾತೆ ನಮಗೆ ಅನೇಕ ಔಷದಿ ಗುಣಗಳನ್ನು ಈ ಪರಿಸರದಲ್ಲಿನ ಮರ-ಗಿಡಗಳಿಗೆ ನೀಡಿದ್ದಾಳೆ ಅದನ್ನು ನಾವು ಉಳಿಸುವ ಜವಾಬ್ದಾರಿ ಸಮಾಜದಲ್ಲಿ ಪ್ರತಿಯೊಬ್ಬರದ್ದು ಆಗಿದೆ ಎಂದು ತಿಳಿಸಿದರು.
ಪ್ರಾಣವಾಯು ಎಂದೇ ಖ್ಯಾತಿಯಾದ ತುಳಸಿ ಗಿಡ ಅನೇಕ ರೋಗಗಳಿಗೆ ಮದ್ದಾಗಿದ್ದು ಇದು ಪರಿಸರದಲ್ಲಿನ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾಗಳನ್ನು ತಡೆಯುವ ವಿಶೇಷವಾದ ಗುಣ ಹೊಂದಿದೆ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಪರಿಸರದಲ್ಲಿ ಈ ಸಸಿಗಳ ಬಳಕೆ ಮಾಡಬೇಕೆಂದು ಸಲಹೆ ನೀಡಿದರು.
ಪಾರಂಪರಿಕವಾಗಿ ತುಳಸಿ ಗಿಡ ತನ್ನದೇ ಆದ ಮಹತ್ವವನ್ನು ಪಡೆದಿದೆ ಇದು ಆರೋಗ್ಯಕರ ಹಾಗೂ ವಾತವರಣದಲ್ಲಿನ ವಾಯುವನ್ನು ಶುದ್ದಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು.
ಪರಿಸರ ದಿನ ಕೇವಲ ಒಂದು ದಿನ ಮಾತ್ರ ಸಿಮಿತವಾಗದೆ ಅದು ಪ್ರತಿ ದಿನ ಪರಿಸರ ದಿನ ಎಂದು ಅಳವಡಿಸಿಕೊಂಡು ಪರಿಸರ ಸೇವೆಗೆ ಪ್ರತಿಯೊಬ್ಬರ ಮುಂದೆ ಬಂದು ಪರಿಸರ ಉಳಿವಿಗಾಗಿ ಜವಾಬ್ದಾರಿ ಹೊತ್ತುಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಆಯೋಜಕರಾದ ಎಂ.ಎಸ್ ಚೌಗಲಾ, ಪರಿಸರವಾದಿ, ವಿ.ಜಿ. ಜಿನಗೌಂಡ, ಎಂ ನವಲಗುಂದ, ಜಾನಕಿ, ಅಲ್ಲಾಭಕ್ಷ ಹಾಗೂ ವೃದ್ದಾಶ್ರಮದ ಹಿರಿಯ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.